HDK ಬಿಡದಿಯ ತೋಟದ ನಿವಾಸದಲ್ಲಿ ಹಬ್ಬದ ಸಂಭ್ರಮ.. ಮಾಜಿ ಸಿಎಂರನ್ನು ಭೇಟಿಯಾದ ಬಾಲ ಗಣೇಶ

HDK ಬಿಡದಿಯ ತೋಟದ ನಿವಾಸದಲ್ಲಿ ಹಬ್ಬದ ಸಂಭ್ರಮ.. ಮಾಜಿ ಸಿಎಂರನ್ನು ಭೇಟಿಯಾದ ಬಾಲ ಗಣೇಶ

ರಾಮನಗರ: ಇಂದು ರಾಜ್ಯದ ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ. ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಮನೆಯಲ್ಲೂ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂದ ಸದಸ್ಯರ ಜೊತೆಗೆ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡ್ತಿದ್ದಾರೆ.

ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಕುಟುಂಬಸ್ಥರೊಂದಿಗೆ ತಮ್ಮ ಬಿಡದಿ ತೋಟದ ಮನೆಯಲ್ಲಿ ಸರಳವಾಗಿ ಗೌರಿ ಹಬ್ಬವನ್ನು ಆಚರಿಸುತ್ತಿದ್ದಾರೆ.  ಇದೇ ವೇಳೆ ಇನ್ನು, ಬಾಲಕನೋರ್ವ ಗಣೇಶನ ವೇಷ ಧರಿಸಿ ಎಚ್​.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾನೆ. ಗಣೇಶನ ವೇಷ ಧರಿಸಿದ ಬಾಲಕನನ್ನು ಎಚ್​.ಡಿ ಕುಮಾರಸ್ವಾಮಿ ಮಾತಾಡಿಸಿ ಸಂತಸ ವ್ಯಕ್ತಪಡಿಸಿದ್ದು ಬಹಳ ವಿಶೇಷವಾಗಿತ್ತು.

blank

Source: newsfirstlive.com Source link