ಕೊನೆಗೂ 10 ವರ್ಷಗಳ ಬಳಿಕ ಡುಂ ಟಕ ಡುಂ.. ಕನ್ಯೆಯನ್ನೇ ಕೊಡದ ಊರಿಗೆ ಇದೀಗ ಶಾದಿ ಭಾಗ್ಯ

ಕೊನೆಗೂ 10 ವರ್ಷಗಳ ಬಳಿಕ ಡುಂ ಟಕ ಡುಂ.. ಕನ್ಯೆಯನ್ನೇ ಕೊಡದ ಊರಿಗೆ ಇದೀಗ ಶಾದಿ ಭಾಗ್ಯ

ಗದಗ: ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದ ಯುವಕರಿಗೆ, ಜಮೀನು, ನೌಕರಿ ಎಲ್ಲವೂ ಇದೆ. ಆದ್ರೆ, ಈ ಊರಿನಲ್ಲಿ ಸರಿ ಸುಮಾರು 100ಕ್ಕೂ ಹೆಚ್ಚು ಜನ ಯುವಕರಿಗೆ ಮದುವೆನೇ ಆಗಿಲ್ಲ. ಬಹುತೇಕರು ನಲ್ವತ್ತರ ಆಸುಪಾಸಿನಲ್ಲಿದ್ರೂ, ರಾಹುಲ್ ಗಾಂಧಿ, ಸಲ್ಮಾನ್ ಖಾನ್ ರೀತಿ ಇನ್ನೂ ಕುಮಾರರಾಗಿಯೇ ಇದ್ದಾರೆ. ಅದಕ್ಕೆ ಕಾರಣ, ಗ್ರಾಮದ ಜನರಿಗೆ ವಾಸಿಸೋಕೆ ಯೋಗ್ಯವಾದ ಒಂದೇ ಒಂದು ಮನೆ ಇರಲಿಲ್ಲ. ಇದ್ರಿಂದ, ಇಲ್ಲಿನ ಯುವಕರಿಗೆ ಯಾರೂ ಕನ್ಯೆಯನ್ನೇ ಕೊಡ್ತಿರಲಿಲ್ವಂತೆ.

blank

ಈ ಬಗ್ಗೆ ನ್ಯೂಸ್​ಫಸ್ಟ್, ಸುದೀರ್ಘ ವರದಿ ಪ್ರಸಾರ ಮಾಡಿತ್ತು. ಇದೀಗ, ಎಚ್ಚೆತ್ತ ಜಿಲ್ಲಾಡಳಿತ ಗ್ರಾಮದ ಎಲ್ಲ ಜನರಿಗೆ ಮನೆ ಹಕ್ಕು ಪತ್ರ ಹಂಚಿಕೆ ಮಾಡಿದೆ. ಗದಗ ಎಸಿ ರಾಯಪ್ಪ ಅವರು ಖುದ್ದು ಗ್ರಾಮಕ್ಕೆ ಭೇಟಿಯಾಗಿ ಮನೆ ಪತ್ರ ಹಂಚಿಕೆ ಮಾಡಿದ್ದಾರೆ. ಇದ್ರಿಂದ, ಗ್ರಾಮಸ್ಥರು ಫುಲ್ ಖುಷಿ ಆಗಿದ್ದು, ನ್ಯೂಸ್​ಫಸ್ಟ್​ಗೆ ಧನ್ಯವಾದ ಅರ್ಪಿಸಿದ್ದಾರೆ.

blank

ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿ 2009ರಲ್ಲಿಯೇ ಈ ಗ್ರಾಮಸ್ಥರು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ರು. ಆ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರಿಗಾಗಿ ಕಟ್ಟಿಸಿದ್ದ ಸುಮಾರು 500 ಮನೆಗಳನ್ನ ಇನ್ನೂ ಹಂಚಿಕೆ ಮಾಡಿರಲಿಲ್ಲ. ಯಾಕಂದ್ರೆ, ಈ ಭಾಗದ ಶಾಸಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಕ್ಕು ಪತ್ರ ವಿತರಿಸಿರಲಿಲ್ಲ. ಇದೀಗ, ನ್ಯೂಸ್​ಫಸ್ಟ್​ ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ, ಮನೆ ಹಕ್ಕು ಪತ್ರ ವಿತರಿಸಿ, ಯುವಕರಿಗೆ ಮದುವೆ ಭಾಗ್ಯ ಕರುಣಿಸಿದೆ.

ಒಟ್ಟಾರೆ.. ಹತ್ತು ವರ್ಷಗಳಿಂದ ಸಂಗಾತಿ ಕೈ ಹಿಡಿಯೋ ಭಾಗ್ಯವೇ ಸಿಗದೇ ಇದ್ದವರ ಬಾಳಲ್ಲಿ ಇದೀಗ ಶುಭಗಳಿಗೆ ಬಂದಿದೆ. ಇನ್ಮುಂದೆ ನಮ್ಮ ಮಕ್ಕಳಿಗೂ ಮದುವೆ ಆಗಿ, ಸೊಸೆ ಮನೆಗೆ ಬರ್ತಾಳೆ ಅಂತ ಪೋಷಕರು ಸಂತಸಗೊಂಡಿದ್ದಾರೆ.

ವಿಶೇಷ ಬರಹ: ಸುರೇಶ್ ಕಡ್ಲಿಮಟ್ಟಿ, ನ್ಯೂಸ್​ಫಸ್ಟ್​​, ಗದಗ

blank

Source: newsfirstlive.com Source link