ಟೀಂ ಇಂಡಿಯಾ ಎಲ್ಲಾ ಆಟಗಾರರ ಕೋವಿಡ್​​ ವರದಿ ನೆಗೆಟಿವ್​​ -ಪಂದ್ಯ ನಡೆಯೋದು ಕನ್ಫರ್ಮ್​

ಟೀಂ ಇಂಡಿಯಾ ಎಲ್ಲಾ ಆಟಗಾರರ ಕೋವಿಡ್​​ ವರದಿ ನೆಗೆಟಿವ್​​ -ಪಂದ್ಯ ನಡೆಯೋದು ಕನ್ಫರ್ಮ್​

5ನೇ ಟೆಸ್ಟ್​ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಎದುರಾಗಿದ್ದ ಆತಂಕ ದೂರವಾಗಿದೆ ಟೀಮ್ ಇಂಡಿಯಾದ ಜೂನಿಯರ್ ಫಿಸಿಯೊ ಯೋಗೇಶ್​ಗೆ ಕೊರೊನಾ ಸೋಂಕುಕಾಣಿಸಿಕೊಂಡಿದ್ದರಿಂದ ಅಂತಿಮ ಟೆಸ್ಟ್ ​​ನಡೆಯೋ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಆದ್ರೆ, ಟೀಮ್ ಇಂಡಿಯಾ ಆಟಗಾರರಿಗೆ ನಡೆಸಿದ ಆರ್‌ಟಿ–ಪಿಸಿಆರ್ ಟೆಸ್ಟ್​ನ ವರದಿಯಲ್ಲಿ ಎಲ್ಲಾ 21 ಆಟಗಾರರ ನೆಗಟಿವ್ ಬಂದಿದಿದ್ದು, ಅಂತಿಮ ಟೆಸ್ಟ್​ಗೆ ಎದಿರಾಗಿದ್ದ ವಿಘ್ನ ದೂರವಾಗಿದೆ.

ಟೀಮ್ ಇಂಡಿಯಾ ಹೆಡ್​ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್​ ಭರತ್ ಅರುಣ್​​, ಫೀಲ್ಡಿಂಗ್ ಕೋಚ್ ಶ್ರೀಧರ್​​​ ಹಾಗೂ ಫಿಸಿಯೊ ನಿತಿನ್ ಪಟೇಲ್​, 4ನೇ ಪಂದ್ಯದ ವೇಳೆಯೇ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಈ ಬೆನ್ನಲ್ಲೇ ಜೂನಿಯರ್​​ ಯೋಗೇಶ್ ಪರ್ಮಾರ್​​ಗೂ ಸೋಂಕು ಕಾಣಿಸಿಕೊಂಡಿತ್ತು. ​​ ಹೀಗಾಗಿ ನಿನ್ನೆ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ಶಿಭಿರವನ್ನೂ ಮೊಟಕುಗೊಳಿಸಿದ್ದರು.

Source: newsfirstlive.com Source link