ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

ಗ್ವಾಲಿಯರ್: ಕುಡಿದ ಅಮಲಿನಲ್ಲಿ 22 ವರ್ಷದ ಮಾಡೆಲ್ ಒಬ್ಬಳು ಸೇನಾ ವಾಹನದ ಮೇಲೆ ದಾಳಿ ನಡೆಸಿ ರಂಪಾಟ ಮಾಡಿರುವ ಘಟನೆ ಬುಧವಾರ ರಾತ್ರಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಯುವತಿ ದೆಹಲಿ ಮೂಲದ ಮಾಡೆಲ್ ಆಗಿದ್ದು, ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಸೃಷ್ಟಿಸಿ, ಸೇನಾ ವಾಹನವನ್ನು ನಿಲ್ಲಿಸಿ ಅದರ ಮೇಲೆ ದಾಳಿ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: 10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ

delhi model

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವತಿ ಸೇನೆಯ ವಾಹನವನ್ನು ನಿಲ್ಲಿಸಿ ಹೆಡ್‍ಲೈಟ್‍ಗೆ ಪದೇ, ಪದೇ ಒದ್ದು, ಹಾನಿಗೊಳಿಸಿದ್ದಾಳೆ. ಅಲ್ಲದೇ ಆಕೆಯನ್ನು ತಡೆಯಲು ಬಂದ ಸೇನಾಧಿಕಾರಿಯನ್ನು ಹಿಂದಕ್ಕೆ ತಳ್ಳಿದ್ದಾಳೆ ಮತ್ತು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾಳೆ. ಇನ್ನೂ ಈ ಘಟನೆ ಪಡವ್ ಪೊಲೀಸ್ ಠಾಣೆಗೆ ವರದಿಯಾಗುತ್ತಿದ್ದಂತೆಯೇ, ಮಹಿಳಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಕರೆದೊಯ್ದಿದ್ದಾರೆ.  ಇದನ್ನೂ ಓದಿ: ‘ಧಾರವಾಡಿ ಎಮ್ಮೆ’ ತಳಿಗೆ ದೊರೆತಿದೆ ರಾಷ್ಟ್ರಮಟ್ಟದ ಮಾನ್ಯತೆ!

ಈ ಕುರಿತಂತೆ ಪಡವ್ ಪೊಲೀಸ್ ಠಾಣೆಯ ಉಸ್ತುವಾರಿ ವಿವೇಕ್, ಯುವತಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾಳೆ. ಸೇನೆಯ ಕಡೆಯಿಂದ ಯಾವುದೇ ದೂರುಗಳಿಲ್ಲ. ಇದೀಗ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆಕೆಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಯಿಂದ ಗ್ವಾಲಿಯರ್‌ಗೆ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರು ಬಂದಿದ್ದು, ನಗರದ ಹೋಟೆಲ್‍ನಲ್ಲಿ ತಂಗಿರುವುದಾಗಿ ತಿಳಿಸಿದ್ದಾರೆ.

Source: publictv.in Source link