ಅಫ್ಘಾನ್​​ ಬಿಕ್ಕಟ್ಟು: ಅಮೆರಿಕಾ ಮತ್ತು ರಷ್ಯಾ ಅಧಿಕಾರಿಗಳೊಂದಿಗೆ ಅಜಿತ್​​ ದೋವಲ್​​ ಮಹತ್ವದ ಚರ್ಚೆ

ಅಫ್ಘಾನ್​​ ಬಿಕ್ಕಟ್ಟು: ಅಮೆರಿಕಾ ಮತ್ತು ರಷ್ಯಾ ಅಧಿಕಾರಿಗಳೊಂದಿಗೆ ಅಜಿತ್​​ ದೋವಲ್​​ ಮಹತ್ವದ ಚರ್ಚೆ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​​​ ಸರ್ಕಾರ ರಚನೆಯಾಗಿದೆ. ಮೋಸ್ಟ್​​ ವಾಟೆಂಡ್​​​ ಟೆರರಿಸ್ಟ್​ಗಳೇ ಸರ್ಕಾರದ ಅಧ್ಯಕ್ಷರು ಮತ್ತು ಸಚಿವರು ಆಗಿದ್ದಾರೆ. ಹೀಗಿರುವಾಗಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​​ ದೋವಲ್ ವಿಶ್ವದ ಖ್ಯಾತ ಗೂಢಾಚಾರಿಗಳನ್ನು ಭೇಟಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ.

ದೆಹಲಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ರಷ್ಯಾದ ಸಹವರ್ತಿ ಜನರಲ್​​​ ನಿಕೋಲಾಯ್​​ ಪತ್ರುಶೇಷ್​​ ಅವರನ್ನು ಭೇಟಿ ಮಾಡಿ ಅಫ್ಘಾನ್​​ ಬಿಕ್ಕಟ್ಟು ಕುರಿತು ಚರ್ಚಿಸಿದ್ದಾರೆ. ಅಲ್ಲದೇ ಅಮೆರಿಕಾದ ಕೇಂದ್ರೀಯ ಗುಪ್ತಚರ ವಿಭಾಗ ನಿರ್ದೇಶಕರಾದ ವಿಲಿಯಂ ಬರ್ನ್ಸ್​​​ ಅವರೊಂದಿಗೂ ಈ ವಿಚಾರದ ಕುರಿತು ಮಾತುಕತೆ ನಡೆಸಿದ್ದಾರೆ.

ಯುಎಸ್​​, ಯುಕೆ ಮತ್ತು ರಷ್ಯಾ ಅಧಿಕಾರಿಗಳೊಂದಿಗೆ ಚರ್ಚಿಸಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​​ ದೋವಲ್, ಅಫ್ಘಾನ್​​ ಬಿಕ್ಕಟ್ಟು ಸಮಸ್ಯೆ ಕುರಿತು ಚರ್ಚಿಸಿ ಶಾಶ್ವತ ಸಮಿತಿ ರಚನೆ ಮಾಡಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನ ಕರೆತರಲು ಫೀಲ್ಡ್​ಗೆ ಇಳಿದ ಅಜಿತ್ ದೋವಲ್

Source: newsfirstlive.com Source link