ಟೈರ್​ ಬ್ಲಾಸ್ಟ್​ ಆಗಿ ಬೈಕ್​ಗೆ ಗುದ್ದಿದ ಬೊಲೇರೋ- ಮೂವರು ಬೈಕ್​ ಸವಾರರ ದುರ್ಮರಣ

ಟೈರ್​ ಬ್ಲಾಸ್ಟ್​ ಆಗಿ ಬೈಕ್​ಗೆ ಗುದ್ದಿದ ಬೊಲೇರೋ- ಮೂವರು ಬೈಕ್​ ಸವಾರರ ದುರ್ಮರಣ

ದಾವಣಗೆರೆ: ಬುಲೆರೋ ವಾಹನ ಬೈಕ್ ಗೆ ಡಿಕ್ಕಿಯಾಗಿ ಮೂವರು ಬೈಕ್​ ಸವಾರರು ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.

ಬೈಕ್ ನಲ್ಲಿದ್ದ ಅಜ್ಜಯ್ಯ(18) ಮಂಜುನಾಥ್ (17) ದೇವರಾಜ್ (17) ಮೃತರು. ಜಿಲ್ಲೆಯ ಚನ್ನಗಿರಿ ತಾಲೂಕು ಹೊನ್ನೇಭಾಗಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬೈಕ್ ಹಿಂದೆ ಬರುತಿದ್ದ ಬುಲೆರೋ ವಾಹನದ ಟೈಯರ್ ಬ್ಲಾಸ್ಟ್​ ಆದ ಪರಿಣಾಮ ಬುಲೆರೋ, ಬೈಕ್ ಗೆ ಗುದ್ದಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇನ್ನು ಮೃತ ಯುವಕರು ಮಲ್ಲೇಶಪುರ ನಿವಾಸಿಗಳು ಎನ್ನಲಾಗಿದ್ದು, ಗಣಪತಿ ಪ್ರತಿಷ್ಠಾನ ಕ್ಕೆ ಅನುಮತಿ ಪಡೆಯಲು ಚನ್ನಗಿರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲಿಯೇ ಓರ್ವ ಯುವಕ ಮೃತಪಟ್ಟರೆ, ಇನ್ನಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Source: newsfirstlive.com Source link