ಇಂಡೋ-ಇಂಗ್ಲೆಂಡ್​ ಅಂತಿಮ​ ಕದನ -ಮೈಲಿಗಲ್ಲು ನಿರ್ಮಿಸೋಕೆ ಕೊಹ್ಲಿ ಪಡೆ ರೆಡಿ

ಇಂಡೋ-ಇಂಗ್ಲೆಂಡ್​ ಅಂತಿಮ​ ಕದನ -ಮೈಲಿಗಲ್ಲು ನಿರ್ಮಿಸೋಕೆ ಕೊಹ್ಲಿ ಪಡೆ ರೆಡಿ

ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್​​ ಸರಣಿ ಗೆಲ್ಲುವ ಎಲ್ಲಾ ಅವಕಾಶ ವಿರಾಟ್​ ಕೊಹ್ಲಿ ಮುಂದಿದೆ. ಇಂದಿನಿಂದ ಆರಂಭವಾಗಲಿರುವ ಪಂದ್ಯ ಗೆದ್ದರೆ ಕೊಹ್ಲಿ ಹೆಸರಲ್ಲಿ ಐತಿಹಾಸಿಕ ದಾಖಲೆ ದಾಖಲಾಗಲಿದೆ. ಹಾಗಾದ್ರೆ ಕೊಹ್ಲಿ ಆಂಗ್ಲರ ನೆಲದಲ್ಲಿ ಬರೆಯುವ ದಾಖಲೆಯಾದರೂ ಏನು.? ಬನ್ನಿ ನೋಡೋಣ

ಇಂಡೋ-ಇಂಗ್ಲೆಂಡ್​ ನಡುವಿನ ಅಂತಿಮ ಕದನಕ್ಕೆ ಮ್ಯಾಂಚೆಸ್ಟರ್​​ನಲ್ಲಿ ವೇದಿಕೆ ಸಿದ್ಧವಾಗಿದೆ. ಅತ್ತ ಸರಣಿಯನ್ನ ಉಳಿಸಿಕೊಳ್ಳುವ ತವಕದಲ್ಲಿ ಟೀಮ್​ ಇಂಡಿಯಾ ಇದ್ರೆ, ಇತ್ತ ಸರಣಿ ಸಮಬಲ ಸಾಧಿಸಿ ತವರಿನಲ್ಲಿ ಸೋಲಿನ ಮುಖಭಂಗದಿಂದ ತಪ್ಪಿಸಿಕೊಳ್ಳಲು ಇಂಗ್ಲೆಂಡ್​ ಸಿದ್ಧತೆ ಮಾಡಿಕೊಂಡಿದೆ. ಹಾಗಾಗಿ ಈ ಫೈನಲ್​​ ಫೈಟ್​​ ತುಂಬಾ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

blank

ಸದ್ಯ ಇಂಗ್ಲೆಂಡ್​ ವಿರುದ್ಧ ಆಡಿರುವ 4 ಪಂದ್ಯಗಳ ಪೈಕಿ ಭಾರತ 2-1ರಿಂದ ಮುನ್ನಡೆ ಸಾಧಿಸಿರುವ ಭಾರತ, ಟೆಸ್ಟ್​ ಸರಣಿ ಗೆಲ್ಲೋ ಲೆಕ್ಕಾಚಾರದಲ್ಲಿದೆ. ಈಗಾಗಲೇ ಅತಿ ಹೆಚ್ಚು ಟೆಸ್ಟ್​​​ ಪಂದ್ಯಗಳನ್ನ ಗೆದ್ದ ಭಾರತದ ಮೊದಲ ನಾಯಕ ಎಂಬ ಖ್ಯಾತಿಗೆ ಒಳಗಾಗಿರೋ ಕೊಹ್ಲಿ ಕೂಡ ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಪಂದ್ಯ ಗೆದ್ದರೆ ಆಂಗ್ಲರ ನಾಡಲ್ಲಿ ಸರಣಿ​​​ ಜಯಿಸಿದ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್​ ಕೊಹ್ಲಿ ಪಾತ್ರರಾಗಲಿದ್ದಾರೆ.

1932ರಿಂದ ಭಾರತ – ಇಂಗ್ಲೆಂಡ್​ ನಡುವೆ ದ್ವಿಪಕ್ಷೀಯ ಸರಣಿಗಳು ನಡೀತಿವೆ. ಈವರೆಗೂ 35 ದ್ವಿಪಕ್ಷೀಯ ಸರಣಿಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಅದರಲ್ಲಿ 18 ಸರಣಿಗಳನ್ನ ಭಾರತ – ಇಂಗ್ಲೆಂಡ್​ ನೆಲದಲ್ಲೇ ಆಡಿದ್ದು, ಈಗ ಆಡ್ತಿರೋದು 19ನೇ ಸರಣಿ. ಆದರೆ ಇಷ್ಟು ಸರಣಿಗಳಲ್ಲಿ ಭಾರತ ಗೆದ್ದಿರೋದು ಮೂರು ಸಲ ಮಾತ್ರ. ಅಜಿತ್​​ ವಾಡೇಕರ್ ನೇತೃತ್ವದಲ್ಲಿ ಭಾರತ 1971ರಲ್ಲಿ ಮೊದಲ ಸರಣಿ ಗೆದ್ದಿದ್ರೆ, 1986ರಲ್ಲಿ 2-0 ಅಂತರದಲ್ಲಿ ಎರಡನೇ ಮತ್ತು 2007ರಲ್ಲಿ 1-0 ಅಂತರದಲ್ಲಿ ಭಾರತ ಮೂರನೇ ಸರಣಿಯನ್ನ ಗೆದ್ದಿದೆ. ಅದಾದ ಬಳಿಕ ಈವರೆಗೂ ಸರಣಿ ಗೆದ್ದಿಲ್ಲ. ಆದರೀಗ ಸರಣಿ ಗೆದ್ದು ಮೈಲಿಗಲ್ಲು ಸೃಷ್ಟಿಸುವ ಸದಾವಕಾಶ ಕೊಹ್ಲಿ ಮುಂದಿದೆ.

blank

ಟೀಮ್​ ಇಂಡಿಯಾದಲ್ಲಿ ರಹಾನೆ ಹೊರತುಪಡಿಸಿದರೆ ಎಲ್ಲರೂ ಉತ್ತಮ ಫಾರ್ಮ್​​ನಲ್ಲಿದ್ದಾರೆ. ರೋಹಿತ್​​-ರಾಹುಲ್​ ಐತಿಹಾಸಿಕ ಲಾರ್ಡ್ಸ್​​ ಮತ್ತು ಓವಲ್​​​ ಪಿಚ್​ಗಳಲ್ಲಿ ಶತಕ ಸಿಡಿಸಿ ತಂಡಕ್ಕೆ ಗೆಲುವಿನ ಭರವಸೆ ಹೆಚ್ಚಿಸಿದ್ದಾರೆ. ಜೊತೆಗೆ ಪೂಜಾರ- ಕೊಹ್ಲಿ, ಪಂತ್​​ ಕೂಡ ಲಯಕ್ಕೆ ಮರಳಿದ್ದಾರೆ. ಬೌಲಿಂಗ್​​ನಲ್ಲೂ ಉಮೇಶ್​, ಬೂಮ್ರಾ, ಸಿರಾಜ್​, ಶಾರ್ದೂಲ್​ ಸ್ಪೆಲ್​, ಅದ್ಭುತವಾಗಿ ವರ್ಕೌಟ್​ ಆಗ್ತಿದೆ. ಹಾಗಾಗಿ ಮ್ಯಾಂಚೆಸ್ಟರ್​ ಟೆಸ್ಟ್​​ ಗೆಲ್ಲೋ ಎಲ್ಲಾ ಸಾಧ್ಯತೆ ಕೊಹ್ಲಿ ಮುಂದಿದೆ.

Source: newsfirstlive.com Source link