ಆಪರೇಷನ್​​ ಕಮಲ; ಎಲ್ಲೂ ಹೋಗದೆ ರೆಸಾರ್ಟ್​ನಲ್ಲೇ ಉಳಿದುಕೊಂಡ ಕಲಬುರಗಿ JDS ಕಾರ್ಪೊರೇಟರ್​​ಗಳು

ಆಪರೇಷನ್​​ ಕಮಲ; ಎಲ್ಲೂ ಹೋಗದೆ ರೆಸಾರ್ಟ್​ನಲ್ಲೇ ಉಳಿದುಕೊಂಡ ಕಲಬುರಗಿ JDS ಕಾರ್ಪೊರೇಟರ್​​ಗಳು

ಬೆಂಗಳೂರು: ಇತ್ತೀಚೆಗಿನ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ನಾಲ್ವರು ಜೆಡಿಎಸ್​ ಕಾರ್ಪೊರೇಟರ್​​ಗಳು ಆಪರೇಷನ್​​ ಕಮಲದ ಭೀತಿಯಿಂದ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಯಾರಿಗೆ ಬೆಂಬಲ ನೀಡಬೇಕು ಎಂದು ಸೆಪ್ಟೆಂಬರ್​​ 7ನೇ ತಾರೀಕಿನಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ ಪಾಲಿಕೆ ಸದದ್ಯರು ಇನ್ನೂ ನಗರದ ಈಗಲ್​​ ಟನ್​​​ ರೆಸಾರ್ಟ್​ನಲ್ಲೇ ಉಳಿದುಕೊಂಡಿದ್ದಾರೆ.

blank

ಕಳೆದ ನಾಲ್ಕ ದಿನಗಳಿಂದ ಈಗಲ್​​ ಟನ್​​​ ರೆಸಾರ್ಟ್​ನಲ್ಲೇ ಉಳಿದುಕೊಂಡಿರುವ ಜೆಡಿಎಸ್​​​​ ಕಾರ್ಪೊರೇಟರ್​​ಗಳು ಈಗ ಕಿಂಗ್​​ ಮೇಕರ್ಸ್​. ಕಲಬುರಗಿ ಪಾಲಿಕೆಯಲ್ಲಿ ಯಾರೇ ಗದ್ದುಗೆ ಹಿಡಿಯಬೇಕು ಎಂದರೂ ಇವರ ಬೆಂಬಲ ಅನಿವಾರ್ಯ. ನಮಗೆ ಮೇಯರ್​ ಸ್ಥಾನ ನೀಡಿದರೆ ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲ ನೀಡ್ತೀವಿ ಎಂದಿದ್ದರು.

ಇನ್ನು, ಇತ್ತ ಬಿಜೆಪಿಯೂ ನಿಮ್ಮನ್ನು ಮೇಯರ್​​ ಮಾಡ್ತೀವಿ ಎಂದು ಆಫರ್​​ ನೀಡಿದೆ. ಎಲ್ಲಿ ನಮ್ಮನ್ನು ಆಪರೇಷನ್​​​ ಕಮಲ ಮಾಡುತ್ತಾರೋ ಎಂಬ ಭೀತಿಯಿಂದ ಜೆಡಿಎಸ್​​ ಕಾರ್ಪೋರೇಟರ್​ಗಳು ಕಲಬುರಗಿಯತ್ತ ಮುಖ ಮಾಡದೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಎಲ್ಲಾ ಆಟಗಾರರ ಕೋವಿಡ್​​ ವರದಿ ನೆಗೆಟಿವ್​​ -ಪಂದ್ಯ ನಡೆಯೋದು ಕನ್ಫರ್ಮ್​

blank

Source: newsfirstlive.com Source link