ನಿಫಾ ವೈರಸ್​​ ಭೀತಿ; ತಮಿಳುನಾಡಿನಲ್ಲಿ ಅ.31 ರವರೆಗೆ ಎಲ್ಲಾ ಸಮಾರಂಭಗಳಿಗೂ ಬ್ರೇಕ್​​

ನಿಫಾ ವೈರಸ್​​ ಭೀತಿ; ತಮಿಳುನಾಡಿನಲ್ಲಿ ಅ.31 ರವರೆಗೆ ಎಲ್ಲಾ ಸಮಾರಂಭಗಳಿಗೂ ಬ್ರೇಕ್​​

ಚೆನ್ನೈ: ಕೇರಳದಲ್ಲಿ ಮಾರಕ ಕೊರೋನಾ ವೈರಸ್​​ ಬೆನ್ನಲ್ಲೀಗ ನಿಫಾ ವೈರಸ್​​​​​ ಕೇಸುಗಳು ಹೆಚ್ಚಾಗತೊಡಗಿವೆ. ಈಗ ನೆರೆ ರಾಜ್ಯ ಕೇರಳದಿಂದ ತಮಿಳುನಾಡಿಗೂ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸಿಎಂ ಎಂ.ಕೆ ಸ್ಟಾಲಿನ್​​​​ ಎಲ್ಲಾ ಸಮಾರಂಭಗಳಿಗೂ ಬ್ರೇಕ್​​ ಹಾಕಿದ್ದಾರೆ.

ಸಿಎಂ ಎಂ.ಕೆ ಸ್ಟಾಲಿನ್​​ ನೇತೃತ್ವದ ಡಿಎಂಕೆ ಸರ್ಕಾರ ತಮಿಳುನಾಡಿನಲ್ಲಿ ಹಬ್ಬಗಳು, ರಾಜಕೀಯ ಸಮಾವೇಶ, ಸಮುದಾಯ ಮತ್ತು ಧಾರ್ಮಿಕ ಸಭೆ ಸಮಾರಂಭಗಳ ಮೇಲೆ ವಿಧಿಸಿರುವ ನಿಷೇಧವನ್ನು ಅಕ್ಟೋಬರ್​​​​ 31ನೇ ತಾರೀಕಿನವರೆಗೂ ವಿಸ್ತರಿಸಿ ಆದೇಶಿಸಿದೆ.

ನಮ್ಮ ರಾಜ್ಯದಲ್ಲೂ ನಿಫಾ ವೈರಸ್​​ ಹರಡುವ ಭೀತಿಯಿಂದ ಎಲ್ಲಾ ಸಮಾರಂಭಗಳಿಗೆ ಬ್ರೇಕ್​​ ಹಾಕಲಾಗಿದೆ. ಹೀಗಾಗಿ ಸರ್ಕಾರದ ನಿರ್ಧಾರವನ್ನು ಗೌರವಿಸಿ ಜನ ತಮ್ಮ ತಮ್ಮ ಮನೆಗಳಲ್ಲಿ ಹಬ್ಬದ ಆಚರಣೆ ಮಾಡುವಂತೆ ಎಂ.ಕೆ ಸ್ಟಾಲಿನ್​​ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಗಣಪನಿಗೆ ₹10 ಲಕ್ಷ ವೆಚ್ಚದಲ್ಲಿ ಚಿನ್ನದ ಕವಚ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

Source: newsfirstlive.com Source link