ಭೀಕರ ಅಪಘಾತ; ಸಿನೀಮೀಯ ರೀತಿಯಲ್ಲಿ ಸೇತುವೆ ತಡೆಗೋಡೆ ಮಧ್ಯೆ ನೇತಾಡುತ್ತಿರುವ ಕಾರು

ಭೀಕರ ಅಪಘಾತ; ಸಿನೀಮೀಯ ರೀತಿಯಲ್ಲಿ ಸೇತುವೆ ತಡೆಗೋಡೆ ಮಧ್ಯೆ ನೇತಾಡುತ್ತಿರುವ ಕಾರು

ಬಾಗಲಕೋಟೆ: ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಭೀಕರ ಕಾರು ಅಪಘಾತ ಸಂಭವಿಸಿದೆ. ಭೀಕರ ಅಪಘಾತದ ಬಳಿಕ ಸಿನೀಮೀಯ ರೀತಿಯಲ್ಲಿ ಸೇತುವೆ ತಡೆಗೋಡೆ ಮಧ್ಯೆ ಕಾರು ನೇತಾಡುತ್ತಿತ್ತು.

ಇನ್ನು, ಕಾರು ಕೂದಲೆಳೆ ಅಂತರದಲ್ಲಿ ಕೃಷ್ಣಾ ನದಿ ಪಾಲಾಗುವ ಅಪಾಯದಿಂದ ಪಾರಾಗಿದೆ. ನಿನ್ನೆ ತಡರಾತ್ರಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಈ ಭೀಕರ ಅಪಘಾತ ಸಂಭವಿಸಿದ ಬಳಿಕ ಕಾರು ಚಾಲಕ ನಾಪತ್ತೆಯಾಗಿದ್ದಾನೆ.

ಇದುವರೆಗೂ ವಾಹನ ಯಾರದ್ದು? ಎಷ್ಟು ಜನ ಇದ್ದರು ಯಾವುದೇ ಮಾಹಿತಿ ಲಭ್ಯ ಆಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಆಪರೇಷನ್​​ ಕಮಲ; ಎಲ್ಲೂ ಹೋಗದೆ ರೆಸಾರ್ಟ್​ನಲ್ಲೇ ಉಳಿದುಕೊಂಡ ಕಲಬುರಗಿ JDS ಕಾರ್ಪೊರೇಟರ್​​ಗಳು

Source: newsfirstlive.com Source link