ಸರಣಿಯಲ್ಲಿ ಮುಂದುವರೆದ ರಹಾನೆ ವೈಫಲ್ಯ.. ಉಪನಾಯಕನಿಗೆ ವಿಶ್ರಾಂತಿ ನೀಡುತ್ತಾ ಮ್ಯಾನೇಜ್​ಮೆಂಟ್​?

ಸರಣಿಯಲ್ಲಿ ಮುಂದುವರೆದ ರಹಾನೆ ವೈಫಲ್ಯ.. ಉಪನಾಯಕನಿಗೆ ವಿಶ್ರಾಂತಿ ನೀಡುತ್ತಾ ಮ್ಯಾನೇಜ್​ಮೆಂಟ್​?

ಸತತ ವೈಫಲ್ಯ ಅನುಭವಿಸ್ತಾ ಇದ್ರೂ, ಉಪನಾಯಕ ಅಜಿಂಕ್ಯಾ ರಹಾನೆಯನ್ನ ಮಾತ್ರ ಟೀಮ್​ ಮ್ಯಾನೇಜ್​ಮೆಂಟ್​​ ಬಿಟ್ಟು ಕೊಡ್ತಿಲ್ಲ. ಮುಂದಿನ ಪಂದ್ಯದಿಂದ ರೆಸ್ಟ್​​ ನೀಡೋ ಯೋಜನೆ ಇದ್ರೂ, ಮುಂಬರುವ ಸರಣಿಗಳಲ್ಲಿ ರಹಾನೆಯನ್ನ ತಂಡದಿಂದ ಮಾತ್ರ ಕೈ ಬಿಡಲ್ಲ ಅನ್ನೋದು ಮ್ಯಾನೇಜ್​ಮೆಂಟ್​ ಮೂಲದ ಮಾಹಿತಿಯಾಗಿದೆ. ಟೆಸ್ಟ್​ ತಂಡದಲ್ಲಿ ರಹಾನೆ ಉಪಸ್ಥಿತಿ ಅಷ್ಟು ಮುಖ್ಯಾನಾ.? ಇಲ್ಲಿದೆ ನೋಡಿ ಒಂದು ಡಿಟೇಲ್ಸ್​​..!

ಕೆನ್ನಿಂಗ್ಟನ್​ ಓವಲ್​ನಲ್ಲಿ ನಡೆದ 4ನೇ ಟೆಸ್ಟ್​ ಪಂದ್ಯದಲ್ಲೂ ಉಪನಾಯಕ ಅಜಿಂಕ್ಯಾ ರಹಾನೆ ಬ್ಯಾಟ್​​ ಸದ್ದು ಮಾಡಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ರಹಾನೆ ಆಟ, 14 ರನ್​ಗಳಿಗೆ ಅಂತ್ಯವಾದ್ರೆ, 2ನೇ ಇನ್ನಿಂಗ್ಸ್​​ನಲ್ಲಿ ರಹಾನೆ ಆಗಿದ್ದು ಡಕೌಟ್​​. ಸರಣಿಯಲ್ಲಿ ಈವರೆಗೆ ಆಡಿದ 5 ಇನ್ನಿಂಗ್ಸ್​ಗಳಲ್ಲಿ ಒಂದು ಬಾರಿ ಮಾತ್ರ ಅರ್ಧಶತಕದ ಗಡಿ ದಾಟಿರೋ ರಹಾನೆ ಗಳಿಸಿರೋ ಒಟ್ಟು ರನ್​ ಕೇವಲ 95 ಮಾತ್ರ​.
ಇದೊಂದು ಸರಣಿ ಮಾತ್ರವಲ್ಲ… 2020ರ ಬಳಿಕ 27 ಇನ್ನಿಂಗ್ಸ್​ಗಳನ್ನಾಡಿರೋ ರಹಾನೆ ಕೇವಲ 24.76ರ ಸರಾಸರಿಯಲ್ಲಿ ರನ್​ಗಳಿಸಿದ್ದಾರಷ್ಟೇ. ಈ ಪಂದ್ಯಗಳಲ್ಲಿ 644 ರನ್​ ಗಳಿಸಿರೋ ಮುಂಬೈಕರ್​​ 1 ಶತಕ ಸಿಡಿಸಿದ್ರೆ, 2 ಅರ್ಧಶತಕ ಸಿಡಿಸಿದ್ದಾರೆ. ಈ ಸತತ ವೈಫಲ್ಯವೇ ಇದೀಗ ಮುಂದಿನ ಟೆಸ್ಟ್​ ಪಂದ್ಯದ ಸ್ಥಾನಕ್ಕೆ ಕುತ್ತು ತಂದಿದೆ. ಮ್ಯಾನೇಜ್​ಮೆಂಟ್​​ ಕೂಡ ಉಪನಾಯಕನಿಗೆ ವಿಶ್ರಾಂತಿ ನೀಡಲು ಮುಂದಾಗಿದೆ.

blank

ಮುಂದಿನ ಪಂದ್ಯದಿಂದ ಉಪನಾಯಕನಿಗೆ ವಿಶ್ರಾಂತಿ?
ಸರಣಿಯ ಮೊದಲ 3 ಟೆಸ್ಟ್​​ ಪಂದ್ಯಗಳಲ್ಲಿ ರಹಾನೆ ವೈಫಲ್ಯ ಅನುಭವಿಸಿದಾಗ್ಲೇ ತಂಡದಿಂದ ಕೈ ಬಿಡುವಂತೆ ಕೂಗು ಕೇಳಿ ಬಂದಿದ್ವು. ಆದ್ರೆ, ಉಪನಾಯಕನ ಬೆನ್ನಿಗೆ ನಿಂತ ಮ್ಯಾನೇಜ್​ಮೆಂಟ್​​ 4ನೇ ಟೆಸ್ಟ್​​ನಲ್ಲಿ ಮತ್ತೆ ಸ್ಥಾನ ನೀಡಿತ್ತು. ಈಗ ಮುಂದಿನ ಪಂದ್ಯದಿಂದ ವಿಶ್ರಾಂತಿ ನೀಡೋ ಯೋಜನೆ ಇದ್ರೂ ಕೂಡ ಮ್ಯಾನೇಜ್​ಮೆಂಟ್​ ​ರಹಾನೆಯನ್ನ ಬಿಟ್ಟು ಕೊಡ್ತಿಲ್ಲ. ಸ್ವತಃ ಬ್ಯಾಟಿಂಗ್​ ಕೋಚ್​ ವಿಕ್ರಮ್​ ರಾಥೋರ್​ ಕೂಡ ರಹಾನೆ ಬ್ಯಾಟಿಂಗ್​ ಫಾರ್ಮ್​ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದೇ ಹೇಳ್ತಿದ್ದಾರೆ.

‘ರಹಾನೆ ಕಮ್​ಬ್ಯಾಕ್​ ಮಾಡ್ತಾರೆ’’
‘ದೀರ್ಘಕಾಲದ ಕ್ರಿಕೆಟ್​​​ನಲ್ಲಿ ರನ್​ ಇಲ್ಲದ ದಿನಗಳು ಬಂದೇ ಬರುತ್ತವೆ. ಈ ಸಮಯದಲ್ಲಿ ತಂಡವಾಗಿ ನಾವು ಅವರ ಬೆಂಬಲಕ್ಕೆ ನಿಲ್ಲಬೇಕು. ಪೂಜಾರ ವಿಚಾರದಲ್ಲೂ ಇದೇ ಆಗಿತ್ತು. ಹೆಚ್ಚು ಅವಕಾಶಗಳು ಸಿಕ್ಕಾಗ ಅವರು ಕಮ್​ಬ್ಯಾಕ್​ ಮಾಡಿದ್ರು. ಅಜಿಂಕ್ಯಾ ಕೂಡ ಫಾರ್ಮ್​ಗೆ ಮರಳುತ್ತಾರೆ’’

ವಿಕ್ರಮ್​ ರಾಥೋರ್​​, ಬ್ಯಾಟಿಂಗ್​ ಕೋಚ್​

blank

ವಿಕ್ರಮ್​ ರಾಥೋರ್​ ಮಾತ್ರವಲ್ಲ. ಸುನಿಲ್​ ಗವಾಸ್ಕರ್​, ಸಂಜಯ್​ ಮಾಂಜ್ರೇಕರ್ ಸೇರಿದಂತೆ ಹಲ ಮಾಜಿ ಕ್ರಿಕೆಟರ್ಸ್​, ಕ್ರಿಕೆಟ್​​ ವಿಶ್ಲೇಷಕರು ಕೂಡ ರಹಾನೆ ಸೇವೆ ತಂಡಕ್ಕೆ ಅಗತ್ಯವಿದೆ ಎಂದೇ ಹೇಳ್ತಿದ್ದಾರೆ. ಅದು ನಿಜ ಕೂಡ.. ತಂಡ ಸಂಕಷ್ಟಕ್ಕೆ ಸಿಲುಕಿದ್ದ ಎಷ್ಟೋ ಸಂದರ್ಭದಲ್ಲಿ ಆಸರೆಯಾದ ಉದಾಹರಣೆಯಿದೆ. ನಾಯಕನಾಗಿ ತಂಡವನ್ನ ಯಶಸ್ಸಿಯಾಗಿ ಮುನ್ನಡೆಸಿದ ಸಾಧನೆಯೂ ಮುಂಬೈಕರ್​ ಹೆಗಲಿಗಿದೆ.

ರಹಾನೆಯ ಈ ಎಲ್ಲಾ​ ಸಾಮರ್ಥ್ಯದ ಬಗ್ಗೆ ಸ್ಪಷ್ಟವಾಗೇ ಅರಿತಿರುವ ಮ್ಯಾನೇಜ್​ಮೆಂಟ್​​ ಇದೀಗ ಮುಂದಿನ ಪಂದ್ಯದಿಂದ ವಿಶ್ರಾಂತಿ ನೀಡೋಕೆ ಮುಂದಾಗಿದೆ. ಈ ಮೂಲಕ ಉಪ ನಾಯಕನ ಮೇಲಿರೋ ಒತ್ತಡವನ್ನ ಕಡಿಮೆ ಮಾಡೋ ಪ್ಲಾನ್​ ಹಾಕಿಕೊಂಡಿದೆ.

Source: newsfirstlive.com Source link