ಕೊರೊನಾ ತೊಲಗಲಿ ಎಂದು ಗಣಪನಿಗೆ ವಿಶೇಷ ಪೂಜೆ ನೆರವೇರಿಸಿದ ಸಚಿವ ಅಶ್ವತ್ಥನಾರಾಯಣ ದಂಪತಿ

ಕೊರೊನಾ ತೊಲಗಲಿ ಎಂದು ಗಣಪನಿಗೆ ವಿಶೇಷ ಪೂಜೆ ನೆರವೇರಿಸಿದ ಸಚಿವ ಅಶ್ವತ್ಥನಾರಾಯಣ ದಂಪತಿ

ಬೆಂಗಳೂರು: ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಗೌರಿ ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಎಂಟನೇ ಕ್ರಾಸ್‌ʼನಲ್ಲಿರುವ ಗಣಪತಿ ದೇಗುಲದಲ್ಲಿ ಪೂಜೆ ನೆರೆವೇರಿಸಿದರು.

ಬೆಳಗ್ಗೆ ಧರ್ಮಪತ್ನಿ ಸಮೇತರಾಗಿ ಮೊದಲ ಪೂಜೆ ವೇಳೆಗೆ ದೇಗುಲಕ್ಕೆ ಬಂದ ಅವರು, ಪೂಜೆಯಲ್ಲಿ ಭಾಗಿಯಾದರು. ಅವರು ಪ್ರತಿ ವರ್ಷ ವಿನಾಯಕ ಚೌತಿಯಂದು ಈ ದೇಗುಲಕ್ಕೆ ತಪ್ಪದೇ ಬರುತ್ತಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿಘ್ನನಿವಾರಕ ಗಣಪತಿ ಎಲ್ಲರ ವಿಘ್ನಗಳನ್ನು ನಿವಾರಿಸಿ ಕರುಣೆ ತೋರಲಿ. ಎಲ್ಲೆಡೆ ಕೊರೋನಾ ಮಾರಿ ತೊಲಗಲಿ” ಎಂದು ಗಣಪನಲ್ಲಿ ಪ್ರಾರ್ಥನೆ ಮಾಡಿದ್ದಾಗಿ ಹೇಳಿದರು.

blank

ಈ ಸಂದರ್ಭದಲ್ಲಿ ವಿನಾಯಕನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತಾದಿಗಳು ಕೋವಿಡ್‌ ನಿಯಮಗಳನ್ನು ಪಾಲಿಸುತ್ತಲೆ ಭಗವಂತನ ದರ್ಶನ ಪಡೆದರು. ಸಚಿವರು ಅಲ್ಲಿ ನೆರೆದಿದ್ದ ಎಲ್ಲ ಭಕ್ತಾಧಿಗಳಿಗೆ ಹಬ್ಬದ ಶುಭಾಶಯ ಕೋರಿದರು. ನಂತರ ಅವರು ಸುಬ್ರಹ್ಮಣ್ಯ ನಗರದ ಪಾಲಿಕೆ ಸದಸ್ಯರ ಕಚೇರಿಯಲ್ಲಿ ನಡೆದ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Source: newsfirstlive.com Source link