‘ಬೆಂಗಳೂರಿನಲ್ಲಿ ತಲೆ ಎತ್ತಿದ ಕ್ಯಾಸಿನೋ ಜೂಜು’- ಅಗತ್ಯ ಕ್ರಮಕ್ಕೆ ಒತ್ತಾಯಿಸಿ ಗೃಹ ಸಚಿವರಿಗೆ ಜಾರ್ಜ್​​ ಪತ್ರ

‘ಬೆಂಗಳೂರಿನಲ್ಲಿ ತಲೆ ಎತ್ತಿದ ಕ್ಯಾಸಿನೋ ಜೂಜು’- ಅಗತ್ಯ ಕ್ರಮಕ್ಕೆ ಒತ್ತಾಯಿಸಿ ಗೃಹ ಸಚಿವರಿಗೆ ಜಾರ್ಜ್​​ ಪತ್ರ

ಬೆಂಗಳೂರು: ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ಕ್ಯಾಸಿನೋ ಅಡ್ಡ ತಲೆಯೆತ್ತಿದೆ. ಮಾರಕ ಕೊರೊನಾ ಲಾಕ್ಡೌನ್​​ನಿಂದ ಈಗಾಗಲೇ ಜನ ತತ್ತರಿಸಿ ಹೋಗಿದ್ದಾರೆ. ಹೀಗಿರುವಾಗ ಜನ ಜೂಜಾಟವಾಡಿ ಮತ್ತಷ್ಟು ಆರ್ಥಿಕವಾಗಿ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಲಿದ್ದಾರೆ. ಹೀಗಾಗಿ ಜೂಜಾಟ ಆಡುತ್ತಿರುವವರ ವಿರುದ್ಧ ಕಠಿಣಕ್ರಮ ತೆಗೆದುಕೊಳ್ಳಿ ಎಂದು ಮಾಜಿ ಗೃಹ ಸಚಿವ ಕೆ.ಜೆ ಜಾರ್ಜ್ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದಿದ್ದಾರೆ.

blank

ಗೋವಾ ಕ್ಯಾಸಿನೊ ಜೂಜು ಅಡ್ಡೆಯಾಗಿ ಬೆಂಗಳೂರು ಬದಲಾಗುತ್ತಿದೆ. ಈ ಕ್ಯಾಸಿನೋ ಜೂಜು ಭಾರೀ ಕೋಲಾಹಾಲ ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಅಕ್ರಮ ಕ್ಯಾಸಿನೋ ನಿಲ್ಲಿಸುವಂತೆ ಪತ್ರದ ಮೂಲಕ ವಿನಂತಿಸುತ್ತೇನೆ. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ವೀಸ್ ರಸ್ತೆ ಹೆಚ್ ಆರ್ ಬಿ ಆರ್ ಬಡಾವಣೆ ಹಾಗೂ ಕಮ್ಮನಹಳ್ಳಿ ಮುಖ್ಯ ರಸ್ತೆಗಳಲ್ಲಿ ಕ್ಯಾಸಿನೋ ಜೂಜು ಅಡ್ಡೆ ಈಗ ಆರಂಭವಾಗಿದೆ. ಜೂಜು ಅಡ್ಡೆಗಳಿಂದ ಕಾನೂನು ಅಪರಾಧಗಳು ಹೆಚ್ಚಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕೆ.ಜೆ ಜಾರ್ಜ್​ಗೆ ಮತ್ತೆ ಸಂಕಷ್ಟ; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಡಿವೈಎಸ್​ಪಿ ಗಣಪತಿ ಕುಟುಂಬ

Source: newsfirstlive.com Source link