5ನೇ ಟೆಸ್ಟ್​ ಪಂದ್ಯದಲ್ಲೂ ಅಶ್ವಿನ್​ ಆಡಲ್ವಾ? ಜಡೇಜಾಗೆ ಮಣೆ ಹಾಕುತ್ತಾ ಮ್ಯಾನೇಜ್​ಮೆಂಟ್​?

5ನೇ ಟೆಸ್ಟ್​ ಪಂದ್ಯದಲ್ಲೂ ಅಶ್ವಿನ್​ ಆಡಲ್ವಾ? ಜಡೇಜಾಗೆ ಮಣೆ ಹಾಕುತ್ತಾ ಮ್ಯಾನೇಜ್​ಮೆಂಟ್​?

ಲೀಡ್ಸ್​​ನಲ್ಲಿ ಇಂಗ್ಲೆಂಡ್​ ವಿರುದ್ಧ 3ನೇ ಟೆಸ್ಟ್​​ ಪಂದ್ಯದಲ್ಲಿ ಇನ್ನಿಂಗ್ಸ್​ ಹಾಗೂ ಹೀನಾಯ ಸೋಲಿಗೆ ಗುರಿಯಾಗಿದ್ದ ಟೀಮ್​ ಇಂಡಿಯಾ ಭರ್ಜರಿ ಬೌನ್ಸ್​ ಮಾಡಿದೆ. ಕೆನ್ನಿಂಗ್ಟನ್​ ಓವಲ್​ನಲ್ಲಿ 157​​ ರನ್​ ಅಂತರದ ದಿಗ್ವಿಜಯ ಸಾಧಿಸಿರುವ ಭಾರತದ ಚಿತ್ತ ಇದೀಗ ಸರಣಿ ಗೆಲುವಿನತ್ತ ನೆಟ್ಟಿದೆ. ಇದರ ಜೊತೆಗೆ ಟೀಮ್​ ಕಾಂಬಿನೇಶನ್​ ಬಗೆಗಿನ ಪ್ರಶ್ನೆಯೂ ಮತ್ತೆ ಹುಟ್ಟಿಕೊಂಡಿದೆ.

ಯೆಸ್​​..! ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿಯ ಆರಂಭದಿಂದಲೂ ಕೇಳಿ ಬಂದ ಪ್ರಶ್ನೆ ಮತ್ತೆ ಎದುರಾಗಿದೆ. ಕೇರಂ ಸ್ಪಿನ್ನರ್​​​ ಆರ್​ ಅಶ್ವಿನ್​ ಆಡ್ತಾರಾ..? ಇಲ್ವಾ..? ಅನ್ನೋ ವಿಚಾರ ಮತ್ತೇ ಚರ್ಚೆಯಲ್ಲಿದೆ. ಆದ್ರೆ, 5ನೇ ಟೆಸ್ಟ್​​ನಲ್ಲೂ ಕೇರಂ ಸ್ಪಿನ್ನರ್​​ ಬೆಂಚ್​​ಗೆ ಸೀಮಿತರಾಗೋದು ಬಹುತೇಕ ಕನ್​ಫರ್ಮ್​. 4ನೇ ಟೆಸ್ಟ್​ ಪಂದ್ಯ ಗೆದ್ದ ಬಳಿಕ ನಾಯಕ ವಿರಾಟ್​ ಆಡಿದ ಮಾತುಗಳೂ ಕೂಡ ಅಶ್ವಿನ್​ ಆಡಲ್ಲಾ ಎಂಬ ಅರ್ಥವನ್ನೇ ನೀಡ್ತಿವೆ.

blank

‘ನಾವು ಎಂದಿಗೂ ವಿಶ್ಲೇಷಣೆ, ಅಂಕಿ ಅಂಶಗಳು ಹಾಗೂ ಸಂಖ್ಯೆಯ ಹಿಂದೆ ಹೋಗುವುದಿಲ್ಲ. ಜನ ಅದರ ಬಗ್ಗೆ ಮಾತನಾಡುತ್ತಾರೆ. ತಂಡವಾಗಿ ನಮಗೆ ಯಾವುದರ ಬಗ್ಗೆ ಗಮನ ಕೇಂದ್ರಿಕರಿಸಬೇಕೆಂಬುದು ಗೊತ್ತಿದೆ. ನಾವು ಈ ವಿಚಾರದಲ್ಲಿ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕಣಕ್ಕಿಳಿಯಲು ಯಾವುದು ಬೆಸ್ಟ್​​ ಕಾಂಬಿನೇಷನ್​ನಲ್ಲಿ ಎಂದು ನಿರ್ಧರಿಸುತ್ತೇವೆ. ಆ ಬೌಲಿಂಗ್​ ಲೈನ್​ಅಪ್​ ಅಥವಾ ಬ್ಯಾಟಿಂಗ್​ ಲೈನ್​ನೊಂದಿಗೆ ಗೆಲ್ಲುತ್ತೇವೆ ಅನ್ನೋದು ನಮಗೆ ತಿಳಿದಿದೆ’

ಯೆಸ್​​.. ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​​ ಪಂದ್ಯ ಜಯಿಸಿದ ಬಳಿಕ ವಿರಾಟ್​​ ಕೊಹ್ಲಿ ಹೇಳಿರುವ ಮಾತುಗಳಿವು. ಸರಣಿಯ 2 ಹಾಗೂ 3ನೇ ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ ಪಿಚ್ ಹಾಗೂ ಕಂಡಿಷನ್​ ಆಧಾರದಲ್ಲಿ ಮುಂದಿನ ಪಂದ್ಯಕ್ಕೆ ತಂಡದ ಆಯ್ಕೆ ಮಾಡ್ತೀವಿ ಅನ್ನೋ ಮಾತನಾಡಿದ್ರು. ಆದ್ರೆ, 4ನೇ ಪಂದ್ಯದ ಬಳಿಕ ಮಾತನಾಡಿದಾಗ ತಮ್ಮ 4+1 ಟೆಂಪ್ಲೇಟ್ ಅನ್ನ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಇದು ನನ್ನೊಬ್ಬನ ನಿರ್ಧಾರವಲ್ಲ ಎಂದು ಪರೋಕ್ಷವಾಗಿ ಹೇಳಿರೋ ಕೊಹ್ಲಿ ,ಇದು ತಂಡದ ಸಾಮೂಹಿಕ ನಿರ್ಧಾರ ಎಂದಿದ್ದಾರೆ. ಇದನ್ನ ಮುಂದಿನ ಪಂದ್ಯದಲ್ಲೂ ಕೇರಂ ಸ್ಪಿನ್ನರ್​​ಗೆ ಅವಕಾಶವಿಲ್ಲ ಎಂಬ ಪರೋಕ್ಷ ಸಂದೇಶ ಎಂದೇ ಹೇಳಲಾಗ್ತಿದೆ.

blank

ಈಗಾಗಲೇ ಅಶ್ವಿನ್​ಗೆ ಅವಕಾಶ ನೀಡದ್ದಕ್ಕೆ ವಿರಾಟ್​​ ಕೊಹ್ಲಿ ಹಾಗೂ ಮ್ಯಾನೇಜ್​ಮೆಂಟ್​​ ತೀವ್ರ ಟೀಕೆಗೆ ಗುರಿಯಾಗಿದೆ. ಹಾಗಾಗಿ ಮುಂದಿನ ಪಂದ್ಯದಲ್ಲಾದ್ರೂ ವಿಶ್ವದ ನಂಬರ್​​ 2 ಟೆಸ್ಟ್​ ಬೌಲರ್​​ಗೆ ಮುಂದಿನ ಪಂದ್ಯದಲ್ಲಾದ್ರೂ ಸ್ಥಾನ ಸಿಗುತ್ತೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ, ಕೊಹ್ಲಿ ಮಾತ್ರ ತಮ್ಮ ವಿನ್ನಿಂಗ್​​​ ಕಾಂಬಿನೇಷನ್​ ಅನ್ನೇ ಮುಂದುವರೆಸುವ ಸೂಚನೆ ನೀಡಿದ್ದಾರೆ. ಹಾಗಿದ್ರೂ ಮ್ಯಾಂಚೆಸ್ಟರ್​​ ಪಿಚ್​​ ನೋಡಿದ ಮೇಲೆ ಏನಾದ್ರೂ ಕೊಹ್ಲಿ ನಿರ್ಧಾರ ಬದಲಾಗುತ್ತಾ ಅನ್ನೋ ಕುತೂಹಲ ಎಲ್ಲರಲ್ಲೂ ಉಳಿದಿದೆ.

Source: newsfirstlive.com Source link