ಬೆಂಗಳೂರು; ಸರ್ಕಾರಿ ಬಸ್​​​ಗಳ ನಡುವೆ ಅಪಘಾತ.. ಪ್ರಯಾಣಿಕರಿಗೆ ಗಂಭೀರ ಗಾಯ

ಬೆಂಗಳೂರು; ಸರ್ಕಾರಿ ಬಸ್​​​ಗಳ ನಡುವೆ ಅಪಘಾತ.. ಪ್ರಯಾಣಿಕರಿಗೆ ಗಂಭೀರ ಗಾಯ

ಬೆಂಗಳೂರು: ಗಣೇಶ ಹಬ್ಬದ ದಿನವೇ ಸಿಲಿಕಾನ್ ಸಿಟಿಯಲ್ಲಿ ಅಪಘಾತ ಸಂಭವಿಸಿದೆ. ಕೆಎಸ್​​ಆರ್​ಟಿಸಿ ಹಾಗೂ ವಾಯುವ್ಯ ಸಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಆ್ಯಕ್ಸಿಡೆಂಟ್​​ ಆಗಿದೆ.

ಇನ್ನು, ಅಪಘಾತದ ರಭಸಕ್ಕೆ ಎರಡೂ ಸರ್ಕಾರಿ ಬಸ್​​ಗಳು ಜಖಂ ಆಗಿವೆ. ಇದರ ಪರಿಣಾಮ ಬಸ್​ನಲ್ಲೇ ಇದ್ದ ಕೆಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ.

ಸದ್ಯ ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ರಾಜಕುಮಾರ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭೀಕರ ಅಪಘಾತ; ಸಿನಿಮೀಯ ರೀತಿಯಲ್ಲಿ ಸೇತುವೆ ತಡೆಗೋಡೆ ಮಧ್ಯೆ ನೇತಾಡುತ್ತಿರುವ ಕಾರು

Source: newsfirstlive.com Source link