ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

– ಸಂಬರ್ಗಿಯವರು ತಾಯಿ ಮೇಲೆ ಆಣೆ ಮಾಡಲಿ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಂಡು ತಿರುಗುವ ಪ್ರಶಾಂತ್ ಸಂಬರ್ಗಿ ಓರ್ವ ನೆಲಹಿಡುಕ. ಬಿಗ್‍ಬಾಸ್ ಶೋ ನಲ್ಲಿ ಎಲ್ಲರಿಗೂ ಪಾರ್ಟಿಕೊಟ್ಟು ಅರವಿಂದ್‍ನ ವೀಡಿಯೋ ಮಾಡಿ ಟ್ರೋಲಿಗನಿಗೆ ಕೊಟ್ಟಿದ್ದಾರೆ ಎಂದು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದ್ರಚೂಡ್, ಸಂಬರ್ಗಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ. ಎಲ್ಲರ ಮಾತು, ಎಲ್ಲರ ವೀಡಿಯೋ ರೆಕಾರ್ಡ್ ಮಾಡುವ ನೀಚ. ಬಿಗ್‍ಬಾಸ್ ನ ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಖಾಸಗಿ ವಾಹಿನಿ ಮಾಡಿದ್ದ ಕ್ವಾರೈಂಟೈನ್ ಸಂದರ್ಭದಲ್ಲಿ ಬಿಗ್‍ಬಾಸ್ ಸ್ಪರ್ಧಿ ಅರವಿಂದ್ ಸೇರಿದಂತೆ ಹಲವರಿಗೆ ಮದ್ಯಪಾನದ ಪಾರ್ಟಿಕೊಟ್ಟು(ಚಾನಲ್ ನಿಯಮಾವಳಿ ವಿರೋಧಿಸಿ) ವೀಡಿಯೋ ಮಾಡಿದ್ದರು. ಈ ಸಂದರ್ಭ ನಾನು ಇದನ್ನು ಗಮನಿಸಿ, ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಅಲ್ಲಿದ್ದ ಹೆಣ್ಣುಮಕ್ಕಳನ್ನು ರೂಮ್‍ನಿಂದ ಹೋಗುವಂತೆ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

ಆದರೂ ಅರವಿಂದ್ ಅವರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದಿದ್ದರು. ಈ ಸುದ್ದಿಯನ್ನು ನಾನು ಖಾಸಗಿ ಚಾನಲ್ ಗೆ ತಿಳಿಸಿದ ಬಳಿಕ ಆ ವೀಡಿಯೋವನ್ನು ತಡೆಹಿಡಿಯಲಾಗಿದೆ. ತಾಯಿ ಪುಷ್ಪ ಸಂಬರ್ಗಿ ಅವರ ತಲೆಮೇಲೆ ಕೈಇಟ್ಟು ಈ ಬಗ್ಗೆ ನಾ ಇಂತಹ ಕೆಟ್ಟ ಕೆಲಸ ಮಾಡಲಿಲ್ಲವೆಂದು ಸಂಬರ್ಗಿ ಹೇಳಲಿ. ಇಲ್ಲದಿದ್ದಲ್ಲಿ ತನ್ನ ಮೊಬೈಲ್‍ನ್ನು ಪೊಲೀಸರಿಗೆ ತನಿಖೆಗೆ ಕೊಡಲಿ. ಟ್ರೋಲ್ ಮಾಡಬೇಕು. ನೆಗೆಟಿವ್ ಮಾಡಬೇಕು. ಕುತಂತ್ರ ಮಾಡಿ ಅವರ ಶಕ್ತಿ ಕುಂದಿಸಬೇಕು. ಅವರನ್ನು ಜನರ ಮುಂದೆ ಕೆಟ್ಟವರಾಗಿ ತೋರಿಸಬೇಕು. ಈ ಮೂಲಕ ತಾನು ಒಳ್ಳೆಯವನಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಸಂಬರ್ಗಿಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

blank

ನಿಜಕ್ಕೂ ಖಾಸಗಿ ಚಾನಲ್ ಆಯೋಜಕರು ಯಾವ ಪರಿ ಬುದ್ಧಿವಾದ ಹೇಳಿ ಎಂಜಲು ಖರ್ಚು ಮಾಡಿದರೆಂದು ತನಿಖೆಯ ಸಣ್ಣ ಅಭ್ಯಾಸವಿದ್ದವರು ತಿಳಿದುಕೊಳ್ಳಬಹುದು. ಇವರು ಸಾಮಾಜಿಕ ಕಾರ್ಯಕರ್ತ ಎನ್ನುವುದಕ್ಕೆ ಯೋಗ್ಯನಲ್ಲ ಎಂದು ವಾಗ್ದಾಳಿ ನಡೆಸಿದರು.

Source: publictv.in Source link