ಆಟಗಾರರಿಗೆ ಕೊರೊನಾ ಸೋಂಕು; ಭಾರತ-ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯ ರದ್ದು

ಆಟಗಾರರಿಗೆ ಕೊರೊನಾ ಸೋಂಕು; ಭಾರತ-ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯ ರದ್ದು

ನವದೆಹಲಿ: ಇಂದು ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯ ರದ್ದುಗೊಂಡಿದೆ. ಬಿಸಿಸಿಐ ಅಧಿಕಾರಿಗಳ ಸಭೆ ನಡೆಸಿ ನಂತರ ಈ ನಿರ್ಧಾರಕ್ಕೆ ಬಂದಿದೆ.

ಮ್ಯಾಂಚೆಸ್ಟರ್​ನಲ್ಲಿ ಇಂದು ಭಾರತ-ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಿಗದಿಗೊಂಡಿತ್ತು. ಆದ್ರೆ ಒಬ್ಬೊಬ್ಬರಾಗಿ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಪಂದ್ಯವನ್ನ ರದ್ದು ಮಾಡುವ ಕುರಿತು ಚರ್ಚೆಗಳು ನಡೆದಿದ್ದವು. ಈ ಹಿಂದೆ ಇಂದು ಸಭೆ ನಡೆಸಿದ ಬಿಸಿಸಿಐ ಅಧಿಕಾರಿಗಳು ಅಂತಿಮವಾಗಿ ಪಂದ್ಯವನ್ನ ರದ್ದುಗೊಳಿಸಿ ನಿರ್ಧಾರ ಮಾಡಿದ್ದಾರೆ. ಸರಣಿಯಲ್ಲಿ ಟೀಂ ಇಂಡಿಯಾ 2-1 ಮುನ್ನಡೆ ಸಾಧಿಸಿತ್ತು.

Source: newsfirstlive.com Source link