ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂದು 10 ವರ್ಷದ ಮಗುವನ್ನೇ ಕೊಂದ ಪಾಪಿಗಳು; ತಾಯಿ ಸೇರಿ ಮೂವರು ಅರೆಸ್ಟ್​

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂದು 10 ವರ್ಷದ ಮಗುವನ್ನೇ ಕೊಂದ ಪಾಪಿಗಳು; ತಾಯಿ ಸೇರಿ ಮೂವರು ಅರೆಸ್ಟ್​

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಪ್ರಿಯಕರನ ಜತೆ ಸೇರಿ ಹತ್ತು ವರ್ಷದ ಬಾಲಕನನ್ನೇ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ. ನಗರದ ಮೈಕೋ ಲೇಔಟ್​​ನಲ್ಲಿ ಈ ಘಟನೆ ನಡೆದಿದೆ.

ಗಂಡ ಬಿಟ್ಟ ಕಾರಣಕ್ಕೆ ತಾಯಿಯೊಬ್ಬರು ತನ್ನ ಮಗುವನ್ನು ಪರಿಚಿತ ರೌಡಿ ಶೀಟರ್​​ ಬಳಿ ಇರಿಸಿದ್ದರು. ಮಗುವನ್ನು ನೋಡಿಕೊಳ್ಳುವುದಾಗಿ ತಾಯಿ ಬಳಿ ರೌಡಿ ಶೀಟರ್​​​ ಹಣ ಪಡೆಯುತ್ತಿದ್ದ. ಈ ರೌಡಿ ಶೀಟರ್​​ಗೆ ಪ್ರೇಯಸಿ ಇದ್ದಳು. ಈ ಪ್ರೇಯಸಿ ಮತ್ತು ರೌಡಿ ಶೀಟರ್​​ಗೆ ಮಗು ಅಡ್ಡಿಯಾಗಿತ್ತು ಎನ್ನಲಾಗಿದ್ದು, ಹೀಗಾಗಿ ಚಿತ್ರಹಿಂಸೆ ನೀಡಿ ಮಗುವನ್ನು ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮನೆಯೊಳಗೆ ಕೂಡಿ ಹಾಕಿ ಆರೋಪಿಗಳು ನಿತ್ಯ ಮಗುವಿಗೆ ಹೊಡೆಯುತ್ತಿದ್ದರಂತೆ.. ಕಳೆದ ಫೆಬ್ರವರಿಯಲ್ಲಿ ಹಿಂಸೆ ತಾಳಲಾರದೆ ಬಾಲಕ ಪ್ರಾಣ ಬಿಟ್ಟಿದ್ದ. ಬಳಿಕ ಮೈಕೋ ಲೇಔಟ್​​ನಿಂದ ತಮಿಳುನಾಡಿಗೆ ಮಗುವಿನ ಮೃತ ದೇಹವನ್ನು ಆರೋಪಿಗಳು ಸಾಗಿಸಿದ್ದಾರೆ. ಮಗುವನ್ನು ಸಾಗಿಸಿದವರು ರೌಡಿ ಶೀಟರ್​​​​ ಸುನೀಲ್​​, ಪ್ರೇಯಸಿ ಮತ್ತು ತಾಯಿ ಎಂದು ತಿಳಿದು ಬಂದಿದೆ.

ಇನ್ನು, ಮಗು ಸಾವನ್ನಪ್ಪಿದ ವಿಚಾರವನ್ನು ತಾಯಿಗೆ ರೌಡಿ ಶೀಟರ್​​ ತಿಳಿಸಿದ್ದ ಎನ್ನಲಾಗಿದೆ. ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ತಾಯಿಗೆ ರೌಡಿ ಶೀಟರ್​ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ತಾಯಿಯೂ ತನ್ನ ಮಗು ಸತ್ತಿರುವುದಾಗಿ ಪೊಲೀಸರಿಗೆ ದೂರು ನೀಡದೆ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಮಗುವಿನ ಮೃತ ದೇಹ ತಮಿಳುನಾಡು ಪೊಲೀಸರಿಗೆ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ಕೇಸ್ ದಾಖಲು ಮಾಡಿದ್ದ ತಮಿಳುನಾಡು ಪೊಲೀಸರಿಗೆ ಮಗುವಿನ ಗುರುತು ಸಿಕ್ಕಿರಲಿಲ್ಲ. ಇನ್ನೊಂದೆಡೆ ಮೈಕೋ ಲೇಔಟ್​​ನಲ್ಲಿ ಆರು ತಿಂಗಳ ಬಳಿಕ ಮಗು ಮಿಸ್​ ಆಗಿದೆ ಎಂದು ಮೂವರು ಆರೋಪಿಗಳು ದೂರು ನೀಡಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ; ಸಿನಿಮೀಯ ರೀತಿಯಲ್ಲಿ ಸೇತುವೆ ತಡೆಗೋಡೆ ಮಧ್ಯೆ ನೇತಾಡುತ್ತಿರುವ ಕಾರು

ಮಿಸ್ಸಿಂಗ್​​ ಕೇಸ್​​ ತನಿಖೆ ಮಾಡಿದ ಮೈಕೋ ಲೇಔಟ್​​ ಪೊಲೀಸರಿಗೆ ದೂರು ನೀಡಿದವರೇ ಆರೋಪಿಗಳು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈಗ ತಾಯಿ ಸೇರಿದಂತೆ ರೌಡಿ ಶೀಟರ್​​​​ ಮತ್ತು ಸಿಂಧು ಎಂಬುವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

Source: newsfirstlive.com Source link