ಸಾಲ ತೀರಿಸಲು ತಂದ ಹಣ ಕದ್ದ ಕಿರಾತಕಿ!

ಮೈಸೂರು: ಮಹಿಳೆಯೊಬ್ಬರು ಸಾಲ ತೀರಿಸಲು ಬೆಂಗಳೂರಿನಿಂದ ತಂದ ಹಣವನ್ನು ಚಾಲಾಕಿ ಕಳ್ಳಿ ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಾಗಮ್ಮ ಹಣ ಕಳೆದುಕೊಂಡ ನತದೃಷ್ಟೆ.ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

ಸಾಲ ತೀರಿಸಲು ನಾಗಮ್ಮ ಬೆಂಗಳೂರಿನಿಂದ ಹಣ ತಂದಿದ್ದಾರೆ. ಅಲ್ಲದೆ ಮೈಸೂರಿನ ಸುಮಂಗಲಿ ಸಿಲ್ಕ್ಸ್ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹಣದ ಬ್ಯಾಗ್ ಸಮೇತ ಹೋಗಿದ್ದಾರೆ. ಬಟ್ಟೆ ಖರೀದಿಯಲ್ಲಿ ಮಗ್ನರಾದ ನಾಗಮ್ಮನ್ನು ಗಮನಿಸಿದ ಚಲಾಕಿ ಕಳ್ಳಿ, ಅವರಿಗೆ ಗೊತ್ತಾಗದಂತೆ ಬ್ಯಾಗ್‍ನಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾಳೆ. ಇದನ್ನೂ ಓದಿ:ಇದನ್ನೂ ಓದಿ: ಐದನೇ ಟೆಸ್ಟ್ ಪಂದ್ಯ ರದ್ದು- ಕಾಟಕೊಟ್ಟ ಕೊರೊನಾ

ಹಣ ಕದಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ನಾಗಮ್ಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚೌತಿಯಂದು ನೇಗಿಲು ಹಿಡಿದು ರೈತರಾದ ಸಿ.ಟಿ.ರವಿ

ಸದಾ ಶಾಂತಿಯಿಂದ ಕೂಡಿರುತ್ತಿದ್ದ ಸಾಂಸ್ಕøತಿಕ ನಗರಿ ಮೈಸೂರು, ಇತ್ತೀಚಿಗೆ ಅಪರಾಧ ಪ್ರಕರಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

Source: publictv.in Source link