ಉಡುಪಿಯಲ್ಲಿ ಮತಾಂತರ ಆರೋಪ; ಹಿಂದೂ ಸಂಘಟನೆಯಿಂದ ಏಕಾಏಕಿ ದಾಳಿ, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ

ಉಡುಪಿಯಲ್ಲಿ ಮತಾಂತರ ಆರೋಪ; ಹಿಂದೂ ಸಂಘಟನೆಯಿಂದ ಏಕಾಏಕಿ ದಾಳಿ, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ

ಉಡುಪಿಯಲ್ಲಿ ಅಕ್ರಮ ಮತಾಂತರದ ಆರೋಪ ಕೇಳಿ ಬಂದಿದೆ. ಹೀಗಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರು ಕಾರ್ಕಳದ ಕುಕ್ಕುಂದೂರು ಗ್ರಾಮದ ನಕ್ರೆ ಆನಂದಿ ಮೈದಾನದ ಸಮೀಪ ಇರುವ ಪ್ರಗತಿ ಸೆಂಟರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಈಗ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಪ್ರಗತಿ ಸೆಂಟರ್​​ ಹತ್ತು ವರ್ಷಗಳಿಂದ ಮತಾಂತರ ಕೆಲಸದಲ್ಲಿ ನಿರತವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಹಿಂದೂ ಸಂಘಟನೆಯ ಕಾರ್ಯಕರ್ತರ ದಿಢೀರ್ ದಾಳಿಯಿಂದ ಪ್ರಾರ್ಥನಾ ನಿರತರು ಕಕ್ಕಬಿಕ್ಕಿಯಾಗಿದ್ದಾರೆ.

ಇನ್ನು, ಹಿಂದೂ ಕಾರ್ಯಕರ್ತರು ಮತ್ತು ಪ್ರಾರ್ಥನಾ ನಿರತರ ನಡುವೆ ಘರ್ಷಣೆ ಶುರುವಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪಾಟೀಲರ ಸಂಘರ್ಷದಲ್ಲಿ ಹೋಳಾದ ‘ಕೈ’ ಪಡೆ.. ವಿಜಯಪುರ ಲೋಕಲ್ ಗಲಾಟೆ ಈಗ ರಾಜ್ಯಮಟ್ಟಕ್ಕೆ ಶಿಫ್ಟ್

Source: newsfirstlive.com Source link