ಭಬನಿಪುರ ಉಪಚುನಾವಣೆ; ಮಮತಾ ಬ್ಯಾನರ್ಜಿ ಎದುರಾಳಿ, ಬಿಜೆಪಿ ಸ್ಪರ್ಧಿ ಇವರೇ ನೋಡಿ..!

ಭಬನಿಪುರ ಉಪಚುನಾವಣೆ; ಮಮತಾ ಬ್ಯಾನರ್ಜಿ ಎದುರಾಳಿ, ಬಿಜೆಪಿ ಸ್ಪರ್ಧಿ ಇವರೇ ನೋಡಿ..!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಭಬನಿಪುರ ಕ್ಷೇತ್ರದ ಉಪಚುನಾವಣೆ ರಂಗು ಪಡೆದುಕೊಳ್ಳುತ್ತಿದ್ದು, ಸಿಎಂ ಮಮತಾ ಬ್ಯಾನರ್ಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಅವರಿಗೆ ಭಬನಿಪುರ ಕ್ಷೇತ್ರದಲ್ಲಿ ಗೆಲುವು ಪಡೆಯುವುದು ಮಹತ್ವದಾಗಿದ್ದು, ಒಂದೊಮ್ಮೆ ಚುನಾವಣೆ ಸೋತರೆ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿಯ ಬೇಕಾಗುತ್ತೆ. ಈ ಹಿನ್ನಲೆ ಉಪಚುನಾವಣೆ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಈ ನಡುವೆ ಬಿಜೆಪಿಯಿಂದ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕೆ ಇಳಿಯುವ ಅಭ್ಯರ್ಥಿ ಹೆಸರು ಘೋಷಣೆಯಾಗಿದ್ದು, ವೃತ್ತಿಯಲ್ಲಿ ವಕೀಲೆಯಾಗಿರುವ ಕೋಲ್ಕತ್ತಾ ಮೂಲದ ಪ್ರಿಯಾಂಕ ತಿಬ್ರಿವಾಲ್ ಅವರು ಬಿಜೆಪಿ ಟಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಪಾಟೀಲರ ಸಂಘರ್ಷದಲ್ಲಿ ಹೋಳಾದ ‘ಕೈ’ ಪಡೆ.. ವಿಜಯಪುರ ಲೋಕಲ್ ಗಲಾಟೆ ಈಗ ರಾಜ್ಯಮಟ್ಟಕ್ಕೆ ಶಿಫ್ಟ್

Source: newsfirstlive.com Source link