ಮಗ ರಾಯನ್ ಬಗ್ಗೆ ಮೇಘನಾ ರಾಜ್ ಕಟ್ಟಿಕೊಂಡಿರೋ ಕನಸೇನು ಗೊತ್ತಾ..?

ಮಗ ರಾಯನ್ ಬಗ್ಗೆ ಮೇಘನಾ ರಾಜ್ ಕಟ್ಟಿಕೊಂಡಿರೋ ಕನಸೇನು ಗೊತ್ತಾ..?

ಇಷ್ಟು ದಿನ ಎಲ್ಲೂ ಕಾಣಿಸಿಕೊಳ್ಳದ ಸ್ಯಾಂಡಲ್​ವುಡ್​ ಸುಂದರಿ ಮೇಘನಾ ರಾಜ್​ ರಾಜ್​ ಸರ್ಜಾ. ಕಳೆದ 2 ವರ್ಷಗಳ ನಂತರ ಮೊದಲ ಬಾರಿಗೆ ನ್ಯೂಸ್​ಫ​ಸ್ಟ್ ನೊಂದಿಗೆ ತಮ್ಮ ನೋವು ನಲಿವುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಕಳೆದುಕೊಂಡ ಮತ್ತು ಪಡೆದುಕೊಂಡ ಎಲ್ಲವುದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮೇಘನಾ ರಾಜ್​ ಸರ್ಜಾಗೆ ರಾಯನ್​ ರಾಯಲ್ ಹಬ್ಬ
ಕಳೆದ 2 ವರ್ಷಗಳಿಂದ ಬರೀ ನೋವಲ್ಲಿ ನೊಂದು ಬಂದಿದ್ದ ಮೇಘನಾ ಆ್ಯಂಡ್​ ಫ್ಯಾಮಿಲಿಗೆ ಈ ವರ್ಷದಿಂದ ಪ್ರತಿ ದಿನವೂ ಹಬ್ಬವೇ. ಈ ವರ್ಷ ನನ್ನ ಮಗನ ನಾಮಕರಣ ಆಯ್ತು ಅದೇ ನನ್ನ ದೊಡ್ಡ ಹಬ್ಬ ಅಂತ ಮೇಘನಾ ರಾಜ್​ ಹೇಳಿದ್ದಾರೆ.

blank

ಮಗನ ಕನಸಿಗೆ ಕನಸಾದ ಮೇಘನಾ ರಾಜ್​ ಸರ್ಜಾ
ನನ್ನ ಮಗನಿಗೆ ಭಾರತದಲ್ಲಿ ಇರುವ ಅಷ್ಟೂ ಹಬ್ಬಗಳು ಗೊತ್ತಿರಬೇಕು.. ನನ್ನ ಮಗ ರಾಯನ್ ಕೇವಲ ಒಬ್ಬರಿಗೆ ಮಾತ್ರ ಅಲ್ಲ ಇಡೀ ಕರ್ನಾಟಕದ ಅಭಿಮಾನಿಗಳ ಮಗನಾಗಿದ್ದಾನೆ.. ಹಾಗಾಗಿ ದೇಶದ ಪ್ರತಿಯೊಂದು ಹಬ್ಬವೂ ಗೊತ್ತಿರಬೇಕು ಎಂದು ಮೇಘನಾ ಹೇಳಿದ್ದಾರೆ.

ನನಗೆ ಅಭಿಮಾನಿಗಳು ತುಂಬಾ ಸಪೋರ್ಟ್ ಮಾಡಿದ್ದಾರೆ

ಮೇಘನಾ ರಾಜ್​ ಸರ್ಜಾ ಕುಟುಂಬದಲ್ಲಿ ನಡೆಯಬಾರದ ಘಟನೆಯೊಂದು ನಡೆಹೋಯಿತು.. ಈ ಸಂದರ್ಭದಲ್ಲಿ ಮೇಘನಾ ರಾಜ್​ ಗೆ ಸಾಥ್ ನೀಡಿದವರಲ್ಲಿ ಕರ್ನಾಟಕದ ಅಷ್ಟೂ ಚಿರು ಮತ್ತು ಮೇಘನಾ ರಾಜ್​ ಅಭಿಮಾನಿಗಳ ಪಾತ್ರ ತುಂಬಾ ಇತ್ತು. ಇಡೀ ಸೌತ್​ ಇಂಡಿಯಾವೇ ಅದರಲ್ಲೂ ಇಡೀ ಕರ್ನಾಟದ ಮನೆ ಮನೆಯೂ ಕೂಡ ನಾಮಕರಣ ಯಾವಾಗ, ಹೆಸರು ಏನು ಅಂತ ತಲೆಕೆಡಿಸಿಕೊಂಡಿದ್ರು.. ಕೊನೆಗೂ ರಾಯನ್​ ರಾಜ್​ ಸರ್ಜಾ ಅಂತಾ ನಾಮಕರಣ ಮಾಡಿದ್ರು.. ರಾಯನ್ ಸರ್ಜಾ ಅನ್ನೂ ಹೆಸರನ್ನ ಆಯ್ಕೆ ಮಾಡಿದ ಮೇಲೆ ಮೊದಲು ಮೇಘನಾ ರಾಜ್​ ಹೇಳಿದ್ದೇ ಆಕ್ಷ್ಯನ್​ ಕಿಂಗ್​ ಅರ್ಜುನ್​ ಸರ್ಜಾ ಅವರಿಗೆ.. ರಾಯನ್​ ಹೆಸರು ಕೇಳಿ ಅರ್ಜುನ್​ ಸರ್ಜಾ ಖುಷಿಯಾಗಿದ್ದಾರೆ.

blank

ಗಂಡು ಮಗು ಆಗುತ್ತೆ ಅಂತ ಚಿರುಗೆ ಮೊದಲೇ ಗೊತ್ತಿತ್ತು
ಮೇಘನಾ ರಾಜ್​ ಪ್ರಗ್ನೆಂಟ್​ ಆಗಿದ್ದಾಗ ಚಿರು ಮತ್ತು ಮೇಘನಾಗೆ ಆಗಾಗ ಕ್ಯೂಟ್​ ಜಗಳ ನಡೆಯುತ್ತಲೇ ಇತ್ತಂತೆ. ಚಿರು ಗಂಡು ಅಂತ ಮೇಘನಾ ಇಲ್ಲಾ ಹೆಣ್ಣು ಅಂತಾ.. ಚಿರು ಬಗ್ಗೆ ನೆಗೆಟಿವ್​ ಆಗಿ ಕಾಮೆಂಟ್​ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ನನಗೆ ಸಮಯವೂ ಇಲ್ಲ, ಇಷ್ಟವೂ ಇಲ್ಲ.. ಚಿರುನ ನಿಜವಾಗಿ ಅರ್ಥ ಮಾಡಿಕೊಂಡವರು ಯಾವತ್ತೂ ಈ ರೀತಿ ಮಾತನಾಡಲ್ಲ ಅಂತ ಬೇಸರದಿಂದಲೇ ಉತ್ತರಿಸಿದ್ದಾರೆ.

ನನ್ನ ಹಿಂದೆ ಅಭಿಮಾನಿಗಳಿದ್ದಾರೆ ಅವರೇ ನನ್ನ ಧೈರ್ಯ
ನನ್ನ ಬಗ್ಗೆ ಅಥವಾ ನನ್ನ ಫ್ಯಾಮಿಲಿ ಬಗ್ಗೆ ಯಾರು ಏನಂದ್ರೂ ಪರವಾಗಿಲ್ಲ. ನನ್ನ ಹಿಂದೆ ನನ್ನ ಮತ್ತು ಚಿರು ಅಭಿಮಾನಿಗಳು ಇದ್ದಾರೆ. ಅವರೇ ನನ್ನ ಧೈರ್ಯ ಅಂತ ಮೇಘನಾ ರಾಜ್ ಧೈರ್ಯದಿಂದ ಹೇಳಿದ್ದಾರೆ..

Source: newsfirstlive.com Source link