ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

ಮಸ್ಕತ್: ಯುಎಸ್‍ಎ ಕ್ರಿಕೆಟ್ ಆಟಗಾರ ಜಸ್ಕರನ್ ಮಲ್ಹೋತ್ರ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ್ದಾರೆ.

ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಆಗಿರುವ ಜಸ್ಕರನ್, ಪಪುವಾ ನ್ಯೂಗಿನಿ ವಿರುದ್ಧ ಒಮನ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟಿನಲ್ಲಿ ಯುವರಾಜ್ ಸಿಂಗ್, ಹರ್ಷಲ್ ಗಿಬ್ಸ್, ಹಾಗೂ ಪೊರ್ಲಾಡ್ ರ ವಿಶ್ವದಾಖಲೆ ಸಾಲಿಗೆ ಸೇರಿದ್ದಾರೆ.  ಇದನ್ನೂ ಓದಿ: ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

16 ಸಿಕ್ಸರ್ ಹಾಗೂ 4 ಫೋರ್‍ಗಳನ್ನು ಸಿಡಿಸಿದ ಜಸ್ಕರನ್ 124 ಬಾಲ್‍ಗಳಲ್ಲಿ ಒಟ್ಟು 173 ರನ್ ಗಳಿಸಿ ನಾಟೌಟ್ ಆಗಿ ಉಳಿದರು ಭಾರತದ ಚಂಡೀಗಡದ ಮೂಲದವರಾದ ಜಸ್ಕರನ್ ಮಲ್ಹೋತ್ರ ಯುಎಸ್‍ಎ ಕ್ರಿಕೆಟ್ ತಂಡದ ಪರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?

blank

ಈ ಹಿಂದೆ 2007ರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೌತ್ ಆಫ್ರಿಕಾದ ಬ್ಯಾಟ್ಸ್‍ಮನ್ ಹರ್ಷಲ್ ಗಿಬ್ಸ್ ಒಂದೇ ಓವರ್‍ನಲ್ಲಿ ಆರು ಸಿಕ್ಸರ್ ಚಚ್ಚಿ ವಿಶ್ವ ದಾಖಲೆ ಮಾಡಿದ್ದರು. ಇದೀಗ ಜಸ್ಕರನ್ ಏಕದಿನ ಕ್ರಿಕೆಟ್‍ನಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.  ಇದನ್ನೂ ಓದಿ: ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ

ಯುವರಾಜ್ ಸಿಂಗ್ 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ 6 ಎಸೆತವನ್ನು ಸಿಕ್ಸರ್‍ಗೆ ಅಟ್ಟಿದ್ದರು.

Source: publictv.in Source link