ಮುಂದುವರಿದ ತಾಲಿಬಾನಿಗಳ ಅಟ್ಟಹಾಸ; ಅಮ್ರುಲ್ಲಾ ಸಾಲೇಹ್ ಸಹೋದರನಿಗೆ ಚಿತ್ರಹಿಂಸೆ ನೀಡಿ ಹತ್ಯೆ

ಮುಂದುವರಿದ ತಾಲಿಬಾನಿಗಳ ಅಟ್ಟಹಾಸ; ಅಮ್ರುಲ್ಲಾ ಸಾಲೇಹ್ ಸಹೋದರನಿಗೆ ಚಿತ್ರಹಿಂಸೆ ನೀಡಿ ಹತ್ಯೆ

ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕೈವಶವಾಗದೇ ಉಳಿದುಕೊಂಡಿದ್ದ ಏಕೈಕ ಪ್ರಾಂತ್ಯ ಪಂಜ್​ಶೀರ್​​ನ್ನೂ ಇದೀಗ ತಾಲಿಬಾನಿಗಳು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ತಾಲಿಬಾನಿಗಳ ವಿರುದ್ಧ ಜೊತೆಯಾಗಿದ್ದ ಆ್ಯಂಟಿ ತಾಲಿಬಾನ್​ ಗ್ರೂಪ್​ನ್ನು ದಮನ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: 9/11 ದಾಳಿಯ ದಿನವೇ ತಾಲಿಬಾನಿ ಸಚಿವರ ಪ್ರಮಾಣವಚನ.. ಅಮೆರಿಕಕ್ಕೆ ಸಂದೇಶ..?

ಆ್ಯಂಟಿ ತಾಲಿಬಾನ್ ಮತ್ತು ತಾಲಿಬಾನ್​ಗಳ ನಡುವಿನ ಕದನದಲ್ಲಿ ಇದೀಗ ಸ್ವಘೋಷಿತ ಅಧ್ಯಕ್ಷ ಅಮ್ರುಲ್ಲಾ ಸಾಲೇಹ್ ಸಹೋದರ ರೂಹ್ ಉಲ್ಲಾಹ್ ಸಾಲೇಹ್​ನನ್ನ ತಾಲಿಬಾನಿಗಳು ಹತ್ಯೆಗೈದಿದ್ದಾರೆ. ರೂಹ್ ಉಲ್ಲಾ ಸಾಲೇಹ್​ನನ್ನ ಬಂಧಿಸಿದ ತಾಲಿಬಾನಿಗಳು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅಫ್ಘಾನ್​ನಲ್ಲಿ ರಚನೆಯಾಗ್ತಾವಾ ಎರಡೆರಡು ಸರ್ಕಾರ.. ತಾಲಿಬಾನಿಗಳಿಗೆ ಶುರುವಾಯ್ತು ತಲೆನೋವು

ರೂಹ್ ಉಲ್ಲಾ ಸಾಲೇಹ್ ಪಂಜ್​ಶಿರ್​ನಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದ ವೇಳೆ ಅವರನ್ನ ತಾಲಿಬಾನಿಗಳು ಸೆರೆಹಿಡಿದಿದ್ದರು ಎಂಬ ಮಾಹಿತಿ ಇದೆ. ಇದರಿಂದ ತಾಲಿಬಾನ್ ಮತ್ತು ಆ್ಯಂಟಿ ತಾಲಿಬಾನ್ ಟೀಂ ನಡುವೆ ಕೊಂಚಮಟ್ಟಿಗೆ ತಣ್ಣಗಾಗಿದ್ದ ಕದನ ಇದೀಗ ಮತ್ತೆ ತೀವ್ರಗೊಂಡಿದೆ ಎನ್ನಲಾಗಿದೆ.

Source: newsfirstlive.com Source link