ತಾಲಿಬಾನಿಗಳ ಹುಚ್ಚಾಟಕ್ಕಿಲ್ಲ ಇತಿ-ಮಿತಿ; ಅಮೆರಿಕ ವಿಮಾನದ ರೆಕ್ಕೆಗೆ ಹಗ್ಗ ಕಟ್ಟಿ ಜೋಕಾಲಿಯಾಟ

ತಾಲಿಬಾನಿಗಳ ಹುಚ್ಚಾಟಕ್ಕಿಲ್ಲ ಇತಿ-ಮಿತಿ; ಅಮೆರಿಕ ವಿಮಾನದ ರೆಕ್ಕೆಗೆ ಹಗ್ಗ ಕಟ್ಟಿ ಜೋಕಾಲಿಯಾಟ

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮ ಆಟಾಟೋಪ ಮುಂದುವರೆಸಿದ್ದಾರೆ. ಒಂದೆಡೆ ಸರ್ಕಾರ ರಚಿಸಲು ತಯಾರಿ ನಡೆಸಿದ್ದು ಈಗಾಗಲೇ ಪ್ರಮುಖ ಸಚಿವಾಲಯಗಳಿಗೆ ಸಚಿವರನ್ನ ನೇಮಕ ಮಾಡಿದೆ. ಇದೇ ಸೆಪ್ಟೆಂಬರ್ 11 ರಂದು ಅಂದ್ರೆ ನಾಳೆ ಈ ಸಚಿವರು ಪ್ರಮಾಣವಚನವನ್ನೂ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಅಮೆರಿಕ ಸೇನೆಯ ಕೋಟ್ಯಂತರ ಮೌಲ್ಯದ ಶಸ್ತ್ರಾಸ್ತ್ರಗಳು, ವಾಹನಗಳು ಹಾಗೂ ವಿಮಾನಗಳು ಇದೀಗ ತಾಲಿಬಾನಿಗಳ ಪಾಲಾಗಿವೆ. ಇವುಗಳಲ್ಲಿ ಒಂದಷ್ಟು ವಿಮಾನಗಳನ್ನು ಅಮೆರಿಕ ಸೇನೆ ವಾಪಸ್ಸಾಗುವ ಮುನ್ನವೇ ಜಖಂಗೊಳಿಸಿದೆ. ಹೀಗೆ ಜಖಂ ಆದ ವಿಮಾನಗಳನ್ನು ತಾಲಿಬಾನಿಗಳು ಬಳಸಿಕೊಳ್ಳುತ್ತಿರುವ ರೀತಿ ಮಾತ್ರ ವಿಚಿತ್ರ.

ಹೌದು ತಾಲಿಬಾನಿಗಳು ವಿಮಾನಗಳ ರೆಕ್ಕೆಗೆ ಹಗ್ಗವೊಂದನ್ನ ಕಟಟ್ಟಿ ಅದನ್ನ ಜೋಕಾಲಿಯನ್ನಾಗಿಸಿಕೊಂಡು ಆಟವಾಡುತ್ತಿದ್ದಾರೆ. ತಾಲಿಬಾನಿಗಳು ಜೋಕಾಲಿಯಾಡುತ್ತರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

Source: newsfirstlive.com Source link