‘ನಾನೂ ಕಾಶ್ಮೀರಿ ಪಂಡಿತ.. ಇವರಿಗೆ ಹೇಗೆ ಸಹಾಯ ಮಾಡಬೇಕು ಅಂತ ಬಿಜೆಪಿಗೆ ತೋರಿಸ್ತೇನೆ’

‘ನಾನೂ ಕಾಶ್ಮೀರಿ ಪಂಡಿತ.. ಇವರಿಗೆ ಹೇಗೆ ಸಹಾಯ ಮಾಡಬೇಕು ಅಂತ ಬಿಜೆಪಿಗೆ ತೋರಿಸ್ತೇನೆ’

ಜಮ್ಮು ಕಾಶ್ಮೀರದಲ್ಲಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಾತಾ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ದರ್ಶನ ಪಡೆದಿದ್ದಾರೆ. ಸುಮಾರು 12-14 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಪರ್ವತವನ್ನ ಏರಿ ವೈಷ್ಣೋದೇವಿಗೆ ನಮ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಇಂದು ದೇವಿಯ ದರ್ಶನ ಪಡೆಯಬೇಕು ಎಂದು ಬಂದಿದ್ದೆ.. ಮಾತಾ ವೈಷ್ಣೋದೇವಿ ದರ್ಶನ ಪಡೆದೆ ಎಂದು ಅವರು ಹೇಳಿದ್ರು.

ನಂತರ ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಕಾಶ್ಮೀರಿ ಪಂಡಿತ.. ಇಂದು ನನ್ನ ತವರಿಗೆ ಬಂದ ಅನುಭವ ಆಗಿದೆ. ನಮ್ಮ ಕುಟುಂಬ ಬಹಳ ಕಾಲದಿಂದ ಜಮ್ಮು ಕಾಶ್ಮೀರದೊಂದಿಗೆ ಸಂಬಂಧ ಹೊಂದಿದೆ ಅಂತ ಹೇಳಿದ್ರು. ಅಷ್ಟೇ ಅಲ್ಲದೇ ಕಾಶ್ಮೀರಿ ಪಂಡಿತರಿಗೆ ಯಾವ ರೀತಿ ಸಹಾಯ ಮಾಡಬೇಕು? ಅಂತ ನಾನು ಬಿಜೆಪಿಗೆ ತೋರಿಸಿಕೊಡುತ್ತೇನೆ ಎಂದು ಸಹ ಅವರು ಹೇಳಿದ್ರು.

ವಿಶೇಷವೆಂದರೆ ಕಳೆದ 30 ವರ್ಷದ ಹಿಂದೆ ಕಾಶ್ಮೀರಿ ಪಂಡಿತರ ಹತ್ಯಾಕಾಂಡವೇ ನಡೆದು ಹೋಗಿತ್ತು. ಲಕ್ಷಾಂತರ ಕುಟುಂಬಗಳನ್ನು ಕಾಶ್ಮೀರದಿಂದ ಹೊರ ಹೋಗುವಂತೆ ಉಗ್ರರು ಮತ್ತು ಸ್ಥಳೀಯ ಮತಾಂಧರು ಮಾಡಿದ್ದರು. ಈ ವೇಳೆ ಸಾಕಷ್ಟು ಪಂಡಿತರ ಹತ್ಯೆ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರದಂಥ ಹೀನ ಕೃತ್ಯಗಳನ್ನೇ ಎಸಗಲಾಗಿತ್ತು. ಈ ಕಾರಣದಿಂದಾಗಿ ಕಾಶ್ಮೀರಿ ಪಂಡಿತರು ಸ್ವದೇಶದಲ್ಲಿಯೇ ನಿರಾಶ್ರಿತರಾಗುವಂಥ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ, ಕಳೆದ ಕೆಲ ವರ್ಷಗಳಿಂದ ಕಾಶ್ಮೀರಿ ಪಂಡಿತರಲ್ಲಿ ಭರವಸೆ ಮೂಡಿದ್ದು ನಿಧಾನವಾಗಿ ಕಣಿವೆ ರಾಜ್ಯಕ್ಕೆ ಮರಳುತ್ತಿದ್ದಾರೆ. ಅಷ್ಟೇ ಅಲ್ಲದೇ ಮೊನ್ನೆ ತಾನೆ ಹೊಸ ವೆಬ್​ಸೈಟ್​ ಒಂದನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿದ್ದು, ಕಾಶ್ಮೀರಿ ಪಂಡಿತರ ಆಸ್ತಿ ವಿವರಗಳನ್ನು ಒದಗಿಸುವಂತೆ ಕೇಳಿಕೊಂಡಿದೆ. ಅಲ್ಲದೇ ಅವರ ಆಸ್ತಿ-ಪಾಸ್ತಿಯನ್ನ ಮರಳಿಸಲು ಕೂಡ ಯೋಜನೆಯನ್ನ ಮಾಡಲಾಗಿದೆ.

ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ಕಾಶ್ಮೀರಿ ಪಂಡಿತರಿಗೆ ಸಹಾಯ ಮಾಡುವುದರ ಬಗ್ಗೆ ಪಸ್ತಾಪ ಮಾಡಿರುವುದ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Source: newsfirstlive.com Source link