ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ- ಐವರ ಬಂಧನ

ಹುಬ್ಬಳ್ಳಿ: ವೇಶ್ಯಾವಾಟಿಕೆ ನಡೆಸುತ್ತಿರುವ ದೂರಿನ ಮೇಲೆ ಹುಬ್ಬಳ್ಳಿಯ ಶಹರ ಪೊಲೀಸರು ನಗರದ ಜಯಲಕ್ಷ್ಮಿ ಲಾಡ್ಜ್ ಮೇಲೆ ದಾಳಿ ನಡೆಸಿ, ಲಾಡ್ಜ್ ಮಾಲೀಕ, ಮ್ಯಾನೇಜರ್ ಸೇರಿ ಐವರನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಕಂಫರ್ಟ್ ಜಯಲಕ್ಷ್ಮೀ ಲಾಡ್ಜ್‌ನಲ್ಲಿ ಗ್ರಾಹಕರಿಂದ ಹಣ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಇನ್ಸ್‌ಸ್ಪೆಕ್ಟರ್ ಆನಂದ ಒನಕುದ್ರೆ ನೇತೃತ್ವದ ತಂಡ ದಾಳಿ ನಡೆಸಿ ಮಾಲೀಕ, ಮ್ಯಾನೇಜರ್, ಆಟೋ ಚಾಲಕ ಹಾಗೂ ಇತರರನ್ನು ಬಂಧಿಸಿ, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ವೈದ್ಯರ ಬದಲಾಗಿ ರೋಗಿಗೆ ಇಂಜೆಕ್ಷನ್ ನೀಡಿದ ಸೆಕ್ಯೂರಿಟಿ ಗಾರ್ಡ್

ಲಾಡ್ಜ್ ಮಾಲೀಕನ ಜೊತೆ ಶಾಮೀಲಾಗಿ ಆಟೋ ಚಾಲಕ ಗಿರಾಕಿಗಳನ್ನು ಕರೆದುಕೊಂಡು ಬರುತ್ತಿದ್ದನೆಂದು ತಿಳಿದುಬಂದಿದ್ದು, ಈ ಸಮಯದಲ್ಲಿ ಹೊಂಚು ಹಾಕಿ ಕುಳಿತಿದ್ದ ಪೊಲೀಸರು, ದಂಧೆ ನಡೆಸುವ ಮ್ಯಾನೇಜರ್ ಮತ್ತು ಗಿರಾಕಿಗಳನ್ನು ತಂದು ಕೊಡುವ ಆಸಾಮಿ ಸಮೇತ ಎಲ್ಲರನ್ನೂ ಬಂಧಿಸಿದ್ದಾರೆ. ಇದನ್ನೂ ಓದಿ: ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್

ಈ ಘಟನೆಯ ಕುರಿತಂತೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Source: publictv.in Source link