ಹಬ್ಬದ ದಿನವೇ ದುರಂತ: ಪಲ್ಟಿಯಾದ ಲಾರಿಯಡಿ ಸಿಲುಕಿ ಇಬ್ಬರು ಬೈಕ್ ಸವಾರರು ಸಾವು

ಹಬ್ಬದ ದಿನವೇ ದುರಂತ: ಪಲ್ಟಿಯಾದ ಲಾರಿಯಡಿ ಸಿಲುಕಿ ಇಬ್ಬರು ಬೈಕ್ ಸವಾರರು ಸಾವು

ಬೀದರ್: ಇಡೀ ದೇಶವೇ ಗಣೇಶ ಹಬ್ಬದ ಸಂಭ್ರಮದಲ್ಲಿರುವಾಗ ಬೀದರ್​ ಜಿಲ್ಲೆಯಲ್ಲಿ ದುರಂತವೊಂದು ನಡೆದುಹೋಗಿದೆ. ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರರು ಸಾವನ್ನಪ್ಪಿದ್ದಾರೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಇಂಚೂರು ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಕುಮಾರ್ ನೌನಾಥ್(24), ಯಾದವ್ ಗೋವಿಂದರಾವ್(29) ಮೃತಪಟ್ಟವರು. ಮೃತಪಟ್ಟ ಇಬ್ಬರೂ ಲಾದಾ ಗ್ರಾಮದವರು ಎಂದು ತಿಳಿದು ಬಂದಿದೆ. ಅಪಘಾತದಿಂದ ನಿಯಂತ್ರಣ ತಪ್ಪಿ ಬ್ರಿಡ್ಜ್ ತಡೆ ಗೋಡೆಗೆ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿದ್ದು ಲಾರಿಯ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮೆಹಕರ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Source: newsfirstlive.com Source link