ನೆಗೆಟಿವ್​ ಕಾಮೆಂಟ್​ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ಸಮಯವೂ ಇಲ್ಲ, ಇಷ್ಟವೂ ಇಲ್ಲ-ಮೇಘನಾ ರಾಜ್​

ನೆಗೆಟಿವ್​ ಕಾಮೆಂಟ್​ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ಸಮಯವೂ ಇಲ್ಲ, ಇಷ್ಟವೂ ಇಲ್ಲ-ಮೇಘನಾ ರಾಜ್​

ಇಷ್ಟು ದಿನ ಎಲ್ಲೂ ಕಾಣಿಸಿಕೊಳ್ಳದ ಸ್ಯಾಂಡಲ್​ವುಡ್​ ಸುಂದರಿ ಮೇಘನಾ ರಾಜ್​ ರಾಜ್​ ಸರ್ಜಾ. ಕಳೆದ 2 ವರ್ಷಗಳ ನಂತರ ಮೊದಲ ಬಾರಿಗೆ ನ್ಯೂಸ್​ಫ​ಸ್ಟ್ ನೊಂದಿಗೆ ತಮ್ಮ ನೋವು ನಲಿವುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಜೀವನದಲ್ಲಿ ಕಳೆದುಕೊಂಡ ಮತ್ತು ಪಡೆದುಕೊಂಡ ಎಲ್ಲವುದರ ಬಗ್ಗೆ ಮನಬಿಚ್ಚಿ ಮಾತನಾಡಿದ ಮೇಘನಾ ನನ್ನ ಬಗ್ಗೆ ಕಾಮೆಂಟ್​ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ಸಮಯ ಇಲ್ಲ ಎಂದಿದ್ದಾರೆ.

ಚಿರು ಬಗ್ಗೆ ನೆಗಿಟಿವ್​ ಆಗಿ ಕಾಮೆಂಟ್​ ಮಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ನನಗೆ ಸಮಯವೂ ಇಲ್ಲ, ಇಷ್ಟವೂ ಇಲ್ಲ ಎಂದಿರುವ ಮೇಘನಾ, ಚಿರುನ ನಿಜವಾಗಿ ಅರ್ಥ ಮಾಡಿಕೊಂಡವರು ಯಾವತ್ತು ಈ ರೀತಿ ಮಾತನಾಡಲ್ಲ ಅಂತ ಬೇಸರದಿಂದಲೇ ಉತ್ತರಿಸಿದ್ದಾರೆ. ಅವರು ಒಂದು ಬ್ಲಡ್​ ಟೆಸ್ಟ್​ ಮಾಡಿಸ್ಕೋಬೇಕಾದ್ರೆ ಹೆದರೋರು, ಆಸ್ಪತ್ರೆ ಅಂದರೆ ಅವರಿಗೆ ಭಯ ಅಂತ್ರದಲ್ಲಿ ಚಿರು ಬಗ್ಗೆ ಅವರು ಹಂಗ್​ ಮಾಡ್ತಿದ್ರು, ಹಿಂಗ್​ ಮಾಡ್ತಿದ್ರು ಅಂತ ಆರೋಪ ಮಾಡಿದ್ರು. ಚಿರು ಏನ್​ ಅಂತಾ ನಮಗೆ ಗೊತ್ತು. ಹೀಗಾಗಿ ಯಾರು ಏನೆ ಅಂದ್ರು ಅದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

ನನಗೆ ಜೂನ್​ 7 ನೇ ತಾರೀಕು ಇನ್ನು ನೆನಪಿದೆ, ಅವತ್ತು ಎಲ್ಲರೂ ಮನೆಯಲ್ಲಿದ್ದೆವು. ಊಟಾ ಮಾಡಿ ಎಲ್ಲರು ಒಟ್ಟಿಗೆ ಕುಳಿತಿದ್ವಿ. ಆ ಸಮಯದಲ್ಲಿ ಅಪ್ಪ ಹೊರಟಿದ್ದರು ಅಪ್ಪನಿಗೆ ಬೈ ಹೇಳಲು ನಾ ಎದ್ದು ಹೊರಟಿದ್ದ ಸಮಯದಲ್ಲಿ ಚಿರು ನನಗೆ ಬೈ ಹೇಳಿ ಬಿಟ್ಟಿದ್ದರು ಎಂದು ಮೇಘನಾ ಭಾವುಕರಾದರು.

Source: newsfirstlive.com Source link