ಮುಂಬೈನಲ್ಲೊಂದು ನಿರ್ಭಯಾ ಮಾದರಿ ಅತ್ಯಾಚಾರ; ಈ ವಿಕೃತಿ ಕೇಳಿದ್ರೆ ಬೆಚ್ಚಿಬೀಳ್ತೀರ

ಮುಂಬೈನಲ್ಲೊಂದು ನಿರ್ಭಯಾ ಮಾದರಿ ಅತ್ಯಾಚಾರ; ಈ ವಿಕೃತಿ ಕೇಳಿದ್ರೆ ಬೆಚ್ಚಿಬೀಳ್ತೀರ

ಮುಂಬೈನಲ್ಲಿ ಮಹಿಳೆಯೋರ್ವಳ ಮೇಲೆ ಅತ್ಯಾಚಾರಗೈದು ಪೈಶಾಚಿಕ ಕೃತ್ಯ ಮೆರೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಇಡೀ ಮುಂಬೈ ಬೆಚ್ಚಿಬಿದ್ದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ 30 ವರ್ಷದವಳಾಗಿದ್ದು ಆಕೆಯ ಮರ್ಮಾಂಗಕ್ಕೆ ರಾಡ್ ತುರುಕಿ ಅತ್ಯಾಚಾರಿ ವಿಕೃತಿ ಮೆರೆದಿದ್ದಾನೆ.

ಇನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 45 ವರ್ಷದ ವ್ಯಕ್ತಿಯೋರ್ವನನ್ನ ಸಕಿನಾಕ ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 307, 376, 323 ಮತ್ತು 504 ರ ಅಡಿ ಕೇಸ್ ದಾಖಲಿಸಲಾಗಿದೆ. ನಿನ್ನೆ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ರಜವಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ.

Source: newsfirstlive.com Source link