‘ರಾಯನ್​ಗೆ ದೇಶದ ಎಲ್ಲ ಹಬ್ಬಗಳು ಗೊತ್ತಿರಬೇಕು’-ಮೇಘನಾ ರಾಜ್​ ಹೀಗಂದಿದ್ದೇಕೆ ಗೊತ್ತಾ..?

‘ರಾಯನ್​ಗೆ ದೇಶದ ಎಲ್ಲ ಹಬ್ಬಗಳು ಗೊತ್ತಿರಬೇಕು’-ಮೇಘನಾ ರಾಜ್​ ಹೀಗಂದಿದ್ದೇಕೆ ಗೊತ್ತಾ..?

ಇಷ್ಟು ದಿನ ಎಲ್ಲೂ ಕಾಣಿಸಿಕೊಳ್ಳದ ಸ್ಯಾಂಡಲ್​ವುಡ್​ ಸುಂದರಿ ಮೇಘನಾ ರಾಜ್​ ರಾಜ್​ ಸರ್ಜಾ. ಕಳೆದ 2 ವರ್ಷಗಳ ನಂತರ ಮೊದಲ ಬಾರಿಗೆ ನ್ಯೂಸ್​ಫ​ಸ್ಟ್ ನೊಂದಿಗೆ ತಮ್ಮ ನೋವು ನಲಿವುಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ನನ್ನ ಮಗನಿಗೆ ದೇಶದ ಎಲ್ಲಾ ಹಬ್ಬಗಳು ಗೊತ್ತಿರಬೇಕು ಎಂದಿದ್ದಾರೆ.

ನಟಿ ಮೇಘನಾ ರಾಜ್​ ತಮ್ಮ ಜೀವನದಲ್ಲಿ ಇಷ್ಟು ದಿನ ನಡೆದ ಘಟನೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದು, ನನ್ನ ಮಗನಿಗೆ ಎಲ್ಲ ಹಬ್ಬಗಳ ಅರಿವಿರಬೇಕು ಎಂದಿದ್ದಾರೆ. ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಲ್ಲಿ ಅನೇಕ ಆಚಾರ, ವಿಚಾರ ಸಂಸ್ಕೃತಿಗಳಿವೆ. ಅದೇ ಪ್ರಕಾರ ವೈವಿದ್ಯಮಯವಾದ ಹಬ್ಬಗಳು ಇವೆ. ಆದ್ದರಿಂದ ನನ್ನ ಮಗನಿಗೆ ಆ ಎಲ್ಲ ಹಬ್ಬಗಳು ಗೊತ್ತಿರಬೇಕು. ಹಬ್ಬ ಅಂದ್ರೆನೇ ಆಚರಣೆ, ಖುಷಿಯ ಸಂಭ್ರಮದ ಕ್ಷಣ ಆ ಎಲ್ಲ ಕ್ಷಣಗಳನ್ನು ನನ್ನ ಮಗ ಅನುಭವಿಸಬೇಕು ಎಂದಿದ್ದಾರೆ.

ಇದನ್ನೂ ಓದಿ:ಮಗ ರಾಯನ್ ಬಗ್ಗೆ ಮೇಘನಾ ರಾಜ್ ಕಟ್ಟಿಕೊಂಡಿರೋ ಕನಸೇನು ಗೊತ್ತಾ..?

ಇನ್ನು ಈ ವೇಳೆ ತಮ್ಮ ಬಾಲ್ಯದ ಗಣೇಶೋತ್ಸವವನ್ನು ಮೆಲುಕು ಹಾಕಿದ ಅವರು, ಬಾಲ್ಯದಲ್ಲಿ ಗಣೇಶ ಹಬ್ಬದ ಆಚರಣೆಗಳು, ಅಪ್ಪ ಅಮ್ಮನ ಜೊತೆ ಮಾರ್ಕೇಟ್​ಗೆ ತೆರಳಿ ಹಬ್ಬದ ಸಾಮಗ್ರಿ ತರುವುದು, ಯಡಿಯೂರು ಲೇಕ್​ನಲ್ಲಿ ಗಣೇಶನನ್ನು ವಿಸರ್ಜಿಸುವುದು ಹೀಗೆ ಬಾಲ್ಯದ ನೆನಪುಗಳು ತಂಬ ಮಜವಾಗಿದ್ದವು ಎಂದು ಮೇಘನಾ ರಾಜ್​ ಆ ದಿನಗಳನ್ನು ಮೆಲಕು ಹಾಕಿದ್ದಾರೆ.

 

Source: newsfirstlive.com Source link