ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ

ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ

ಕಲಬುರಗಿ: ಕೊಟ್ಟ ಸಾಲ ವಾಪಸ್ ಕೇಳಿದಕ್ಕೆ ವ್ಯಕ್ತಿಯೊರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.

ನಗರದ ಕಾಕಡೆ ಚೌಕ್ ಬಳಿಯ ಲಂಗರ್ ಆಂಜನೇಯ ದೇವಸ್ಥಾನ ಬಳಿ ಘಟನೆ ಸಂಭವಿಸಿದ್ದು, ರವಿಕುಮಾರ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕಳೆದ ಏಳು ವರ್ಷಗಳ ಹಿಂದೆ ರವಿಕುಮಾರ್ ಬಳಿ ಗಣಪತಿ ಎಂಬುವವರು 2 ಲಕ್ಷ ಸಾಲ ಪಡೆದಿದ್ದರಂತೆ. ಎಷ್ಟೇ ಸಾರಿ ವಾಪಸ್ ಹಣ ಕೇಳಿದ್ರು ಹಣ ಕೊಡದೆ ಗಣಪತಿ ಸತಾಯಿಸುತ್ತಿದ್ದನಂತೆ. ಆದ್ದರಿಂದ ಬೇಸತ್ತ ರವಿಕುಮಾರ್ ಪತ್ನಿ ಸಮೇತವಾಗಿ ಗಣಪತಿ ಮನೆಗೆ ಬಂದು ಸಾಲ ಮರು ಪಾವತಿಸುವಂತೆ ಕೇಳಿದಾಗ ಆರೋಪಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತಕ್ಕಿಂತಲೂ ಪಾಕಿಸ್ತಾನದಲ್ಲಿ ಪೆಟ್ರೋಲ್​​ ಬೆಲೆ ಕಡಿಮೆ- ಮಾಜಿ ಸಚಿವ ಕೃಷ್ಣಭೈರೇಗೌಡ

ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆಂದು ಗಣಪತಿ ವಿರುದ್ದ ರವಿಕುಮಾರ್ ಆರೋಪ ಮಾಡಿದ್ದು.. ಕಲ್ಲು, ಕಬ್ಬಿಣ ರಾಡ್ ನಿಂದ ಗಣಪತಿ ಮತ್ತು ಕುಟುಂಬಸ್ಥರು ಹಲ್ಲೆ ಮಾಡಿರೋದಾಗಿ ಆರೋಪಿಸಿದ್ದಾರೆ. ಇನ್ನು ರವಿಕುಮಾರ್ ತಲೆಗೆ ಗಂಭೀರ ಗಾಯಗಳಾಗಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಲಬುರಗಿ ಪಾಲಿಕೆ; ಮೇಯರ್​ ಸ್ಥಾನ ಬಿಟ್ಟುಕೊಟ್ಟವರಿಗೆ ಜೆಡಿಎಸ್​ ಬೆಂಬಲ

Source: newsfirstlive.com Source link