ಕೊರೊನಾ ಮಹಾಮಾರಿ ತೊಲಗಿ ಎಲ್ಲರಿಗೂ ಆರೋಗ್ಯ ದೊರೆಯಲಿ- ನಾಡಿನ ಜನತೆಗೆ ಶರವಣ ಶುಭಾಶಯ

ಕೊರೊನಾ ಮಹಾಮಾರಿ ತೊಲಗಿ ಎಲ್ಲರಿಗೂ ಆರೋಗ್ಯ ದೊರೆಯಲಿ- ನಾಡಿನ ಜನತೆಗೆ ಶರವಣ ಶುಭಾಶಯ

ಬೆಂಗಳೂರು: ದೇಶದಾದ್ಯಂತ ಇಂದು ಗೌರಿಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಡಿನ ಜನತೆಗೆ ರಾಜಕೀಯ ನಾಯಕರು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು​ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಕೂಡ ಟ್ವೀಟ್ ಮೂಲಕ ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸರ್ವರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.. ಕೊರೊನಾ ಎಂಬ ಮಹಾಮಾರಿ ತೊಲಗಿ ಎಲ್ಲರಿಗೂ ಆರೋಗ್ಯ ದೊರೆಯಲಿ ಎಂಬ ಪ್ರಾರ್ಥನೆ.. ವಿಘ್ನವಿನಾಶಕ ನಿಮ್ಮ ಸಕಲ ವಿಘ್ನವನ್ನು ದೂರಮಾಡಿ ನೆಮ್ಮದಿ, ಆಯುಷ್ಯ, ಆರೋಗ್ಯ, ಸಂಪತ್ತು ಕೊಟ್ಟು ನಿಮಗೂ ಹಾಗೂ ನಿಮ್ಮ ಕುಟುಂಬದವರನ್ನು ಕಾಪಾಡಲಿ ಎಂದು ಶರವಣ ಶುಭಾಶಯ ತಿಳಿಸಿದ್ದಾರೆ.

Source: newsfirstlive.com Source link