ಉಡುಪಿಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು- ಜಿಲ್ಲೆಗೆ ಕೇರಳ ಟೆನ್ಶನ್

ಉಡುಪಿ: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದಾಗಿದೆ. ಇಂದು ತಜ್ಞರ ಜೊತೆಗೆ ವಿಶೇಷ ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕೂರ್ಮ ರಾವ್ ರದ್ದತಿಯ ಆದೇಶ ಹೊರಡಿಸಿದ್ದಾರೆ.

ವಾರಂತ್ಯ ಕರ್ಫ್ಯೂ ಬಗ್ಗೆ ಸರ್ಕಾರದಿಂದ ಈ ಮೊದಲೇ ನಿರ್ದೇಶನ ಬಂದಿತ್ತು. ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳ ತೀರ್ಮಾನ ಕೈಗೊಳ್ಳಲು ಸೂಚಿನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಜ್ಞರ ಸಮಿತಿ ಸಭೆ ಮಾಡಲಾಯಿತು. ತಕ್ಷಣದಿಂದ ಜಾರಿಗೆ ಬರುವಂತೆ ವಾರಾಂತ್ಯ ಕಪ್ರ್ಯೂ ಹಿಂಪಡೆಯಲಾಗಿದೆ. ಎಲ್ಲ ನಿರ್ಬಂಧಗಳು ಹಿಂದಿನಂತೆಯೇ ಮುಂದುವರೆಯುತ್ತವೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶಿಸಿದ್ದಾರೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.57ಕ್ಕೆ ಇಳಿಕೆ- ರಾಜ್ಯದಲ್ಲಿಂದು 967 ಹೊಸ ಕೊರೊನಾ ಕೇಸ್, 10 ಸಾವು

ಕೇರಳದಿಂದ ಬರುವಾಗ ಕೊರೊನಾ ನೆಗೆಟಿವ್, ಬಂದ ಮೇಲೆ ಕೊರೊನಾ ಪಾಸಿಟಿವ್ ಆಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೇರಳದಿಂದ ಬಂದವರಲ್ಲಿ ಹೆಚ್ಚಾಗಿ ಕೊರೊನಾ ಕಂಡು ಬರುತ್ತಿದೆ. ಅಕ್ಟೋಬರ್ ಅಂತ್ಯದವರೆಗೂ ಕೇರಳದಿಂದ ಬರುವವರಿಗೆ ಹಾಗೂ ಹೋಗುವವರಿಗೆ ಪ್ರಯಾಣ ಮುಂದೂಡಲು ಸೂಚನೆಯನ್ನು ಡಿಸಿ ನೀಡಿದ್ದಾರೆ.

ಕೇರಳದಿಂದ ಬರುವಾಗ ಉದ್ಯೋಗಿಗಳು, ವಿದ್ಯಾರ್ಥಿಗಳು ಕೊರೊನಾ ನೆಗೆಟಿವ್ ರಿಪೋರ್ಟ್ ಇರುತ್ತದೆ. ಕರ್ನಾಟಕಕ್ಕೆ ಬಂದ ನಂತರದ ಕೋವಿಡ್ ಖಖಿ-Pಅಖ ವರದಿ ಪಾಸಿಟಿವ್ ಬರುತ್ತಿದೆ. ಉಡುಪಿಯಲ್ಲಿ ಇಂತಹ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದೆ. ಅಕ್ಟೋಬರ್ ಅಂತ್ಯದ ವರೆಗೂ ಕೇರಳ ಪ್ರಯಾಣ ನಿರ್ಬಂಧಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಹೇಳಿದ್ದಾರೆ.

Source: publictv.in Source link