AAPನಿಂದ ಗಣೇಶ ಹಬ್ಬ, ರಾಹುಲ್ ಗಾಂಧಿ ವೈಷ್ಣೋದೇವಿ ಯಾತ್ರೆ; ವಿಪಕ್ಷಗಳ ಕಾಲೆಳೆದ ಬಿ.ಎಲ್. ಸಂತೋಷ್

AAPನಿಂದ ಗಣೇಶ ಹಬ್ಬ, ರಾಹುಲ್ ಗಾಂಧಿ ವೈಷ್ಣೋದೇವಿ ಯಾತ್ರೆ; ವಿಪಕ್ಷಗಳ ಕಾಲೆಳೆದ ಬಿ.ಎಲ್. ಸಂತೋಷ್

ನವದೆಹಲಿ: ದೇಶದಾದ್ಯಂತ ಇಂದು ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ. ಮೂರನೇ ಅಲೆಯ ಕೋವಿಡ್ ಭೀತಿಯ ನಡುವೆಯೂ ಆಯಾ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕೆ ತೆಗೆದುಕೊಂಡು, ಕೆಲವು ನಿರ್ಬಂಧಗಳನ್ನು ಹೇರಿ ಗಣೇಶ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಟ್ಟಿವೆ.

ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕುಟುಂಬ ಗಣೇಶ ಚತುರ್ಥಿಯಲ್ಲಿ ಪಾಲ್ಗೊಂಡಿದೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಮ್ಮು ಕಾಶ್ಮೀರಕ್ಕೆ ತೆರಳಿ ವೈಷ್ಣೋದೇವಿ ದರ್ಶನ ಪಡೆದಿದ್ದಾರೆ. ಇತ್ತ ಮಾಯಾವತಿ ನೇತೃತ್ವದ ಬಿಎಸ್​ಪಿ ಪಕ್ಷ ಬ್ರಾಹ್ಮಣ ಸಮುದಾಯದ ಜೊತೆ ಸಭೆ ನಡೆಸಿದೆ.

ವಿಪಕ್ಷಗಳ ನಾಯಕರು ಹೀಗೆ ಒಂದಿಲ್ಲೊಂದು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವುದಕ್ಕೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವ್ಯಂಗ್ಯವಾಡಿದ್ದಾರೆ. ಇವರೆಲ್ಲೂ ಹೀಗೆ ಬ್ಯುಸಿಯಾಗಿದ್ದಾರೆ ಎಂದರೆ ಎಲೆಕ್ಷನ್ ಸೀಸನ್ ಹತ್ತಿರವಾಗಿದೆ ಎಂದು ಹೇಳುವ ಮೂಲಕ ವಿಪಕ್ಷಗಳ ನಾಯಕ ಕಾಲೆಳೆದಿದ್ದಾರೆ.

Source: newsfirstlive.com Source link