ಮಹಿಳೆಯರು ಮಕ್ಕಳಿಗೆ ಜನ್ಮ ಕೊಡಲು ಮಾತ್ರ ಸಾಧ್ಯ.. ಆಳುವುದಕ್ಕಲ್ಲ- ತಾಲಿಬಾನ್ ವಕ್ತಾರ

ಮಹಿಳೆಯರು ಮಕ್ಕಳಿಗೆ ಜನ್ಮ ಕೊಡಲು ಮಾತ್ರ ಸಾಧ್ಯ.. ಆಳುವುದಕ್ಕಲ್ಲ- ತಾಲಿಬಾನ್ ವಕ್ತಾರ

ಮಹಿಳೆಯರು ಮಂತ್ರಿಯಾಗಿ ಆಳುವುದಕ್ಕೆ ಸಾಧ್ಯವಿಲ್ಲ, ಅವರು ಕೇವಲ ಮಕ್ಕಳಿಗೆ ಜನ್ಮ ಕೊಡಲು ಮಾತ್ರ ಸಾಧ್ಯ ಎಂದು ತಾಲಿಬಾನ್​ ವಕ್ತಾರ ಸಯ್ಯದ್ ಝೆಕ್ರುಲ್ಲಾ ಹಶೀಮಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ ಹುಚ್ಚಾಟಕ್ಕಿಲ್ಲ ಇತಿ-ಮಿತಿ; ಅಮೆರಿಕ ವಿಮಾನದ ರೆಕ್ಕೆಗೆ ಹಗ್ಗ ಕಟ್ಟಿ ಜೋಕಾಲಿಯಾಟ

ಮಹಿಳೆಗೆ ಆಳುವ ಅಧಿಕಾರ ನೀಡಿದರೆ ಆಕೆಯ ಹೆಗಲಿಗೆ ಹೊರಲಾರದ ಭಾರ ಹೊರಿಸಿದಂತೆ. ಮಹಿಳೆಯರು ಮಂತ್ರಿಮಂಡಲದಲ್ಲಿ ಇರುವುದು ಅನಿವಾರ್ಯವೇನಲ್ಲ. ಅವರು ಕೇವಲ ಜನ್ಮ ನೀಡಬೇಕು. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ​ ಮಹಿಳೆಯರ ಪ್ರತಿಭಟನೆ ಇಡೀ ಅಫ್ಘಾನ್​ ಮಹಿಳೆಯರನ್ನು ಪ್ರತಿನಿಧಿಸುವುದಿಲ್ಲವೆಂದು ಹಶೀಮಿ ಹೇಳಿದ್ದಾರೆ.

ಇದನ್ನೂ ಓದಿ: ಮುಂದುವರಿದ ತಾಲಿಬಾನಿಗಳ ಅಟ್ಟಹಾಸ; ಅಮ್ರುಲ್ಲಾ ಸಾಲೇಹ್ ಸಹೋದರನಿಗೆ ಚಿತ್ರಹಿಂಸೆ ನೀಡಿ ಹತ್ಯೆ

ನಾನು ಎಲ್ಲ ಆಫ್ಘನ್ ಮಹಿಳೆಯರ ಬಗ್ಗೆ ಮಾತನಾಡುತ್ತಿಲ್ಲ.. ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದ ಮಹಿಳೆಯರಿಗೆ ಹೇಳುತ್ತಿದ್ದೇನೆ.. ಅಫ್ಘಾನಿಸ್ತಾನದ ನೆಲದಲ್ಲಿ ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರು, ಅವರನ್ನು ಇಸ್ಲಾಮಿಕ್ ಸಿದ್ಧಾಂತಗಳಡಿಯಲ್ಲಿ ಶಿಕ್ಷಣ ನೀಡುವವರು ನಮ್ಮ ಮಹಿಳೆಯರು ಎಂದು ಹೇಳಿದ್ದಾರೆ.

Source: newsfirstlive.com Source link