ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

ಚಿಕ್ಕಮಗಳೂರು: ಗಣಪತಿ ಹಬ್ಬದಂದು ರೈತನೊಬ್ಬ ಜೀವಂತ ಇಲಿಯರ್ಣಣೂ ಗಣೇಶನಿಗೆ ನೀಡಿ, ಬೆಳೆಗಳನ್ನು ಉಳಿಸು ಎಂದು ಬೇಡಿಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ.

ಮರ್ಕಲ್ ಗ್ರಾಮದ ರೈತ ನಿತಿನ್ ಅವರ ಹೊಲದಲ್ಲಿ ಇಲಿಗಳ ಕಾಟ ಯತೇಚ್ಛವಾಗಿತ್ತು. ಯಾವುದೇ ಔಷಧಿ ಇಟ್ಟರೂ, ಏನೇ ಮಾಡಿದರೂ ಇಲಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಯೂ ಇಲಿ ಹಾಗೂ ಮಣ್ಣು ಪಾಲಾಗುತ್ತಿತ್ತು. ಇದರಿಂದ ಮನನೊಂದ ರೈತ ನಿನ್ನ ವಾಹನದಿಂದ ನಮ್ಮ ಬೆಳೆಗಳು ನಾಶವಾಗುತ್ತವೆ, ಬೆಳೆಗಳನ್ನ ಉಳಿಸಿಕೊಳ್ಳುವುದೇ ಕಷ್ಟವಾಗಿದೆ ಎಂದು ಗಣಪತಿ ಹಬ್ಬವಾದ ಇಂದು, ತಮ್ಮ ಹೊಲದಲ್ಲಿ ಜೀವಂತ ಇಲಿಯನ್ನು ಹಿಡಿದು ಗ್ರಾಮದಲ್ಲಿ ಕೂರಿಸಿದ್ದ ಗಣೇಶನಿಗೆ ನೀಡಿ ಬೆಳೆ ಉಳಿಸು ಎಂದು ಬೇಡಿಕೊಂಡಿದ್ದಾನೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.57ಕ್ಕೆ ಇಳಿಕೆ- ರಾಜ್ಯದಲ್ಲಿಂದು 967 ಹೊಸ ಕೊರೊನಾ ಕೇಸ್, 10 ಸಾವು

ತಮ್ಮ ಹೊಲದಲ್ಲಿ ಹಿಡಿದ ಗಣೇಶನನ್ನ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ಬಂದು ಗಣೇಶನ ಮುಂದೆ ಬಿಟ್ಟಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಪ್ಲಾಸ್ಟಿಕ್ ಕವರ್ ನಲ್ಲಿ ಬಂಧಿಯಾಗಿದ್ದ ಮೂಷಿಕ ಕೆಳಗೆ ಬಿಡುತ್ತಿದ್ದಂತೆ ಬದುಕಿತು ಬಡ ಜೀವ ಎಂದು ಎದ್ನೋ-ಬಿದ್ನೋ ಅಂತ ಅಲ್ಲಿಂದ ಓಡಿದೆ.

Source: publictv.in Source link