AC ಫಿಟ್ ಮಾಡುವಾಗ ಕಾಲು ಜಾರಿ 2ನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಕೆಲಸಗಾರ

AC ಫಿಟ್ ಮಾಡುವಾಗ ಕಾಲು ಜಾರಿ 2ನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಕೆಲಸಗಾರ

ಬೆಂಗಳೂರು: ಎಸಿಯ ಎಸ್ಸಿಟ್ ಫ್ಯಾನ್ ಫಿಟ್ ಮಾಡುವಾಗ ಅವಘಡವೊಂದು ನಡೆದಿದ್ದು 2 ನೇ ಅಂತಸ್ತಿನಿಂದ ಕೆಲಸಗಾರ ಜಾರಿಬಿದ್ದು ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಒರಿಸ್ಸಾ ಮೂಲದ ಜಾನ್ಸನ್ ಮಣಗೋರಿ ಎಂಬಾತ ಹೊಸದಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಎಸಿಯ ಎಸ್ಸಿಟ್ ಫಿಟ್ ಮಾಡಲು ಮೇಲೆ ಹತ್ತಿದ್ದಾನೆ. ಈ ವೇಳೆ ಯಾವುದೇ ಮುಂಜಾಗ್ರತೆಯಾಗಲಿ, ಮುನ್ನೆಚ್ಚರಿಕೆಯಾಗಲಿ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಎಸಿ ಫಿಟ್ ಮಾಡುವ ವೇಳೆ ಜಾರಿಬಿದ್ದ ಪರಿಣಾಮ ಜಾನ್ಸನ್ ಮಣಗೋರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಕಾಂಟ್ರ್ಯಾಕ್ಟರ್ ಪ್ರಕಾಶ್ ರೆಡ್ಡಿ, ಗಿರಿ, ಅಲಿ ರಜಾಕ್ ಬಂಧಿತ ಆರೋಪಿಗಳು.

 

Source: newsfirstlive.com Source link