ಬೆಂಗಳೂರಲ್ಲಿ ಡೆಲ್ಟಾ ವೈರಸ್​​ನ ರೂಪಾಂತರಿ ವೈರಸ್ AY.2 ಮತ್ತು AY.12 ಪತ್ತೆ.. ಹೊಸ ತಳಿ ಎಷ್ಟು ಡೇಂಜರ್..?

ಬೆಂಗಳೂರಲ್ಲಿ ಡೆಲ್ಟಾ ವೈರಸ್​​ನ ರೂಪಾಂತರಿ ವೈರಸ್ AY.2 ಮತ್ತು AY.12 ಪತ್ತೆ.. ಹೊಸ ತಳಿ ಎಷ್ಟು ಡೇಂಜರ್..?

ಬೆಂಗಳೂರು: ಕೊರೊನಾ ಮೂರನೇ ಅಲೆ ಬೆನ್ನಲ್ಲೇ ನಿಫಾ ವೈರಸ್ ಭೀತಿಯೂ ಎದುರಾಗಿದೆ. ಆದರೆ ಇದೀಗ ಮತ್ತೊಂದು ರೂಪಾಂತರಿಯ ಕಾಟ ರಾಜ್ಯದಲ್ಲಿ ಭಯ ಹುಟ್ಟಿಸುತ್ತಿದೆ. ಡೆಲ್ಟಾ ವೈರಸ್ ರೂಪಾಂತರಿ ಇದೀಗ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಮತ್ತೆ ಸಿಲಿಕಾನ್ ಸಿಟಿಗೆ ಆತಂಕ ಎದುರಾಗಿದೆ.

ರಾಜ್ಯದಲ್ಲಿ ಇನ್ನೇನು ಕೊರೊನಾ ಮುಗಿದೇ ಹೋಯ್ತು ಅಂತ ಮಂದಹಾಸ ಬೀರಿದ್ದ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ರೂಪಗಳ ಮೇಲೆ ರೂಪ ತಾಳಿ ಜನರನ್ನ ಚಿತ್ರ ವಿಚಿತ್ರವಾಗಿ ಹಿಂಸಿಸಲು.. ಪ್ರಾಣ ಹೀರಲು ವೈರಸ್​​ಗಳು ಹುಟ್ಟಿಕೊಳ್ತಾನೇ ಇದೆ.

ನಿತ್ಯ ರಾಜ್ಯದಲ್ಲಿ 900ರಿಂದ ಸಾವಿರದ ವರೆಗೂ ಕೊರೊನಾ ಕೇಸ್​ಗಳು ಪತ್ತೆಯಾಗ್ತಿವೆ. ಇದರ ಬೆನ್ನಲ್ಲೇ ಈಗ  ಡೆಲ್ಟಾ ರೂಪಾಂತರಿಯ ಸಬ್ ರೂಪಾಂತರಿ ಪತ್ತೆಯಾಗಿದೆ.

ಈ ವೈರಸ್​​ ಸೈಲೆಂಟಾ..? ವೈಲೆಂಟಾ ಅಂತ ನೋಡೋದಾದ್ರೆ.. ಸಾರ್ಸ್ಕೋವ್- 2 ಡೆಲ್ಟಾ ರೂಪಾಂತರಿಗಳು ಪತ್ತೆಯಾಗಿದ್ದು, 2 ಉಪ-ವಂಶಾವಳಿಗಳಾದ AY.2 ಮತ್ತು AY.12 ವೈರಸ್​​ಗಳು ನಗರದ ಹಲವರಲ್ಲಿ  ಪತ್ತೆಯಾಗಿದೆ. ಈ ವೈರಸ್​​​ನಿಂದ ತೀರಾ ಪರಿಣಾಮಕಾರಿಯಾಗಲ್ಲ, ಜನರು ಭಯ ಭೀತರಾಗೋ ಅವಶ್ಯಕತೆ ಇಲ್ಲ ಅಂತ  ಹೇಳಲಾಗ್ತಿದೆ. ಸೋಂಕಿತರಲ್ಲಿ ಒಂದಿಷ್ಟು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಅದೃಷ್ಟವಶಾತ್​ ಯಾವುದೇ ಸಾವು ಸಂಭವಿಸಿಲ್ಲ. ಹಾಗೂ ಸೋಂಕು ವೇಗವಾಗಿ ಹಡುತ್ತದೆ ಅನ್ನೋದಕ್ಕೆ ಪುರಾವೆ ಇಲ್ಲ. ಆದ್ರೆ ವೈರಸ್ ಹೆಚ್ಚಾದರೆ ಕ್ಲಸ್ಟರ್ ಮಟ್ಟದಲ್ಲಿ ಹರಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಈ ವೈರಸ್ ಡೆಲ್ಟಾದಷ್ಟು ವೇಗವಾಗಿ ಹರಡುತ್ತಾ ಅನ್ನೋದನ್ನ ಪತ್ತೆ ಮಾಡಲು 400 ಜನರ ಸ್ಯಾಂಪಲ್​​ನ್ನು ಲ್ಯಾಬ್​ಗಳಿಗೆ ಕಳುಹಿಸಲಾಗಿತ್ತು. ಜಿನೋಮಿಕ್ ಸೀಕ್ವೆನ್ಸಿಂಗ್ ವೇಳೆ AY.2, AY.12 ಎಂಬ ಮೂರು ಹೊಸ ಡೆಲ್ಟಾ ವಂಶೀಯ ತಳಿಗಳು 38 ಮಂದಿಯಲ್ಲಿ ಕಂಡಿ ಬಂದಿದೆ.

ಒಟ್ನಲ್ಲಿ ಒಂದು ರೂಪಾಂತರಿಯ ಕಾಟದಿಂದ ಬೇಸತ್ತಿದ್ದ ಜನರಿಗೆ ಇದೀಗ ಮತ್ತೊಂದು ಸಬ್ ರೂಪಾಂತರಿಯ ಭೀತಿ ಎದುರಾಗಿದೆ. ಜನ ಮಾಸ್ಕ್, ಸಾಮಾಜಿಕ ಅಂತರ ಮರೆತ್ರೆ ಮತ್ತೊಂದು ಅಲೆ ಜನರನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡುವ ಸಾಧ್ಯತೆಗಳಿರೋದಂತೂ ಸತ್ಯ.

Source: newsfirstlive.com Source link