ಆತ್ಮಹತ್ಯೆ ಕುರಿತು ವೈದ್ಯರು ಬಿಚ್ಚಿಟ್ಟ ಮಾಹಿತಿ ಇದು.. ನಿಮಗೆ ಅಚ್ಚರಿಯಾಗೋದ್ರಲ್ಲಿ ಅನುಮಾನವಿಲ್ಲ

ಆತ್ಮಹತ್ಯೆ ಕುರಿತು ವೈದ್ಯರು ಬಿಚ್ಚಿಟ್ಟ ಮಾಹಿತಿ ಇದು.. ನಿಮಗೆ ಅಚ್ಚರಿಯಾಗೋದ್ರಲ್ಲಿ ಅನುಮಾನವಿಲ್ಲ

ಆಗಿನ್ನೂ ಕೋವಿಡ್ ಹೊಸದಾಗಿ ಬಂದ ಸಂದರ್ಭ. ಕೊರೊನಾ ಸೋಂಕಿಗೆ ಲಸಿಕೆಯಾಗಲಿ, ಚಿಕಿತ್ಸೆಯಾಗಲಿ ಯಾವುದನ್ನೂ ಇನ್ನೂ ಕಂಡುಹಿಡಿದಿರಲಿಲ್ಲ. ಕೋವಿಡ್ ಸೋಂಕಿತನನ್ನು ಸಮಾಜ ಬೇರೆಯೇ ರೀತಿ ನೋಡ್ತಿದ್ದ ದಿನಗಳದು. ಆ ಸಂದರ್ಭದಲ್ಲಿ ಅದೆಷ್ಟೋ  ಕೋವಿಡ್ ಸೋಂಕಿತರು, ತಮಗೇನು ಆಗೋಗುತ್ತೋ ಅನ್ನೋ ಭಯದಿಂದಲೇ ಆತ್ಮಹತ್ಯೆ ಮಾಡಿಕೊಂಡ್ರು. ಇಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ. ಆತ್ಮಹತ್ಯೆ ಕುರಿತು ವೈದ್ಯರು ಬಿಚ್ಚಿಟ್ಟ ಮಾಹಿತಿ ಖಂಡಿತಾ ಅಚ್ಚರಿ ಉಂಟು ಮಾಡುತ್ತೆ.

ಅಯ್ಯೋ, ನಿನ್ನೆ ರಾತ್ರಿ ತಾನೇ ನನ್ನ ಹತ್ರ ಮಾತಾಡಿದ್ರು ಕಣ್ರೀ. ಆದ್ರೇ ಅದೇನಾಯ್ತೋ ಗೊತ್ತಿಲ್ಲ, ರಾತ್ರೋರಾತ್ರಿ ನೇಣು ಹಾಕಿಕೊಂಡು ಬಿಟ್ರಂತೆ. ಇಂತಹ ಹತ್ತು ಹಲವಾರು ನಿದರ್ಶನಗಳನ್ನು ನಾವು ನೀವೂ ಕನಿಷ್ಟ ಪಕ್ಷ ಒಮ್ಮೆಯಾದ್ರೂ ಕೇಳಿಯೇ ಇರ್ತೀವಿ. ನೋಡೋದಕ್ಕೆ ಗಟ್ಟಿಮುಟ್ಟಾಗಿರೋ, ಜೀವನದಲ್ಲಿ ಸಾಧಿಸುವ ಹಾದಿಯಲ್ಲಿರೋ ಅದೆಷ್ಟೋ ಧೃಡ ಜೀವಗಳೇ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಸಿಬಿಟ್ಟಿದ್ದಾರೆ. ಇಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ. ಕಳೆದ 2 ವರ್ಷಗಳಲ್ಲಿ ಆದ ಆತ್ಮಹತ್ಯೆಗಳ ಕುರಿತು ಮಾನಸಿಕ ವೈದ್ಯರು ಒಂದಿಷ್ಟು ಆಘಾತಕಾರಿ ಮಾಹಿತಿ ಹೊರಹಾಕಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಒಂದು ಆಘಾತಕಾರಿ ಮಾಹಿತಿ ನೀಡಿದೆ. 2016ರಿಂದ 2019ರವರೆಗೂ ನಿರುದ್ಯೋಗದಿಂದಾಗಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯಲ್ಲಿ ಶೇ.24ರಷ್ಟು ಏರಿಕೆ ಆಗಿದೆ. 2016ರಲ್ಲಿ ನಿರುದ್ಯೋಗದಿಂದಾಗಿ ಸಾವಿಗೆ ಶರಣಾದವರ ಸಂಖ್ಯೆ 2298 ಆಗಿದ್ರೆ, 2019ರಲ್ಲಿ 2851ಕ್ಕೆ ಏರಿಯಾಗಿತ್ತು. 2019ರಲ್ಲಿ ನಿರುದ್ಯೋಗದ ಕಾರಣದಿಂದ ಕರ್ನಾಟಕದಲ್ಲೇ 553 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ರಾಜ್ಯದ ನಂತರ ಮಹಾರಾಷ್ಟ್ರ ಹಾಗೂ ತಮಿಳುನಾಡು ತದನಂತರದ ಸ್ಥಾನಗಳಲ್ಲಿವೆ.

ಇನ್ನು, ಕೊರೊನಾ ಸೋಂಕಿನಿಂದಾಗಿ ರೋಗಿಗಳಲ್ಲಿ ಭಯ, ಮಾನಸಿಕ ರೋಗ, ಖಿನ್ನತೆ ಉಂಟಾಗ್ತಿತ್ತು. ಇದ್ರಿಂದ ಅತ್ಮಹತ್ಯೆ ಪ್ರಕರಣಗಳೂ ಸಹ ಹೆಚ್ಚಾಗಿರೋದನ್ನ ಕಂಡಿದ್ದೇವೆ. ಇವಿಷ್ಟು ಒಂದೆಡೆಯಾದ್ರೆ, ಮಾನಸಿಕ ಖಿನ್ನತೆಗೆ ಒಳಗಾದವರಲ್ಲಿ ಗೊಂದಲ, ನಿದ್ರಾಭಂಗ, ನಡವಳಿಕೆಯಲ್ಲಿ ಬದಲಾವಣೆ, ವಿಪರೀತ ಚಿಂತೆ, ಅಸಹಾಯಕ ಭಾವನೆ, ಏಕಾಂಗಿತನ ಉಂಟಾಗುತ್ತೆ. ಇದನ್ನು ಕುಟುಂಬಸ್ಥರು ಗಂಭೀರವಾಗಿ ಗಮನಿಸಿ ಎಚ್ಚೆತ್ತುಕೊಳ್ಳುಬೇಕಾಗುತ್ತೆ. ಇಲ್ಲವಾದ್ರೆ, ಖಿನ್ನತೆಗೆ ಒಳಗಾದವರಲ್ಲಿ ಆತ್ಮಹತ್ಯಾ ಆಲೋಚನೆಗಳು ಮನಸ್ಸಿನಲ್ಲಿ ಸುಳಿದಾದೋಡು ಹೆಚ್ಚಾಗುತ್ತೆ ಅಂತಾರೆ ವೈದ್ಯರು.

ಹಿರಿಯ ವಯಸ್ಕರಾದ್ರೂ ವಯೋಸಹಜ ಖಾಯಿಲೆಗಳ ನೋವಿನಿಂದ ಬಳಲೋವಾಗ ನೋವು ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ತಾರೆ. ಆದ್ರೆ, ಇತ್ತೀಚಿನ ದಿನಗಳಲ್ಲಿ 10ನೇ ತರಗತಿ ಫೇಲ್ ಆದ ಮಕ್ಕಳೂ, ಲವ್ ಫೇಲ್ ಆದ ಕಾಲೇಜ್ ಯುವಪೀಳಿಗೆಯೂ ಆತ್ಮಹತ್ಯೆ ಮೊರೆ ಹೋಗ್ತಿದ್ದಾರೆ. ಇದು ಕೇವಲ ಅವರ ತಪ್ಪಲ್ಲ. ಸೋಷಿಯಲ್ ಕಾಂಪಿಟೇಶನ್, ಪೋಷಕರ ಒತ್ತಡ, ಸೋಲಿನ ಭೀತಿ ಇತ್ಯಾದಿಗಳ ನಡುವೆ ಬದುಕುತ್ತಿರೋ ಸಮಾಜದ ಬಲಹೀನ ಸ್ಥಿತಿಯಾಗಿದೆ. ಅದೇನೇ ಇರಲಿ, ನಮ್ಮ ನಿಮ್ಮ ನಡುವೆ ಯಾರಾದ್ರೂ ಡಿಪ್ರೇಶನ್‌ಗೆ ಹೋಗಿದ್ರೆ, ಅವರ ಸಮಸ್ಯೆನ್ನು ಆಲಿಸಿ ಕಿವಿಗಳ ನಾವಾಗಬೇಕಿದೆ. ಯಾರನ್ನೂ ಜಡ್ಜ್ ಮಾಡದೇ, ಅವರ ಜೀವ ಉಳಿಸುವ ಪ್ರಯತ್ನಕ್ಕೆ ಕೈ ಹಾಕಬೇಕಿದೆ.

Source: newsfirstlive.com Source link