ಸ್ಕೂಟಿಯಲ್ಲಿ ಬಂದು ಸರಳವಾಗಿ ಗಣೇಶ ಮೂರ್ತಿ ವಿಸರ್ಜನೆ ಮಾಡಿದ ಬಿ.ಸಿ. ನಾಗೇಶ್

ಸ್ಕೂಟಿಯಲ್ಲಿ ಬಂದು ಸರಳವಾಗಿ ಗಣೇಶ ಮೂರ್ತಿ ವಿಸರ್ಜನೆ ಮಾಡಿದ ಬಿ.ಸಿ. ನಾಗೇಶ್

ತುಮಕೂರು: ಸ್ಕೂಟಿಯಲ್ಲಿ ಬಂದು ಸರಳವಾಗಿ ಗಣೇಶ ಮೂರ್ತಿ ವಿಸರ್ಜಿಸುವ ಮೂಲಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಮ್ಮ ಸರಳತೆ ಮೆರೆದಿದ್ದಾರೆ. ತಿಪಟೂರಿನ ತಿಪಟೂರಮ್ಮ ದೇವಾಲಯದ ಬಳಿಗೆ ಸ್ಕೂಟಿಯಲ್ಲಿ ಆಗಮಿಸಿದ ಸಚಿವ ಬಿ.ಸಿ. ನಾಗೇಶ್ ಗಣೇಶ ಮೂರ್ತಿ ವಿಸರ್ಜನೆ ಸರಳ ಆಚರಣೆಯಲ್ಲಿ ಭಾಗವಹಿಸಿದರು.

ತಿಪಟೂರಿನ ಅಮಾನಿಕೆರೆ ಬಳಿಯ ಕಲ್ಯಾಣಿ ಹತ್ತಿರ ಕುಳಿತ ಸಚಿವ ನಾಗೇಶ್ ಸಾರ್ವಜನಿಕರೊಂದಿಗೆ ಉಭಯ ಕುಶಲೋಪರಿ ವಿಚಾರಣೆ ನಡೆಸಿದರು. ಮಕ್ಕಳಿಗೆ ಗಣೇಶ ಹಬ್ಬದ ಶುಭಾಶಯ ತಿಳಿಸಿದರು. ಯಾವುದೇ ಪೊಲೀಸ್ ಎಸ್ಕಾರ್ಟ್ ಬಳಸದೆ ಸ್ಕೂಟಿಯಲ್ಲಿ ಸಂಚಾರ ನಡೆಸಿದರು.

Source: newsfirstlive.com Source link