3 ದಿನಗಳಲ್ಲಿ ಪ್ರಾರಂಭವಾಗಲಿದೆ ಅಧಿವೇಶನ; ಜಾತಿಗಣತಿ ಗುರಾಣಿ ಪ್ರಯೋಗಲಿಸಲಿದ್ದಾರಂತೆ ಸಿದ್ದರಾಮಯ್ಯ

3 ದಿನಗಳಲ್ಲಿ ಪ್ರಾರಂಭವಾಗಲಿದೆ ಅಧಿವೇಶನ; ಜಾತಿಗಣತಿ ಗುರಾಣಿ ಪ್ರಯೋಗಲಿಸಲಿದ್ದಾರಂತೆ ಸಿದ್ದರಾಮಯ್ಯ

ಬೆಂಗಳೂರು: ಸೆಪ್ಟೆಂಬರ್​ 13ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗ್ತಿದೆ.. ಸಿಎಂ ಆದ ನಂತ್ರ ಬೊಮ್ಮಾಯಿಗೆ ಇದು ಮೊದಲ ಸವಾಲಾಗಿದ್ದು, ಸೋಮವಾರ ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.. ಇತ್ತ ಸರ್ಕಾರವನ್ನ ಹಣಿಯಲು ಪ್ರತಿಪಕ್ಷಗಳು ಸಾಲು ಸಾಲು ಅಸ್ತ್ರಗಳನ್ನ ರೆಡಿ ಮಾಡ್ಕೊಂಡಿವೆ.. ಸಿದ್ದರಾಮಯ್ಯರಂತು, ಸ್ವಪಕ್ಷದ ಅಪಸ್ವರ ಲೆಕ್ಕಿಸದೇ ಜಾತಿಗಣತಿ ಗುರಾಣಿ ಪ್ರಯೋಗಿಸಲಿದ್ದಾರೆ.

ಕೋವಿಡ್ ಕಾರಣದಿಂದ ವಿಳಂಬವಾಗಿದ್ದ ವಿಧಾನಮಂಡಲ ಅಧಿವೇಶನ ಸೆಪ್ಟೆಂಬರ್ 13ರಿಂದ ಆರಂಭವಾಗಲಿದೆ.. ಒಟ್ಟು ಹತ್ತು ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ.. ನಾಯಕತ್ವ ಬದಲಾವಣೆ ಬಳಿಕ ನಡೆಯುತ್ತಿರುವ ಪ್ರಥಮ ಅಧಿವೇಶನ ಇದಾಗಿದ್ದು, ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಇದು ಅವರಿಗೆ ಹೊಸ ಸವಾಲು.

ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಬೊಮ್ಮಾಯಿ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.. ಹೀಗಾಗಿ ಪ್ರಮುಖ ವಿಧೇಯಕಗಳು ಮಂಡನೆಯಾಗಿ, ಅನುಮೋದನೆ ಪಡೆದುಕೊಳ್ಳಲು ಸರ್ಕಾರ ಸಿದ್ಧತೆ ಮಾಡ್ಕೊಂಡಿದೆ.. ಇತ್ತ ಸರ್ಕಾವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಭರ್ಜರಿ ಆಗಿಯೇ ತಯಾರಾಗಿವೆ.

ಇತ್ತ, ಸಿದ್ದರಾಮಯ್ಯ ಜಾತಿಗಣತಿ ಚರ್ಚೆಗೆ ರೆಡಿ ಆಗ್ತಿದ್ದಾರೆ.. ಪಕ್ಷದಲ್ಲಿನ ಆಂತರಿಕ ವಿರೋಧದ ನಡುವೆಯೂ ಹೋರಾಟಕ್ಕೆ ಸಿದ್ಧತೆ ಮಾಡ್ಕೊಂಡಿದ್ದಾರೆ.. ಅಧಿವೇಶನದಲ್ಲಿ ಜಾತಿ ಗಣತಿ ಹೋರಾಟ ನಡೆಸಲು ಪ್ಲಾನ್ ಹೆಣೆದಿದ್ದಾರೆ.. ಇದರ ಜಾರಿಗಾಗಿ ಸಿದ್ದರಾಮಯ್ಯ ಬದ್ಧತೆ ಜೊತೆಗೆ ಒಂದೂವರೆ ದಶಕದ ಶ್ರಮ ವಹಿಸಿದ್ದಾರೆ.

2005ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು.. ಆ ವೇಳೆ ಸಿದ್ದರಾಮಯ್ಯ ಜಾತಿ ಗಣತಿ ಘೋಷಣೆ ಮಾಡಿದ್ದರು.. ಜಾತಿ ಗಣತಿ ಘೋಷಣೆ ಮಾಡೋದ್ರ ಜೊತೆಗೆ 19 ಕೋಟಿ ರೂಪಾಯಿ ಇದಕ್ಕಾಗಿ ಮೀಸಲಿರಿಸಿದ್ದರು.. ಮರು ವರ್ಷವೇ ಡಿಸಿಎಂ ಸ್ಥಾನದಿಂದ ಸಿದ್ದರಾಮಯ್ಯ ವಜಾ ಆಗಿದ್ದರು.. ಈ ಕಾರಣದಿಂದ ವರದಿ ಅನುಷ್ಠಾನ‌ ಆಗಲಿಲ್ಲ.. ಅದಾದ ಬಳಿಕ ಅವರೇ ಸಿಎಂ ಆದ ಬಳಿಕ ₹170 ಕೋಟಿ ರೂಪಾಯಿ ವೆಚ್ಚ ಮಾಡಿ ಜಾತಿ ಗಣತಿ ನಡೆಸಿದ್ರು.. ಜಾತಿಗಣತಿ ವರದಿ ವಿಶ್ಲೇಷಣೆ ಹೊಣೆಯನ್ನ ಬಿಇಎಲ್ ಸಂಸ್ಥೆಗೆ ನೀಡಲಾಗಿತ್ತು.. ಆದ್ರೆ, ಅನಾಲಿಸಿಸ್ ರಿಪೋರ್ಟ್ ಕೊಡೋದು ಲೇಟಾಯ್ತು.. ಸಿದ್ಧರಾಮಯ್ಯರೇ ಸಿಎಂ ಆಗಿದ್ದಾಗ ಅನುಷ್ಠಾನ ಮಾಡಲಿಲ್ಲವೇಕೆ ಎಂಬ ಪ್ರಶ್ನೆ ಬಿಜೆಪಿ-ಜೆಡಿಎಸ್​​​ ಎತ್ತುತ್ತಿವೆ.. ಇದಕ್ಕೆ ಅಧಿವೇಶನದಲ್ಲೇ ಉತ್ತರ ಕೊಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ.. ಜಾತಿ ಗಣತಿ ಅನುಷ್ಠಾನಕ್ಕೆ ಒತ್ತಾಯಿಸಿ ಸದನದಲ್ಲಿ ಹೋರಾಟ ಮಾಡಲು ಸಜ್ಜಾಗಿದ್ದು, ಸಿದ್ದು ನಡೆಗೆ ಖರ್ಗೆ, ಡಿಕೆಶಿ ಸೇರಿ ಪಕ್ಷದ ಹಿರಿಯ ಲಿಂಗಾಯತ ಮುಖಂಡರು ವಿರೋಧ ವ್ಯಕ್ತಪಡಿಸ್ತಿದ್ದಾರೆ.. ಇಷ್ಟೆಲ್ಲಾ ಆಂತರಿಕ ವಿರೋಧದ ನಡುವೆಯೂ ಅಧಿವೇಶನದಲ್ಲಿ ಹೋರಾಟಕ್ಕೆ ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ದಾರೆ.

ಜಾತಿ ಗಣತಿ ಒಂದ್ಕಡೆ ಆದ್ರೆ, ಸಚಿವ ಸಂಪುಟ ರಚನೆಯಿಂದಾಗಿ ಉಂಟಾದ ಗೊಂದಲ, ಸಚಿವರ ಅಧಿಕಾರ ಸ್ವೀಕರಿಸಲು ವಿಳಂಬ ನೀತಿ.. ಶಶಿಕಲಾ ಜೊಲ್ಲೆ ಪ್ರಕರಣ, ಕೊರೊನಾ ನಿಯಂತ್ರಣ, ಮೈಸೂರು ಗ್ಯಾಂಗ್​​ರೇಪ್​​​, ಆ ಬಳಿಕ ಗೃಹ ಸಚಿವರ ಹೇಳಿಕೆ ಸೇರಿ ಹಲವಾರು ಅಸ್ತ್ರಗಳು ಸದನದಲ್ಲಿ ಸದ್ದಾಗುವ ಸಾಧ್ಯತೆಗಳಿವೆ.. ವಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಲು ಸಿಎಂ ಕೂಡಾ ರೆಡಿ ಆಗಿದ್ದಾರೆ.. ಒಟ್ಟಾರೆ, ಸೋಮವಾರದಿಂದ ಸದನದಲ್ಲಿ ಮತ್ತೆ ಕದನ ಏರ್ಪಡಲಿದೆ.

Source: newsfirstlive.com Source link