ಮತಾಂತರ ಆರೋಪ – ಕ್ರಿಶ್ಚಿಯನ್ ಕೇಂದ್ರದ ಮೇಲೆ ಹಿಂಜಾವೇ ದಾಳಿ

ಉಡುಪಿ: ರಾಜ್ಯದಲ್ಲಿ ಮತ್ತೆ ಮತಾಂತರ ವಿಚಾರ ಸದ್ದು ಮಾಡಿದೆ. ಉಡುಪಿ ಜಿಲ್ಲೆ ಕಾರ್ಕಳದ ನಕ್ರೆ ಎಂಬಲ್ಲಿ ಮತಾಂತರ ಮಾಡಲಾಗ್ತಿದೆ ಎಂದು ಆರೋಪಿಸಿ ಕ್ರಿಶ್ಚಿಯನ್ ಕೇಂದ್ರದ ಮೇಲೆ ಹಿಂದೂ ಜಾಗರಣ ವೇದಿಕೆ ದಾಳಿ ನಡೆಸಿದೆ.

ಕೋವಿಡ್ ಕಾಲದಲ್ಲಿ ಜನರನ್ನು ಗುಂಪು ಸೇರಿಸಿಕೊಂಡು ಪ್ರಾರ್ಥನೆ ನಡೆಸ್ತಿದ್ದ ಫಾಸ್ಟರ್ ಬೆನಡಿಕ್ಟ್ ಎಂಬುವರನ್ನು ಜಾಗರಣಾ ವೇದಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಇಲ್ಲಿ ಬರುವ ಅಮಾಯಕರನ್ನು ಧರ್ಮದ ಹೆಸರಲ್ಲಿ ನಂಬಿಸಲಾಗ್ತಿತ್ತು ಎನ್ನಲಾಗಿದೆ. ನಿಮ್ಮ ಕರ್ಮ ಶುದ್ಧ ಆಗುತ್ತದೆ ಎಂದು ಅಮಾಯಕರನ್ನು ನೀರಲ್ಲಿ ಮುಳುಗಿಸಿ ಶುದ್ಧೀಕರಣ ನಡೆಸುವ ಫೋಟೋಗಳು ವೈರಲ್ ಆಗಿವೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನಿರಂತರವಾಗಿ ಮತಾಂತರ ನಡೆಸ್ತಿದ್ದು, ಇದನ್ನೆಲ್ಲಾ ನೋಡ್ಕೊಂಡು ಸುಮ್ನೆ ಇರಲ್ಲ. ಧ್ವಂಸ ಮಾಡ್ತೀವಿ ಎಂದು ಹಿಂದೂ ಜಾಗರಣಾ ವೇದಿಕೆ ಎಚ್ಚರಿಕೆ ನೀಡಿದೆ. ಮತಾಂತರ ಆರೋಪವನ್ನು ಫಾಸ್ಟರ್ ನಿರಾಕರಿಸಿದ್ದಾರೆ.  ಇದನ್ನೂ ಓದಿ: ನಾನು ಕಾಶ್ಮೀರಿ ಪಂಡಿತ, ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ: ರಾಹುಲ್ ಗಾಂಧಿ

Source: publictv.in Source link