ಟಾಲಿವುಡ್ ನಟ ಸಾಯಿ ಧರಮ್ ತೇಜ್ ಬೈಕ್ ಆ್ಯಕ್ಸಿಡೆಂಟ್.. ಆಸ್ಪತ್ರೆಗೆ ದಾಖಲು

ಟಾಲಿವುಡ್ ನಟ ಸಾಯಿ ಧರಮ್ ತೇಜ್ ಬೈಕ್ ಆ್ಯಕ್ಸಿಡೆಂಟ್.. ಆಸ್ಪತ್ರೆಗೆ ದಾಖಲು

ಹೈದರಾಬಾದ್​: ಟಾಲಿವುಡ್ ಸ್ಟಾರ್​ ನಟ, ಚಿರಂಜೀವಿ ಸೋದರಳಿಯ ಸಾಯಿ ಧರಮ್ ತೇಜ್ ಬೈಕ್ ತಡರಾತ್ರಿ ಅಪಘಾತಕ್ಕೀಡಾಗಿದ್ದಾರೆ. ವೇಗದ ಚಾಲನೆಯಿಂದಲೇ ಅಪಘಾತ ಸಂಭವಿಸಿದ್ದು, ರಾತ್ರಿಯ ಈ ಸುದ್ದಿ ಟಾಲಿವುಡ್ ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ.

ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ನಟ ಚಿರಂಜೀವಿ ಸೋದರಳಿಯ!

ಅಪಘಾತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿಯ ಭಯಾನಕ ದೃಶ್ಯಗಳು ಒಂದ್ ಕ್ಷಣ ಮೈ ಜುಮ್ ಎನ್ನುವಂತೆ ಮಾಡಿದೆ. ಬೈಕ್ ಸವಾರ ಬಂದ ಸ್ಪೀಡ್​ಗೆ ಕೆಳಗೆ ಬಿದ್ದ ಬೈಕ್ ಮಾರುದ್ದ ಜಾರಿ ಹೋಗಿದ್ರೆ, ಬೈಕ್ ಜೊತೆ ಸವಾರನೂ ಮಾರುದ್ದ ಸಾಗಿದ್ದ. ಇದು ಟಾಲಿವುಡ್ ನಟ ಸಾಯಿ ಧರಮ್ ತೇಜ್, ಶುಕ್ರವಾರ ತಡರಾತ್ರಿ ಬೈಕ್ ಆ್ಯಕ್ಸಿಡೆಂಟ್ ಆದ ದೃಶ್ಯವಿದು.

ಹೌದು, ಹೈದ್ರಾಬಾದ್​ನ ದುರ್ಗಮ್​​ಚೆರುವು ಕೇಬಲ್ ಬ್ರಿಡ್ಜ್ ಬಳಿ ಸ್ವಾಂಕಿ ಸ್ಪೋಟ್ಸ್ ಬೈಕ್​​ನಲ್ಲಿ ನಟ ಬರ್ತಿದ್ದ ವೇಳೆ ಸ್ಕಿಡ್ ಆಗಿ ಬಿದ್ದಿದ್ದಾರೆ. ಕೆಳಗೆ ಬಿದ್ದ ಪರಿಣಾಮ ಪ್ರಜ್ಞೆ ತಪ್ಪಿರೋ ಸ್ಥಿತಿಯಲ್ಲಿ ಇದ್ರು ಅಂತ ಹೇಳಲಾಗಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು, ನಂತ್ರ ಅಪೋಲೋ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ಸದ್ಯ, ನಟ ಸಾಯಿ ಧರಮ್ ತೇಜ್​​ ಹೆಲ್ಮೆಟ್ ಧರಿಸಿದ್ದ ಪರಿಣಾಮ ಸ್ಪಲ್ವ ತರಚಿದ ಗಾಯಗಳಾಗಿದ್ದು, ಅವರು ಆರೋಗ್ಯವಾಗಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

ನಟ ಸಾಯಿ ಧರಮ್ ತೇಜ್ ಆಕ್ಸಿಡೆಂಟ್ ವಿಚಾರ ತಿಳಿಯುತ್ತಿದ್ದಂತೆ, ಅವರ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದರು. ಸಾಯಿ ಧರಮ್ ಸಹೋದರ ವೈಷ್ಣವ್ ತೇಜ್, ಚಿಕ್ಕಪ್ಪ ಪವನ್ ಕಲ್ಯಾಣ್, ಸೋದರ ಸಂಬಂಧಿಗಳಾದ ವರುಣ್ ತೇಜ್, ನಿಹಾರಿಕಾ ಕೊನಿಡೆಲಾ ಮತ್ತು ಸ್ನೇಹಿತ ಸಂದೀಪ್ ಕಿಶನ್ ಆಸ್ಪತ್ರೆಗೆ ಭೇಟಿ ನೀಡಿ, ನಟನ ಆರೋಗ್ಯ ವಿಚಾರಿಸಿದ್ದಾರೆ.

ಇನ್ನು, ನಟ ಸಾಯಿ ಧರಮ್ ತೇಜ್ ಆಕ್ಸಿಡೆಂಟ್ ಬಗ್ಗೆ ಹೈದ್ರಾಬಾದ್​ನ ಮಾದಾಪುರ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ನಟ ಬೈಕ್ ಚಲಾಯಿಸುವಾಗ ಸ್ಕಿಡ್ ಆಗಿದೆ ಅಷ್ಟೆ. ಅವರು ಹೆಲ್ಮೆಟ್ ಧರಿಸಿದ್ದು, ಮದ್ಯಪಾನ ಮಾಡಿರಲಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಒಟ್ನಲ್ಲಿ, ನಟ ಸಾಯಿ ಧರಮ್ ತೇಜ್, ಅತಿ ವೇಗವಾಗಿ ಬೈಕ್ ಚಲಾಯಿಸಿದ್ರಿಂದಲೇ ಅಪಘಾತ ಸಂಭವಿಸಿರೋ ಶಂಕೆ ವ್ಯಕ್ತವಾಗಿದ್ದು, ಸದ್ಯ ನಟನಿಗೆ ಚಿಕಿತ್ಸೆ ಮುಂದುವರೆದಿದೆ.

Source: newsfirstlive.com Source link