ಕೋಲಾರ: ಕಾಡಾನೆ ದಾಳಿಗೆ ಹೊಲದಲ್ಲಿ ಕಾವಲಿದ್ದ ಇಬ್ಬರು ರೈತರು ಬಲಿ

ಕೋಲಾರ: ಕಾಡಾನೆ ದಾಳಿಗೆ ಹೊಲದಲ್ಲಿ ಕಾವಲಿದ್ದ ಇಬ್ಬರು ರೈತರು ಬಲಿ

ಕೋಲಾರ: ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ಮುಂದುವರೆದಿದ್ದು, ಕಾಡಾನೆ ದಾಳಿಯ ಅಬ್ಬರಕ್ಕೆ ಇಬ್ಬರು ರೈತರು ಬಲಿಯಾದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.

ಜಿಲ್ಲೆಯ ತಮಿಳುನಾಡು ಗಡಿಯ ಬಂಗಾರಪೇಟೆ ತಾಲೂಕಿಗೆ ಹೊಂದಿಕೊಂಡಿರುವ ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಟೊಮೆಟೊ ಹೊಲಗಳಲ್ಲಿ ಕಾವಲಿದ್ದ ಇಬ್ಬರು ರೈತರು ಮೃತಪಟ್ಟಿದ್ದಾರೆ. ಮೃತರು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವೆಪ್ಪನಹಳ್ಳಿ ಗ್ರಾಮದ ರಾಜಶೇಖರ್ ಮತ್ತು ನಾಗರಾಜಪ್ಪ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ತಮಿಳುನಾಡು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಗಡಿ ಗ್ರಾಮದ ರೈತರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:ಕೋಲಾರಕ್ಕೆ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕ; ತೋಟಗಾರಿಕಾ ಸಚಿವರ ಭೇಟಿಯಾದ ಶಶಿಕುಮಾರ್

Source: newsfirstlive.com Source link