ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ಸಿಗುತ್ತಾ?ತಾಲಿಬಾನ್‌ ವಿಚಾರದಲ್ಲಿ ಭಾರತದ ನಿರ್ಧಾರ ಏನು ?

ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ಸಿಗುತ್ತಾ?ತಾಲಿಬಾನ್‌ ವಿಚಾರದಲ್ಲಿ ಭಾರತದ ನಿರ್ಧಾರ ಏನು ?

ಅಫ್ಘಾನ್‌ನಲ್ಲಿ ತಾಲಿಬಾನ್‌ ಸರ್ಕಾರ ರಚನೆಯಾಗಿದೆ. ಆದ್ರೆ, ತಾಲಿಬಾನ್‌ ಸರ್ಕಾರಕ್ಕೆ ಯಾವ ಯಾವ ರಾಷ್ಟ್ರಗಳು ಮಾನ್ಯತೆ ನೀಡುತ್ತವೆ? ಭಾರತ ಏನು ಮಾಡುತ್ತೆ? ಒಮ್ಮೆ ತಾಲಿಬಾನ್‌ ಸರ್ಕಾರಕ್ಕೆ ಜಾಗತಿಕವಾಗಿ ಮಾನ್ಯತೆ ಸಿಗದಿದ್ದರೇ ಏನಾಗುತ್ತೆ?

2001 ರಲ್ಲಿ ಅಮೆರಿಕದ ಅವಳಿ ಗೋಪುರದ ಮೇಲೆ ವಿಮಾನ ನುಗ್ಗಿಸಿ ಬಾಂಬ್‌ ಸ್ಫೋಟ ನಡೆಸಲಾಗಿರುತ್ತದೆ. ಅದನ್ನು ಅಲ್‌ಕೈದಾ ಉಗ್ರ ಬಿನ್‌ ಲಾಡೆನ್‌ ಮಾಡಿರುತ್ತಾನೆ. ಆ ಸಂದರ್ಭದಲ್ಲಿ ತಾಲಿಬಾನ್‌ ಸರ್ಕಾರ ಬಿನ್‌ ಲಾಡೆನ್‌ ರಕ್ಷಣೆಗೆ ಮುಂದಾಗುತ್ತದೆ. ಅಂತಹ ಸಂದರ್ಭದಲ್ಲಿ ಅಮೆರಿಕ ಸೇನೆ ಅಫ್ಘಾನ್‌ಗೆ ನುಗ್ಗುತ್ತದೆ. ತಾಲಿಬಾನ್‌ ಉಗ್ರರ ವಿರುದ್ಧ ಹೋರಾಟ ನಡೆಸುತ್ತದೆ. ಅಂತೂ 20 ವರ್ಷಗಳ ಕಾಲ ತಾಲಿಬಾನ್‌ ಉಗ್ರರ ವಿರುದ್ಧ ಅಮೆರಿಕ ಹೋರಾಟ ನಡೆಸಿದೆ.

ಆದ್ರೆ, ಪೂರ್ಣ ಪ್ರಮಾಣದಲ್ಲಿ ಅಮೆರಿಕ ಸೇನೆ ತಾನು ಅಂದುಕೊಂಡಿದ್ದನು ಸಾಧಿಸಲು ಸಾಧ್ಯವಾಗಿಲ್ಲ. ಈ ನಡುವೆ ಅಮೆರಿಕ ಸೇನೆ ನಾನಾ ಲೆಕ್ಕಾಚಾರ ಹಾಕಿಕೊಂಡು ವಾಪಸ್‌ ಅಮೆರಿಕಾಗೆ ತೆರಳುತ್ತದೆ. ಇಂತಹ ಸಂದರ್ಭದಲ್ಲಿ ತಾಲಿಬಾನ್‌ ಉಗ್ರರು ಅಫ್ಘಾನ್‌ ವಶಪಡಿಸಿಕೊಂಡು ಸರ್ಕಾರವನ್ನು ಉರುಳಿಸುತ್ತಾರೆ. ತಾವೇ ಸರ್ಕಾರ ರಚನೆ ಮಾಡುತ್ತಾರೆ. ಆದ್ರೆ, ಈಗ ಇರೋ ಪ್ರಶ್ನೆ ಅಂದ್ರೆ ಉಗ್ರರಿಂದಲೇ ರಚನೆಯಾಗಿರೋ, ತಾಲಿಬಾನ್‌ ಸರ್ಕಾರಕ್ಕೆ ಯಾವ ರಾಷ್ಟ್ರಗಳು ಮಾನ್ಯತೆ ನೀಡುತ್ತವೆ? ಭಾರತ ಏನು ಮಾಡುತ್ತೆ? ಬಲಿಷ್ಠ ರಾಷ್ಟ್ರಗಳು ಏನು ಮಾಡುತ್ತವೆ? ಅನ್ನೋದು ದೊಡ್ಡ ಪ್ರಶ್ನೆಯಾಗಿ ಬಿಟ್ಟಿದೆ. ಇದನ್ನು ಇಡೀ ವಿಶ್ವವೇ ಕುತೂಹಲವಾಗಿ ನೋಡುತ್ತಿದೆ.

ತಾಲಿಬಾನ್‌ ಸರ್ಕಾರಕ್ಕೆ ಭಾರತ ಮಾನ್ಯತೆ ನೀಡುತ್ತಾ?

ಹಿಂದೊಮ್ಮೆ ಅಂದ್ರೆ, 1996 ರಿಂದ 2001 ರಲ್ಲಿ ಅಫ್ಘಾನ್‌ನಲ್ಲಿ ತಾಲಿಬಾನ್‌ ಸರ್ಕಾರ ಇತ್ತು. ಆ ಸಂದರ್ಭದಲ್ಲಿ ತಾಲಿಬಾನ್‌ಗೂ ಭಾರತಕ್ಕೂ ಸಂಬಂಧ ಸರಿ ಇರಲಿಲ್ಲ. 1999 ರಲ್ಲಿ ಭಾರತದ ವಿಮಾನವನ್ನು ಕಂದಹಾರ್‌ಗೆ ಅಪಹರಿಸಲಾಗಿತ್ತು. ಭಾರತೀಯರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕೆಲವು ಉಗ್ರರನ್ನು ಬಿಡುವಂತೆ ತಾಲಿಬಾನ್‌ ಉಗ್ರರು ಬೇಡಿಕೆ ಇಟ್ಟಿದ್ದರು.  ಆ ಸಂದರ್ಭದಲ್ಲಿ ಸಂಧಾನ ಮಾಡಲಾಗಿತ್ತು. ಭಾರತೀಯ ಪ್ರಜೆಗಳ ರಕ್ಷಣೆಯ ಉದ್ದೇಶದಿಂದ ಅನಿವಾರ್ಯವಾಗಿ ಕೆಲವು ಉಗ್ರರನ್ನು ಬಿಡಲಾಗಿತ್ತು. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ವಿಪರೀತ ಪ್ರಮಾಣದಲ್ಲಿ ಇತ್ತು. ಪಾಕಿಸ್ತಾನದ ಉಗ್ರರು ತಾಲಿಬಾನ್‌ ಉಗ್ರರ ನರೆವು ಪಡೆದು ಭಯೋತ್ಪಾನೆ ಹೆಚ್ಚಿಸಿದ್ರು. ಹೀಗಾಗಿ ತಾಲಿಬಾನ್‌ಗೂ ಭಾರತಕ್ಕೂ ಸಂಬಂಧ ಸರಿಯಾಗಿರಲಿಲ್ಲ.

blank

ಈ ನಡುವೆ ಅಮೆರಿಕ ಸೇನೆ ಅಫ್ಘಾನ್​ಗೆ ನುಗ್ಗಿದ ಮೇಲೆ ಅಲ್ಲಿ ಪ್ರಜಾಪ್ರಭುತ್ವ ಸರ್ಕಾರ ರಚನೆಯಾಗಿತ್ತು. ಅನಂತರ ಸುಮಾರು 20 ವರ್ಷಗಳ ಕಾಲ ಭಾರತ ಅಫ್ಘಾನ್‌ಗೆ ನಿರಂತರವಾಗಿ ನೆರವು ನೀಡುತ್ತಾ ಬಂದಿದೆ. ಡ್ಯಾಂ, ರಸ್ತೆ, ಕುಡಿಯುವ ನೀರು ಸೇರಿದಂತೆ ಸಾವಿರಾರು ಕೋಟಿ ಹಣವನ್ನು ಭಾರತ ಹೂಡಿಕೆ ಮಾಡುತ್ತದೆ. ಹೀಗಾಗಿ ಭಾರತ ಮತ್ತು ಅಫ್ಘಾನ್‌ ಸಂಬಂಧ ತುಂಬಾ ಚೆನ್ನಾಗಿಯೇ ಇರುತ್ತದೆ. ಇತ್ತ ಕಾಶ್ಮೀರದಲ್ಲಿ ಕೂಡ ಭಯೋತ್ಪಾದನೆ ಕಡಿಮೆಯಾಗಿರುತ್ತದೆ. ಆದ್ರೆ. ಈಗ ಇರೋ ಪ್ರಶ್ನೆ ಭಾರತ ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡುತ್ತಾ?

ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಭಾರತ

ಹೌದು, ಇಲ್ಲಿಯವರೆಗೂ ಭಾರತ ತಾಲಿಬಾನ್‌ ಸರ್ಕಾರದ ಬಗ್ಗೆ ಯಾವುದೇ ಅಭಿಪ್ರಾಯವನ್ನು ಸ್ಟ್ರಾಂಗ್‌ ಆಗಿ ತಿಳಿಸಿಲ್ಲ. ಆದ್ರೆ, ತಾಲಿಬಾನ್‌ ಮುಖಂಡರು ನೀಡುತ್ತಿರೋ ಹೇಳಿಕೆ, ಅಲ್ಲಿಯ ಬೆಳವಣಿಗೆಯನ್ನು ಸುಕ್ಷ್ಮವಾಗಿ ಗಣನಿಸುತ್ತಿದೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರಕ್ಕೆ ಮುಂದಾಗಿಲ್ಲ. ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಮುಂದೆ ಏನಾಗುತ್ತೆ? ಅಮೆರಿಕ ಏನು ಕ್ರಮ ಕೈಗೊಳ್ಳುತ್ತದೆ? ರಷ್ಯಾ ನಿರ್ಧಾರವೇನು? ಭಾರತದ ಜೊತೆ ಆಪ್ತವಾಗಿರೋ ದೇಶಗಳ ನಿರ್ಧಾರ ಏನಾಗಿರುತ್ತೆ? ಅದನೆಲ್ಲಾ ಗಮನಿಸಿ ಭಾರತ ಒಂದು ನಿರ್ಧಾರ ಕೈಗೊಳ್ಳಲಿದೆ.

ಸದ್ಯಕ್ಕೆ ಭಾರತ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ. ತಾಲಿಬಾನ್‌ ಉಗ್ರರ ನಡೆ ಏನು ಅನ್ನೋದನ್ನು ಗಮನಿಸಬೇಕಾಗಿದೆ. ಯಾಕಂದ್ರೆ ಈಗಾಗಲೇ ತಾಲಿಬಾನ್‌ ಮುಖಂಡರು ಕಾಶ್ಮೀರದ ವಿಚಾರವನ್ನು ಎತ್ತಿದ್ದಾರೆ. ಒಬ್ಬರು ಕಾಶ್ಮೀರಕ್ಕೆ ತಮಗೂ ಸಬಂಧ ವಿಲ್ಲ ಅಂದ್ರೆ, ಇನ್ನು ಕೆಲವು ತಾಲಿಬಾನ್‌ ಮುಖಂಡರು ಕಾಶ್ಮೀರ ಸೇರಿದಂತೆ ಜಗತ್ತಿನಲ್ಲಿರೋ ಮುಸ್ಲಿಮರ ಬಗ್ಗೆ ಧ್ವನಿ ಎತ್ತುತ್ತೇವೆ ಅಂದಿದ್ದಾರೆ. ಇದೇ ಕಾರಣಕ್ಕೆ ಭಾರತ ಮಾನ್ಯತೆ ನೀಡುವ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಒಮ್ಮೆ ಕಾಶ್ಮೀರ ತಂಟೆಗೆ ಬಂದ್ರೆ ಭಾರತ ಕೂಡ ಮುಟ್ಟಿ ನೋಡಿಕೊಳ್ಳುವ ಏಟು ನೀಡಲು ಸಜ್ಜಾಗಿದೆ. ಹಾಗಾದ್ರೆ ಅಮೆರಿಕ ಏನು ಮಾಡುತ್ತೆ?

ಅಮೆರಿಕ ಮಾನ್ಯತೆ ನೀಡುತ್ತಾ?
ಅಮೆರಿಕದ ತಂತ್ರಗಾರಿಕೆ ಏನು?

ಹಿಂದೆ ಮುಂದೆ ನೋಡದೇ ಅಮೆರಿಕ ಏನಾದ್ರು, ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡಿದ್ರೆ ಇಡೀ ವಿಶ್ವದ ಮುಂದೆ ನಗೆಪಾಟಿಲಿಗೆ ಗುರಿಯಾಗುತ್ತದೆ. ಯಾಕಂದ್ರೆ, ಇಂದು ಅಫ್ಘಾನ್‌ನಲ್ಲಿ ತಾಲಿಬಾನ್‌ ಉಗ್ರರು ಸರ್ಕಾರ ರಚಿಸಲು ಅಮೆರಿಕವೇ ನೇರ ಕಾರಣ ಅನ್ನೋದನ್ನು ಎಲ್ಲರೂ ಆರೋಪಿಸುತ್ತಿದ್ದಾರೆ. ಒಮ್ಮೆ ಅಮೆರಿಕ ಸೇನೆ ಅಫ್ಘಾನ್‌ನಿಂದ ವಾಪಸ್‌ ಪಡೆಯದಿದ್ದರೇ ತಾಲಿಬಾನ್ ಉಗ್ರರು ಸರ್ಕಾರ ರಚಿಸಲು ಸಾಧ್ಯವೇ ಇರಲಿಲ್ಲ. ಅಮೆರಿಕ ಸೇನೆ ಯಾವಾಗ ವಾಪಸ್‌ ಪಡೆಯಿತೋ ಅವಾಗಲೇ ನೋಡಿ ತಾಲಿಬಾನ್‌ ಉಗ್ರರು ಚಿಗುರಿಕೊಂಡು ಬಿಟ್ಟರು. ಆಗಸ್ಚ್‌ 15 ರಂದು ಇಡೀ ಅಫ್ಘಾನ್‌ ವಶಪಡಿಸಿಕೊಂಡು ಬಿಟ್ರು.

ಹಾಗಾದ್ರೆ, ಅಮೆರಿಕ ಏನು ಮಾಡುತ್ತೆ? ಒಂದೇ ಮಾತದಲ್ಲಿ ಹೇಳ್ಬೇಕು ಅಂದ್ರೆ, ಅಮೆರಿಕ ಸದ್ಯಕ್ಕೆ ಮಾನ್ಯತೆ ನೀಡುವುದಿಲ್ಲ. ಅಂತಹ ಯಾವುದೇ ಲಕ್ಷಣ ಅಮೆರಿಕದಲ್ಲಿ ಕಾಣಿಸುತ್ತಿಲ್ಲ. ಅದರಲ್ಲಿಯೂ ಸೆಪ್ಟೆಂಬರ್‌ 11 ರಂದು ತಾಲಿಬಾನಿಗಳು ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಒಮ್ಮೆ ಹಾಗಾದ್ರೆ, ಅಮೆರಿಕಾಗೆ ಟಾಂಗ್‌ ನೀಡಿದಂತೆ ಆಗುತ್ತದೆ. ಯಾಕಂದ್ರೆ, ಅಮೆರಿಕ ಅವಳಿ ಗೋಪುರದ ಮೇಲೆ ದಾಳಿ ನಡೆಸಿದ್ದು ಸೆಪ್ಟೆಂಬರ್‌ 11 ರಂದೇ ಆಗಿದೆ. ಇದೇ ಸೆಪ್ಟೆಂಬರ್‌ 11ಕ್ಕೆ ಅದು 20 ವರ್ಷ ಆಗುತ್ತದೆ. ಅಮೆರಿಕಾಗೆ ಸೆಪ್ಟೆಂಬರ್‌ 11 ಅನ್ನೋದು ಕರಾಳ ದಿನವಾಗಿದೆ. ಇತ್ತ ತಾಲಿಬಾನಿಗಳು ಅಂದೇ ಸರ್ಕಾರ ರಚಿಸಿ ಟಾಂಗ್‌ ನೀಡಲು ಮುಂದಾಗಿದ್ದಾರೆ.

ಇದೇ ದೃಷ್ಟಿಯಿಂದ ಅಮೆರಿಕ ಮಾನ್ಯತೆ ನೀಡಲು ಹೋಗಿಲ್ಲ. ಭಾರತ ಹೇಗೆ ಕಾದು ನೋಡುವ ತಂತ್ರವನ್ನು ಅನುಸರಿಸಿತ್ತೋ ಅದೇ ತಂತ್ರವನ್ನು ಅಮೆರಿಕ ಮಾಡಲಿದೆ. ಒಮ್ಮೆ ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡಿ ಅವರ ಜೊತೆಗೆ ರಾಜತಾಂತ್ರಿಕ ಮಾತುಕತೆ ನಡೆಸಿದ್ರೆ ಅಮೆರಿಕಾಗೆ ಅದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ತಾಲಿಬಾನಿಗಳನ್ನು ರಾಜತಾಂತ್ರಿಕವಾಗಿ ಹೇಗೆ ಕಟ್ಟಿಹಾಕಲು ಸಾಧ್ಯವೋ ಅದೆಲ್ಲವನ್ನು ಅಮೆರಿಕ ಮಾಡಲಿದೆ. ಅಮೆರಿಕವನ್ನು ಎದುರುಹಾಕಿಕೊಂಡು ಬದುಕುವುದು ಅಷ್ಟು ಸಾಧ್ಯವಿಲ್ಲ ಅನ್ನೋದನ್ನು ತೋರಿಸಲಿದೆ.

ಭಾರತದ ಹಾದಿ ಹಿಡಿದ ಹಲವು ರಾಷ್ಟ್ರಗಳು

ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡುವಲ್ಲಿ ಭಾರತ ಹೇಗೆ ಕಾದು ನೋಡುವ ತಂತ್ರ ಅನುಸರಿಸುತ್ತಾ ಇದೆಯೋ ಅದೇ ಹಾದಿಯನ್ನು ಹಲವು ರಾಷ್ಟ್ರಗಳು ಮಾಡುತ್ತಿವೆ. ಪ್ರಮುಖವಾಗಿ ಬ್ರಿಟನ್‌, ಜಪಾನ್‌, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ಹಲವಾರು ರಾಷ್ಟ್ರಗಳು ಮಾನ್ಯತೆ ನೀಡಲು ಮುಂದಿಲ್ಲ. ಮಾನ್ಯತೆ ನೀಡುವುದಿಲ್ಲ ಅಂತಲೂ ಹೇಳಿಲ್ಲ. ಹೀಗಾಗಿ ಆ ರಾಷ್ಟ್ರಗಳು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿವೆ. ಮುಖ್ಯವಾಗಿ ಈ ಎಲ್ಲಾ ರಾಷ್ಟ್ರಗಳು ಅಮೆರಿಕ ಮತ್ತು ವಿಶ್ವಸಂಸ್ಥೆಯನ್ನು ಎದುರು ನೋಡುತ್ತಿವೆ. ಅಮೆರಿಕ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದೇ ನಿರ್ಧಾರವನ್ನು ಆಯಾ ರಾಷ್ಟ್ರಗಳು ಕೈಗೊಲ್ಲಿವೆ.

ಚೀನಾ, ಪಾಕಿಸ್ತಾನದಿಂದ ಮಾತ್ರ ಮಾನ್ಯತೆ

ತಾಲಿಬಾನ್‌ ಉಗ್ರರಿಗೆ ಹಿಂಬಾಗಿಲಿಂದ ನೆರವು ನೀಡಿದ್ದೆ ಚೀನಾ ಮತ್ತು ಪಾಕಿಸ್ತಾನಗಳು ಅನ್ನೋದು ಇಡೀ ಜಗತ್ತೇ ಹೇಳುತ್ತಿದೆ. ಈ ನಡುವೆ ತಾಲಿಬಾನ್‌ ಉಗ್ರರು ಅಧಿಕಾರ ಹಿಡಿಯುತ್ತಿದ್ದಂತೆ ಪಾಕಿಸ್ತಾನ ಮತ್ತು ಚೀನಾದಲ್ಲಿ ಸಂಭ್ರಮ ಮನೆ ಮಾಡಿತ್ತು. ಯಾಕಂದ್ರೆ, ಪಾಕಿಸ್ತಾನಕ್ಕೆ ತಾಲಿಬಾನ್‌ ಉಗ್ರರಿಂದ ನೆರವು ಸಿಗಲಿದೆ. ಇದೀಗ ರಚನೆಯಾಗಿರೋ ತಾಲಿಬಾನ್‌ ಸಂಪುಟದಲ್ಲಿ ಪಾಕ್‌ ಮೂಲದ ಹಕ್ಕಾನಿ ನೆಟ್ವರ್ಕ್‌ ಉಗ್ರರಿಗೂ ಸಚಿವ ಸ್ಥಾನ ನೀಡಲಾಗಿದೆ. ಈ ನಡುವೆ ಚೀನಾ ತಂತ್ರವೇ ಮತ್ತೊಂದಾಗಿದೆ.

ಅದರ ಉದ್ದೇಶ ಅಫ್ಘಾನಿಸ್ತಾನ್‌ದಲ್ಲಿರೋ 74 ಲಕ್ಷ ಕೋಟಿ ಗಣಿಗಾರಿಕೆಯ ಮೇಲೆ ಕಣ್ಣು. ಹೌದು, ಚೀನಾ ಅದೇ ಉದ್ದೇಶಕ್ಕೆ ತಾಲಿಬಾನ್‌ಗಳಿಗೆ ನೆರವು ನೀಡುತ್ತಿದೆ. ಈಗಾಗಲೇ 213 ಕೋಟಿ ಹಣವನ್ನು ತಾಲಿಬಾನ್‌ ಸರ್ಕಾರಕ್ಕೆ ಚೀನಾ ಘೋಷಣೆ ಮಾಡಿದೆ. ಚೀನಾ ಮತ್ತು ಪಾಕಿಸ್ತಾನಕ್ಕೆ ಇರೋ ಮತ್ತೊಂದು ಉದ್ದೇಶ ಅಂದ್ರೆ, ತಾಲಿಬಾನ್‌ ಉಗ್ರರ ಮೂಲಕ ಭಾರತವನ್ನು ಹೆಣೆಯುವುದಾಗಿದೆ. ಆದ್ರೆ, ಭಾರತ ಈಗ ಮೊದಲಿನಂತಿಲ್ಲ. ಏಟಿಗೆ ಎದುರೇಟು ನೀಡುವ ಅದ್ರೆ, ಬೇರೆ ದೇಶಕ್ಕೆ ನುಗ್ಗಿ ಹೊಡೆಯುವ ಸಾಮರ್ಥವನ್ನು ಹೊಂದಿದೆ ಅನ್ನೋದು ಜಗತ್ತಿಗೆ ಗೊತ್ತು.

ಅಫ್ಘಾನ್‌ ಸರ್ಕಾರಕ್ಕೆ ಚೀನಾ ಮತ್ತು ಪಾಕಿಸ್ತಾನ ಸರ್ಕಾಗಳು ಬೆಂಬಲ ನೀಡಿದ್ರೆ, ರಷ್ಯಾದು ಮತ್ತೊಂದು ಸಮಸ್ಯೆ. ರಷ್ಯಾಗೆ ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡುವ ಉದ್ದೇಶವಿದೆ. ಆದ್ರೆ, ತಾಲಿಬಾನ್‌ ಸರ್ಕಾರದಿಂದ ಉಗ್ರವಾದ ಇನ್ನಷ್ಟು ಹೆಚ್ಚಾಗುತ್ತದೆ. ಅದರಿಂದ ರಷ್ಯಾದಲ್ಲಿಯೂ ಭಯೋತ್ಪಾದಕ ಕೃತ್ಯಗಳು ನಡೆಯುತ್ತವೆ ಅನ್ನೋ ಭಯವಿದೆ. ಹೀಗಾಗಿಯೇ ರಷ್ಯಾ ಗೊಂದಲದಲ್ಲಿ ಇರುವಂತೆ ಕಾಣಿಸುತ್ತಿದೆ.

ಅಫ್ಘಾನ್‌ನಲ್ಲಿ ತಾಲಿಬಾನ್‌ ಸರ್ಕಾರದಿಂದ ಇಡೀ ಜಗತ್ತಿಗೆ ಅಪಾಯವಿರೋದು ಸತ್ಯ. ಹೀಗಾಗಿ ಕುತಂತ್ರಿ ಚೀನಾ, ಪಾಕಿಸ್ತಾನ ರಾಷ್ಟ್ರವನ್ನು ಬಿಟ್ಟು ಬೇರೆ ರಾಷ್ಟ್ರಗಳು ಮಾನ್ಯತೆ ನೀಡಲು ಹಿಂದೇಟು ಹಾಕುತ್ತಿದೆ. ಹಾಗಾದ್ರೆ ತಾಲಿಬಾನ್‌ ಸರ್ಕಾರದ ಗತಿ ಏನು ಅನ್ನೋದನ್ನು ಕಾದು ನೋಡೋಣ.

 

Source: newsfirstlive.com Source link