ರಷ್ಯಾ, ಅಮೆರಿಕ, ಬ್ರಿಟನ್‌ ಜೊತೆ ಅಜಿತ್ ದೋವಲ್ ಚರ್ಚಿಸಿದ್ದೇನು? ಅವರತ್ತ ಎಲ್ಲರ ದೃಷ್ಟಿ ಯಾಕೆ?

ರಷ್ಯಾ, ಅಮೆರಿಕ, ಬ್ರಿಟನ್‌ ಜೊತೆ ಅಜಿತ್ ದೋವಲ್ ಚರ್ಚಿಸಿದ್ದೇನು? ಅವರತ್ತ ಎಲ್ಲರ ದೃಷ್ಟಿ ಯಾಕೆ?

ಅಜಿತ್‌ ದೋವಲ್‌ ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾರೆ. ಅವರ ಹೆಸರು ಕೇಳಿದ್ರೆ ಪಾಕಿಸ್ತಾನವೇ ವಿಚಲಿತವಾಗಿ ಬಿಡುತ್ತೆ. ಭಯೋತ್ಪಾದಕರು ನಿದ್ದೆಯನ್ನೇ ಬಿಟ್ಟುಬಿಡ್ತಾರೆ. ಇದೀಗ ಅಮೆರಿಕ, ರಷ್ಯಾ, ಬ್ರಿಟನ್‌ ಭದ್ರತಾ ಅಧಿಕಾರಿಗಳು, ಸ್ಪೈಮಾಸ್ಟರ್‌ಗಳು ಕೂಡ ಭಾರತದ ರಿಯಲ್‌ ಜೆಮ್ಸ್‌ ಬಾಂಡ್‌ ಅಜಿತ್‌ ದೋವಲ್‌ ಭೇಟಿಯಾಗುತ್ತಿರೋದು ಯಾಕೆ ಗೊತ್ತಾ?

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೆಸರಿನಲ್ಲಿಯೇ ಒಂದು ಗತ್ತಿದೆ. ಇವರ ಇತಿಹಾಸದ ಪುಟಗಳನ್ನು ತಿರುವಿ ನೋಡಿದ್ರೆ, ಮೈರೋಮಾಂಚನಗೊಳಿಸೋ ವಿಷಯಗಳು ತೆರೆದುಕೊಳ್ಳುತ್ತವೆ. ಅದರಲ್ಲಿಯೂ ಅಜಿತ್‌ ದೋವಲ್‌ ಪಾಕಿಸ್ತಾನದಲ್ಲಿ ಆಟೋ ಚಾಲಕನಾಗಿ ಮಾಡಿರೋ ಗೂಢಚಾರಿಗೆ ಸಾಮಾನ್ಯ ಸಾಧನೆಯಲ್ಲ. ಅದೆಷ್ಟೋ ಬಾರಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಇಂದಿಗೂ ಕೂಡ ಭಯೋತ್ಪಾದಕರಿಗೆ ಸಿಂಹಸ್ವಪ್ನವಾಗಿ ಬಿಟ್ಟಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಗಂಡಿಯಲ್ಲಿ ಏನೇ ಸಮಸ್ಯೆ ಆಗಲಿ, ದೇಶದವೊಳಗೆ ಏನೇ ಸಮಸ್ಯೆ ಆಗಿಲಿ ಅಲ್ಲಿ ಅಜಿತ್‌ ದೋವಲ್‌ ಇರ್ತಾರೆ. ಅಜಿತ್‌ ದೋವಲ್‌ ಎಂಟ್ರಿ ಆದ್ರು ಅಂದ್ರೆ, ಪ್ರತಿಯೊಂದು ಘಟನೆಯಲ್ಲಿಯೂ ಎರಡು ಅಭ್ಯಾಯ ಆರಂಭವಾಗುತೆ. ಒಂದು ಅದ್ಯಾಯ ದೋವಲ್‌ ಎಂಟ್ರಿ ಆಗುವ ಮೊದಲು, ಮತ್ತೊಂದು ಅದ್ಯಾಯ ದೋವಲ್‌ ಎಂಟ್ರಿಯಾದ ನಂತರ ಹೀಗೆ ವಿಭಾಗವಾಗುತ್ತೆ. ಹೀಗಾಗಿಯೇ ಭಾರತದ ರಿಯಲ್‌ ಜೇಮ್ಸ್‌ ಬಾಂಡ್‌ ಎಂದೇ ಇವರು ಖ್ಯಾತರಾಗಿದ್ದಾರೆ. ಇಂತಹ ಚಾಣಕ್ಯನನ್ನು ಇಂದು ಸೂಪರ್‌ ಪವರ್‌ ರಾಷ್ಟ್ರಗಳ ಭದ್ರತಾ ಸಲಹೆಗಾರರು, ಸ್ಪೈಮಾಸ್ಟರ್‌ಗಳು,  ಭೇಟಿಯಾಗುತ್ತಿದ್ದಾರೆ, ಚರ್ಚೆ ನಡೆಸುತ್ತಿದ್ದಾರೆ. ಅವರೆಲ್ಲಾ ಯಾಕೆ ಭೇಟಿ ಆಗ್ತಿದ್ದಾರೆ ಅನ್ನೋದನ್ನು ಹೇಳ್ತೀವಿ, ಅದಕ್ಕೂ ಮುನ್ನ ಯಾಱರು ಭೇಟಿಯಾಗಿದ್ದಾರೆ ಅನ್ನೋದನ್ನು ಹೇಳ್ತೀವಿ ನೋಡಿ.

ದೋವಲ್ ಭೇಟಿ ಮಾಡಿದ ಅಮೆರಿಕದ ಸ್ಪೈಮಾಸ್ಟರ್‌

ಅಮೆರಿಕ ಅಂದ್ರೆ, ಸೂಪರ್‌ ಪವರ್‌ ರಾಷ್ಟ್ರ. ಅದರ ಮಿಲಿಟರಿ ಸಾಮರ್ಥ್ಯ ವಿಶ್ವದಲ್ಲಿಯೇ ಬಲಿಷ್ಠವಾದದ್ದು. ಗೂಢಚಾರಿಕೆ, ಗುಪ್ತಚರ ವಿಷಯದಲ್ಲಿಯೂ ಅಮೆರಿಕ ಎತ್ತಿದ ಕೈಯಾಗಿದೆ. ಅದಲ್ಲಿಯೂ ಗುಪ್ತಚರ ಅಧಿಕಾರಿಗಳು ಯಾವ ರಾಷ್ಟ್ರದಲ್ಲಿ ಏನು ಆಗುತ್ತಿದೆ. ಏನೇನು ಪಿತೂರಿ ನಡೆಯುತ್ತಿದೆ ಅನ್ನೋದನೆಲ್ಲಾ ಮೊದಲ ಅರಿತು ಬಿಡ್ತಾರೆ. ಭಯೋತ್ಪಾದಕ ದಾಳಿಗಳನ್ನು ಕೂಡ ಮೊದಲೇ ಅರಿತು ಎಚ್ಚರಿಕೆ ರವಾನಿಸುತ್ತಾರೆ. ಎಷ್ಟೋ ರಾಷ್ಟ್ರಗಳಿಗೆ ಗೌಪ್ಯ ಮಾಹಿತಿ ನೀಡಿ ಅದೆಷ್ಟೋ ಭಯೋತ್ಪಾದಕ ದಾಳಿಗಳನ್ನು ತಪ್ಪಿಸಿದ್ದಾರೆ. ಅಷ್ಟೊಂದು ಖ್ಯಾತಿ ಅಮೆರಿಕಾಗೆ ಇದೆ. ಆದ್ರೆ, ಇತ್ತೀಚೆಗೆ ಅಮೆರಿಕದ ಸ್ಪೈಮಾಸ್ಟರ್‌ ವಿಲಿಯಂ ಬನ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಯಾವ ವಿಷಯವನ್ನು ಚರ್ಚೆ ಮಾಡಿದ್ದಾರೆ ಅನ್ನೋದು ಬಹಿರಂಗವಾಗಿಲ್ಲ. ಆದ್ರೆ, ಇಂತಹ ಸಂದರ್ಭದಲ್ಲಿ ಅಜಿತ್‌ ದೋವಲ್‌ ಭೇಟಿ ಯಾಕೆ ಅನ್ನೋದು ಅರ್ಥವಾಗಿ ಬಿಟ್ಟಿದೆ.

ದೋವಲ್‌ ಭೇಟಿ ಮಾಡಿದ ರಷ್ಯಾದ ನಿಕೋಲಾಯ್‌ ಸತ್ರುಶೇಷ್‌

ತಂತ್ರಜ್ಞಾನ, ಗೂಢಚಾರಿಗೆ, ಗುಪ್ತದಳ ವಿಚಾರದಲ್ಲಿ ಅಮೆರಿಕದಷ್ಟೇ ಸಾಮರ್ಥ್ಯವನ್ನು ರಷ್ಯಾ ಕೂಡ ಹೊಂದಿದೆ. ಹೀಗಾಗಿ ವಿಶ್ವದ ಸೂಪರ್‌ ಪವರ್‌ ರಾಷ್ಟ್ರಗಳ ಸಾಲಿನಲ್ಲಿ ರಷ್ಯಾ ಕೂಡ ಸೇರಿದೆ. ಮಿಲಿಟರಿ ಸಾಮರ್ಥ್ಯದಲ್ಲಿ ಅಮೆರಿಕಾಗಿಂತ ಕಡಿಮೆ ಇರಬಹುದು. ಆದ್ರೆ, ತಂತ್ರಜ್ಞಾನದಲ್ಲಿ, ಫೈಟರ್‌ ಜೆಟ್‌ಗಳ ನಿರ್ಮಾಣದಲ್ಲಿ, ಯುದ್ಧಾಸ್ತ್ರ ತಯಾರಿಕೆಯಲ್ಲಿ ರಷ್ಯಾ ಕೂಡ ಎತ್ತಿದ ಕೈಯಾಗಿದೆ. ಇಡೀ ಜಗತ್ತು ಯುದ್ಧಾಸ್ತ್ರಗಳಲ್ಲಿ ಹೆಚ್ಚಿನದಾಗಿ ಅವಲಂಬಿತವಾಗಿರೋದು ಒಂದು ಅಮೆರಿಕ ಮತ್ತೊಂದು ರಷ್ಯಾವಾಗಿದೆ. ಅಷ್ಟೊಂದು ಪವರ್‌ಫುಲ್‌ ಆಗಿರೋ ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿಕೋಲಾಯ್‌ ಸತ್ರುಶೇಷ್‌ ಕೂಡ ಇತ್ತೀಚೆಗೆ ಅಜಿತ್‌ ದೋವಲ್‌ ಅವರನ್ನು ಭೇಟಿ ಮಾಡಿದ್ದಾರೆ.

ಅಜಿತ್‌ ಭೇಟಿ ಮಾಡಿದ ಬ್ರಿಟನ್‌ನ ರಿಚರ್ಡ್‌ ಮೂರ್‌

ಸೇನಾ ಸಾಮರ್ಥ್ಯ, ಗುಪ್ತದಳ, ಗೂಢಚಾರಿಕೆ ವಿಷಯದಲ್ಲಿ ಬ್ರಿಟನ್‌ ಕೂಡ ಯಾವ ರಾಷ್ಚ್ರಕ್ಕೂ ಕಮ್ಮಿ ಇಲ್ಲ. ಹೀಗಾಗಿಯೇ ಯಾವುದೇ ರಾಷ್ಟ್ರವಾದ್ರೂ ಬ್ರಿಟನ್‌ ತಂಟೆಗೆ ಹೋಗಬೇಕು ಅಂದ್ರೆ ಒಂದು ಕ್ಷಣ ಯೋಚನೆ ಮಾಡಬೇಕಾಗುತ್ತೆ. ಆದ್ರೆ, ಅಷ್ಟೊಂದು ಸಾಮರ್ಥ್ಯ ರಾಷ್ಟ್ರ ಬ್ರಿಟನ್‌. ಆದ್ರೆ, ಆ ರಾಷ್ಟ್ರದ ಸೀಕ್ರೆಟ್‌ ಇಂಟಲಿಜೆನ್ಸ್‌ ಸರ್ವೀಸ್‌ ಅಥವಾ ಎಂಐ 6 ಮುಖ್ಯಸ್ಥ ರಿಚರ್ಡ್‌ ಮೂರ್‌ ಇತ್ತೀಚೆಗೆ ಅಜಿತ್‌ ದೋವಲ್‌ ಅವರನ್ನು ಭೇಟಿ ಮಾಡಿದ್ದಾರೆ. ಹಲವಾರು ವಿಚಾರಗಳನ್ನು ಚರ್ಚೆ ನಡೆಸಿದ್ದಾರೆ. ಹಾಗಾದ್ರೆ, ಇವರೆಲ್ಲಾ ಅಜಿತ್‌ ದೋವಲ್‌ ಭೇಟಿಯಾಗುತ್ತಿರೋದು ಯಾಕೆ? ಅದಕ್ಕೆಲ್ಲ ಕಾರಣ ಅಫ್ಘಾನಿಸ್ತಾನ್‌.

ತಾಲಿಬಾನಿಗಳಿಂದ ಅಫ್ಘಾನ್‌ ವಶ

ಅಜಿತ್‌ ದೋವಲ್‌ಗೆ ಭಾರೀ ಬೇಡಿಕೆ

ಆಗಸ್ಟ್‌ 15 ರಂದು ಅಫ್ಘಾನಿಸ್ತಾನ್‌ ಅನ್ನು ತಾಲಿಬಾನ್‌ ಉಗ್ರರು ವಶಪಡಿಸಿಕೊಂಡಿದ್ದಾರೆ. ಅಂದೇ ಅಫ್ಘಾನ್‌ನಲ್ಲಿದ್ದ ಪ್ರಜಾಪ್ರಭುತ್ವದ ಸರ್ಕಾರ ಪತನವಾಗಿದೆ. ಹೇಳಿ ಕೇಳಿ ತಾಲಿಬಾನ್‌ ಮುಖಂಡರು ಜಾಗತಿಕ ಉಗ್ರರಾಗಿದ್ದಾರೆ. ಅವರ ಸಚಿವ ಸಂಪುಟದಲ್ಲಿ ಕೂಡ ಹಲವಾರು ಮೋಸ್ಟ್‌ ವಾಂಟೆಡ್‌ ಉಗ್ರರಿದ್ದಾರೆ. ಇದೇ ವಿಚಾರ ಅತಿರಥ ಮಹಾರಥ ರಾಷ್ಟ್ರಗಳ ಭದ್ರತಾ ಸಲಹೆಗಾರರು, ಸ್ಪೈ ಮಾಸ್ಟರ್‌ಗಳು ಭೇಟಿಯಾಗುತ್ತಿದ್ದಾರೆ. ಅಫ್ಘಾನ್‌ ವಿಚಾರವಾಗಿಯೇ ಚರ್ಚೆ ನಡೆಸುತ್ತಿದ್ದಾರೆ. ಹಾಗಾದ್ರೆ, ತಾಲಿಬಾನ್‌ ಉಗ್ರರ ವಿಚಾರದಲ್ಲಿ ಅಜಿತ್‌ ದೋವಲ್‌ ತಜ್ಞರಿದ್ದಾರಾ?

ಉಗ್ರರ ಬಗ್ಗೆ ಇಂಚಿಂಚೂ ಮಾಹಿತಿ ಇದೆ ದೋವಲ್‌ಗೆ

ಅಮೆರಿಕಾ, ಬ್ರಿಟನ್‌, ರಷ್ಯಾ ಸೇರಿದಂತೆ ವಿವಿಧ ಸೂಪರ್‌ ಪವರ್‌ ರಾಷ್ಟ್ರಗಳ ಭದ್ರತಾ ಸಲಹೆಗಾರರು ಭೇಟಿಯಾಗುತ್ತಿರುವ ಹಿಂದೆ ಒಂದು ಭಯವಿದೆ. ಏನಕ್ಕೆ ಅದ್ರೆ ತಾಲಿಬಾನ್‌ ಉಗ್ರರು. ತಾಲಿಬಾನ್‌ ಉಗ್ರರಿಂದ ಮುಂದೆ ಏನಾಗಬಹುದು? ಯಾಗತ್ತಿನ ಯಾವ ಯಾವ ರಾಷ್ಟ್ರಗಳು ಯಾವ ರೀತಿಯ ಸವಾಲನ್ನು ಎದುರಿಸಬೇಕಾಗುತ್ತದೆ ಅನ್ನೋದು ಆಯಾ ದೇಶಗಳ ಭದ್ರತಾ ಸಲಹೆಗಾರರಿಗೆ ಅರ್ಥವಾಗಿ ಬಿಟ್ಟಿದೆ. ಹೀಗಾಗಿ ಅಜಿತ್‌ ದೋವಲ್ ಭೇಟಿ ಮಾಡುತ್ತಿರುವುದು. ಭಾರತದ ರಿಯಲ್‌ ಜೆಮ್ಸ್‌ ಬಾಂಡ್‌ ಖ್ಯಾತಿಯ ಅಜಿದ್‌ ದೋವಲ್‌ ಸಾಮಾನ್ಯ ಮನುಷ್ಯನಲ್ಲ. ತಾಲಿಬಾನ್‌ ಉಗ್ರರ, ಪಾಕಿಸ್ತಾನ ಉಗ್ರರ ಬಗ್ಗೆ ಇಂಚಿಂಚೂ ಮಾಹಿತಿ ತಿಳಿದುಕೊಂಡಿದ್ದಾರೆ. ಯಾವ ಸಂಘಟನೆ ಹೇಗೆ ಕೆಲಸ ಮಾಡುತ್ತದೆ. ಯಾವ ಸಂಘಟನೆಯ ಹಿಂದೆ ಯಾರಿದ್ದಾರೆ? ಅವರ ಮೂಲ ನೆಲೆ, ಅವರ ಕಾರ್ಯ ಚರ್ಟುವಟಿಕೆ ಈ ಎಲ್ಲಾ ಸಂಪೂರ್ಣ ಮಾಹಿತಿ ಅಜಿತ್‌ ದೋವಲ್‌ಗೆ ಇದೆ. ಇದಕ್ಕೆಲ್ಲಾ ಕಾರಣ ಅಜಿತ್‌ ದೋವಲ್‌ ಮಾಡಿದ ಗೂಢಚಾರಿಕೆ.

ಪಾಕಿಸ್ತಾನದಲ್ಲಿ ಗೂಢಚಾರಿಕೆ ಮಾಡಿದ ಅಜಿತ್‌ ದೋವಲ್‌

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರೋ ಅಜಿತ್‌ ದೋವಲ್‌ ಐಪಿಎಸ್‌ ಅಧಿಕಾರಿಯಾಗಿ ಕೇರಳದಲ್ಲಿ ಕೆಲಸ ಮಾಡಿದವರು. ಅನಂತರ ಗೂಢಚಾರಿಯಾಗಿ ಪಾಕಿಸ್ತಾನದಲ್ಲಿ ಕೆಲಸ ಮಾಡಿದ್ದಾರೆ. ಸುಮಾರು 7 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಆಟೋ ಚಾಲಕರಾಗಿ ಇದ್ದುಕೊಂಡ ಅಲ್ಲಿಯ ಭಯೋತ್ಪಾದಕರ ಬಗ್ಗೆ ಭಾರತಕ್ಕೆ ಮಾಹಿತಿ ರವಾನಿಸಿದವರು. ಪಾಕಿಸ್ತಾನದಲ್ಲಿರೋ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಮತ್ತು ಪಾಕ್‌ನಲ್ಲಿ ಹುಟ್ಟಿ ಅಫ್ಘಾನ್‌ಗೆ ನುಗ್ಗಿರೋ ಭಯೋತ್ಪಾದಕರ ಬಗ್ಗೆ ದೋವಲ್‌ ಸಂಪೂರ್ಣ ತಿಳಿದುಕೊಂಡಿದ್ದಾರೆ. ಇದೇ ಕಾರಣಕ್ಕೆ ಬೇರೆ ಬೇರೆ ರಾಷ್ಟ್ರಗಳ ಭದ್ರತಾ ಸಲಹೆಗಾರರು ಇಂದು ಅಜಿತ್‌ ದೋವಲ್‌ ಭೇಟಿ ಮಾಟಿ ಅಫ್ಘಾನ್‌ ವಿಚಾರವಾಗಿ ಚರ್ಚೆ ನಡೆಸುತ್ತಿದ್ದಾರೆ. ತಾಲಿಬಾನ್‌ ಉಗ್ರರಿಂದ ಆಗಬಹುದಾದ ಅನಾಹುತ ಏನು? ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಅನ್ನೋದನ್ನು ಚರ್ಚೆ ಮಾಡುತ್ತಿದ್ದಾರೆ.

ಕಂದಹಾರ್‌ ಪ್ರಕರಣ ಯಶಸ್ವಿಯಾಗಿ ನಿರ್ವಹಣೆ

1999ರಲ್ಲಿ ಡಿಸೆಂಬರ್‌ 24, ಅಂದು ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ತಾಲಿಬಾನ್‌ ಉಗ್ರರು ಅಪಹರಣ ಮಾಡುತ್ತಾರೆ. ಹಾಗೇ ಅಪಹರಣ ಮಾಡಿದ ವಿಮಾನವನ್ನು ಕಂದಹಾರ್‌ಗೆ ಒಯ್ಯಲಾಗಿರುತ್ತದೆ. ಭಾರತದಲ್ಲಿ ಬಂಧನದಲ್ಲಿರೋ ಎಲ್ಲ ಉಗ್ರರನ್ನು ಬಿಟ್ಟರೆ ಮಾತ್ರ ವಿಮಾನದಲ್ಲಿರೋ 174 ಭಾರತೀಯರನ್ನು ಬಿಡುತ್ತೇವೆ ಅಂತ ಉಗ್ರರು ಬೇಡಿಕೆ ಇಡುತ್ತಾರೆ. ಇಂತಹ ಇಕ್ಕಟಿನ ಸಂದರ್ಭದಲ್ಲಿ ಅಜಿತ್‌ ದೋವಲ್‌ ಸಂಧಾನಕಾರರಾಗಿ ಕೆಲಸ ಆರಂಭಿಸುತ್ತಾರೆ. ತಾಲಿಬಾನ್‌ ಉಗ್ರರ ಜೊತೆ ಮಾತುಕತೆ ನಡೆಸುತ್ತಾರೆ. ಅಂತಿಮವಾಗಿ ಮೂರು ಉಗ್ರರನ್ನು ಮಾತ್ರ ಬಿಡುಗಡೆಗೆ ಒಪ್ಪಿಗೆ ಪಡೆದು ವಿಮಾನದಲ್ಲಿರೋ 174 ಭಾರತೀಯರನ್ನು ಕರೆತರುತ್ತಾರೆ. ಬಹಶಃ ಈ ಪ್ರಕರಣದಲ್ಲಿ ಅಜಿತ್‌ ದೋವಲ್‌ ಎಂಟ್ರಿಯಾಗದಿದ್ರೆ, ಭಾರತದಲ್ಲಿ ಬಂಧನದಲ್ಲಿಯೋ ಒಟ್ಟು ಉಗ್ರರನ್ನು ಬಿಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಅಜಿತ್‌ ದೋವಲ್‌ ಸೂಪರ್‌ ಪವರ್‌ ರಾಷ್ಟ್ರಗಳಿಗೆ ಸೂಪರ್‌ ಪವರ್‌ ವ್ಯಕ್ತಿಯಾಗಿದ್ದಾರೆ. ಅಜಿತ್‌ ದೋವಲ್‌ ಸಾಮರ್ಥ್ಯವನ್ನು ಅರಿತೇ ಇಂದು ಅತಿರಥ ಮಹಾರಥ ರಾಷ್ಟ್ರಗಳ ಭದ್ರತಾ ಸಲಹೆಗಾರರು ಭೇಟಿಯಾಗುತ್ತಿದೆ. ಅಜಿತ್‌ ದೋವಲ್‌ ಈಗ ಇಡೀ ವಿಶ್ವಕ್ಕೆ ರಿಯಲ್‌ ಜೆಮ್ಸ್‌ ಬಾಂಡ್‌ ಆಗಿ ಕಾಣಿಸುತ್ತಿದ್ದಾರೆ.

Source: newsfirstlive.com Source link