ಚೌತಿಯ ದಿನದಂದೇ ದೇವಸ್ಥಾನ ನೆಲಸಮ-ತಮ್ಮದೇ ಸರ್ಕಾರ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ಚೌತಿಯ ದಿನದಂದೇ ದೇವಸ್ಥಾನ ನೆಲಸಮ-ತಮ್ಮದೇ ಸರ್ಕಾರ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ಮೈಸೂರು: ಬಿಜೆಪಿ ಆಡಳಿತದಲ್ಲೇ ನಂಜನಗೂಡಿನ ಹುಚ್ಚಗಣಿ ದೇಗುಲವನ್ನ ನೆಲಸಮ ಮಾಡಲಾಗಿದೆ. ಹಿಂದೂ ಧರ್ಮದ ಭಾವನೆಗೆ ಖುದ್ದು ಬಿಜೆಪಿಯೇ ಧಕ್ಕೆ ತಂದುಬಿಟ್ಟಿದೆ. ಇದು ಹಿಂದೂಪರ ಸಂಘಟನೆಗಳನ್ನು ಕೆರಳಿ ಕೆಂಡವಾಗಿಸಿದೆ. ಸರ್ಕಾರದ ವಿರುದ್ಧದ ಸಂಘ ಈ ಕಿಡಿ ಸಿಎಂ ಮಗ್ಗಲನ್ನ ಸುಡಲಾರಂಭಿಸಿದೆ.

ಬಿಜೆಪಿ ಆಡಳಿತದಲ್ಲೇ ದೇಗುಲ ನೆಲಸಮಕ್ಕೆ RSS ಬೇಸರ

ನಂಜನಗೂಡು ಹುಚ್ಚಗಣಿ ಗ್ರಾಮದ ದೇವಸ್ಥಾನ ನೆಲಸಮ ಮಾಡಲಾಗಿದೆ. ಸುಪ್ರೀಂ ಆದೇಶವಿದ್ರೂ ಈವರೆಗೆ ದೇವಸ್ಥಾನ ನೆಲಸಮ ಆಗಿರಲಿಲ್ಲ. ಆದ್ರೆ, ಬಿಜೆಪಿ ಆಡಳಿತದಲ್ಲೇ ಇಂಥದ್ದೊಂದು ಕೆಲಸಕ್ಕೆ ಅಧಿಕಾರಶಾಹಿ ಕೈಹಾಕಿದೆ. ಇದು ಸಹಜವಾಗಿಯೇ ಹಿಂದೂಪರ ಸಂಘಟನೆಗಳ ಕೆರಳಿಸಿದೆ. ಬಿಜೆಪಿ ಸರ್ಕಾರದಲ್ಲಿ ದೇಗುಲ ನೆಲಸಮಕ್ಕೆ RSS ಬೇಸರಗೊಂಡಿದೆ.

blank

ಹಿಂದುತ್ವ ಅಂದ್ರೆ ಆರ್​​ಎಸ್​​ಎಸ್​​, ಆರ್​​ಎಸ್​ಎಸ್​ ಅಂದ್ರೆ ಹಿಂದುತ್ವ. ಇದರ ನೆರಳಿನಲ್ಲಿರುವ ಬಿಜೆಪಿ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತರುವುದಿಲ್ಲ. ತರಲೂಬಾರದು ಅನ್ನೋದು ಸಂಘದ ಆಶಯ. ಅದ್ರಂತೆ ಬಿಜೆಪಿ ಕೂಡ ನಡೆದು ಬಂದಿದೆ, ಪರಿಪಾಲಿಸಿದೆ. ಆದ್ರೆ ರಾಜ್ಯದಲ್ಲಿ ಇದು ಸುಳ್ಳಾಯ್ತಾ? ಅನ್ನೋ ಪ್ರಶ್ನೆಯನ್ನ ಖುದ್ದು ಸಂಘವೇ ಎತ್ತುವ ಹಾಗೆ ಮಾಡಿದೆ ರಾಜ್ಯ ಬಿಜೆಪಿ ಆಡಳಿತ.

ಹುಚ್ಚಗಣಿ ದೇಗುಲದ ನೆಲಸಮಕ್ಕೆ ಸರ್ಕಾರದ ವಿರುದ್ಧ ಸಂಘ ಕಿಡಿ
ಬಿಜೆಪಿ ಆಡಳಿತದಲ್ಲೇ ದೇಗುಲ ನೆಲಸಮ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ನಂಜನಗೂಡಿನ ಹುಚ್ಚಗಣಿ ಗ್ರಾಮದ ದೇವಸ್ಥಾನ ನೆಲಕಚ್ಚಿದೆ. ಮುಂಜಾನೆ ಅಬ್ಬರಿಸಿದ ಜೆಸಿಬಿಯ ಘರ್ಜನೆಗೆ ಪುರಾತನ ದೇಗುಲ ನೆಲಸಮವಾಗಿದೆ. ಬಿಜೆಪಿಯ ಆಡಳಿತದಲ್ಲೇ ಇಂತಹದ್ದೊಂದು ಘಟನೆ ನಡೆದಿರುವುದು ಆರ್​​ಎಸ್​​ಎಸ್​​ ಅನ್ನು ಕೆರಳಿ ಕೆಂಡವಾಗಿಸಿದೆ. ಸುಪ್ರೀಂಕೋರ್ಟ್​​ ಆದೇಶವಿದ್ರೂ ಈವರೆಗೆ ದೇವಸ್ಥಾನ ನೆಲಸಮ ಆಗಿರಲಿಲ್ಲ. ಆದ್ರೆ ಬಿಜೆಪಿ ಸರ್ಕಾರದಲ್ಲಿ ದೇಗುಲ ನೆಲಸಮಕ್ಕೆ RSS ಬೇಸರಗೊಂಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

blank

ತಮ್ಮದೇ ಸರ್ಕಾರ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ
ನಂಜನಗೂಡು ಹುಚ್ಚಗಣಿ ಗ್ರಾಮದ ದೇವಸ್ಥಾನ ನೆಲಸಮ ಮಾಡಿರುವುದಕ್ಕೆ ತಮ್ಮದೇ ಸರ್ಕಾರ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರ ವಿರೋಧ ನಡುವೆಯೂ ದೇಗುಲ ನೆಲಸಮ ಮಾಡಲಾಗಿದೆ. ಇದ್ರಿಂದ ಸರ್ಕಾರದ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಕೇಳಿಬಂದಿದೆ. ಅದೂ ಕೂಡ ಬಿಜೆಪಿ ಸರ್ಕಾರವಿದ್ರೂ ದೇವಸ್ಥಾನ ನೆಲಸಮಕ್ಕೆ ಸಂಘ ತೀವ್ರ ಬೇಸರ ವ್ಯಕ್ತಪಡಿಸಿದೆ.

ನಂಜನಗೂಡು ಹುಚ್ಚಗಣಿ ಗ್ರಾಮದ ದೇವಸ್ಥಾನ ನೆಲಸಮ ಸಿಎಂ ಬೊಮ್ಮಾಯಿಯನ್ನು ಸಂಕಷ್ಟದ ಕಟಕಟೆಗೆ ತಂದು ನಿಲ್ಲಿಸಿದೆ. ದೇಗುಲ ನೆಲಸಮ ಎಷ್ಟರಮಟ್ಟಿಗೆ ಸರಿ ಎಂದಿರುವ ಸಂಘ, ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದೆ. ಪ್ರಶ್ನೆಗಳ ಸುರಿಮಳೆಗೈದಿದೆ.

ಸರ್ಕಾರದ ವಿರುದ್ಧ ಸಂಘ ಕಿಡಿ

ಪ್ರಶ್ನೆ 1 : ಸುಪ್ರೀಂ​ ಆದೇಶವಿದ್ದರೂ ದೇಗುಲ ನೆಲಸಮಗೊಳಿಸಿರಲಿಲ್ಲ, ಈಗ್ಯಾಕೆ ಮಾಡಿದ್ರಿ?
ಪ್ರಶ್ನೆ 2 : ಸುಪ್ರೀಂ ಆದೇಶ ನೀಡಿದ್ದರೆ ಹಗಲಿನ ವೇಳೆ ನೆಲಸಮ ಮಾಡಬಹುದಿತ್ತಲ್ವಾ?
ಪ್ರಶ್ನೆ 3 : ಗ್ರಾಮಸ್ಥರ ವಿರೋಧಿ ನಡೆಯಿಂದ ಬೆಳಗಿನ ಜಾವ ನೆಲಸಮ ಅವಶ್ಯಕತೆ ಇತ್ತಾ?
ಪ್ರಶ್ನೆ 4 : ಪುರಾತನ ದೇವಾಲಯ ನೆಲಸಮಗೊಳಿಸಬಾರದು ಎಂಬ ನಿಯಮ ತಿಳಿದಿಲ್ವಾ?
ಪ್ರಶ್ನೆ 5 : ಪೊಲೀಸರ ಬಿಗಿ ಬಂದೋಬಸ್ತ್​​ನಲ್ಲಿ ನೆಲಸಮ ಮಾಡುವ ಅವಶ್ಯಕತೆ ಇತ್ತಾ?
ಪ್ರಶ್ನೆ 6 : ಹಿಂದೂ ಧರ್ಮದ ಭಾವನೆಗೆ ಬಿಜೆಪಿ ಧಕ್ಕೆ ತರುವುದು ಎಷ್ಟರ ಮಟ್ಟಿಗೆ ಸರಿ? ಅಂತ ಪ್ರಶ್ನೆ ಮಾಡಿದೆ.

ಸುಪ್ರಿಂ ಆದೇಶವಿದ್ದರೂ, ಗ್ರಾಮಸ್ಥರ ವಿರೋಧದ ಹಿನ್ನೆಲೆ ದೇಗುಲ ನೆಲಸಮ ಮಾಡಿರಲಿಲ್ಲ. ಆದ್ರೆ ಬಿಜೆಪಿ ಆಡಳಿತದಲ್ಲಿ ದೇಗುಲವನ್ನು ನಿರ್ಮಾಮ ಮಾಡಲಾಗಿದೆ. ಇದು ಸಂಘದ ಅಸಮಾಧಾನಕ್ಕೆ ಕಾರಣವಾಗಿದ್ದು, ಸದ್ಯ ಸಿಎಂ ಈಗ ಇದನ್ನ ಹೇಗೆ ನಿಭಾಯಿಸ್ತಾರೆ? ಸಂಘದ ಪ್ರಶ್ನೆಗಳಿಗೆ ಏನಂತ ಉತ್ತರಿಸ್ತಾರೋ ಕಾದುನೋಡಬೇಕಿದೆ.

ವಿಶೇಷ ಬರಹ: ಗಣಪತಿ, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​

Source: newsfirstlive.com Source link