ಆಗುಂಬೆ ಘಾಟ್​ನಲ್ಲಿನ ಅಭಿವೃದ್ಧಿ ಕಾರ್ಯ.. ಆಪತ್ತಿನಲ್ಲಿ ಕಾಳಿಂಗ ಸರ್ಪದ ಸಂತತಿ!

ಆಗುಂಬೆ ಘಾಟ್​ನಲ್ಲಿನ ಅಭಿವೃದ್ಧಿ ಕಾರ್ಯ.. ಆಪತ್ತಿನಲ್ಲಿ ಕಾಳಿಂಗ ಸರ್ಪದ ಸಂತತಿ!

ಶಿವಮೊಗ್ಗ: ಕಾಳಿಂಗ ಸರ್ಪ. ಹಾವುಗಳ ರಾಜಾ ಎಂದೇ ಗುರುತಿಸಲಾಗುವ ಇದರ ಹೆಸರು ಕೇಳಿದ್ರೆ, ಎಂತಹವರ ಎದೆಯೂ ಒಂದು ಕ್ಷಣ ಝಲ್​ ಎನ್ನುತ್ತದೆ. ತನ್ನ ಆಕಾರ ಹಾಗೂ ವಿಷದಿಂದಲೇ ಪ್ರಸಿದ್ಧಿ ಪಡೆದಿರೋ ಕಾಳಿಂಗ ಸರ್ಪ ಸಂತತಿ ಇದೀಗ ಅಪಾಯದಲ್ಲಿದೆ.

blank

ಆಪತ್ತಿನಲ್ಲಿ ಹಾವುಗಳ ರಾಜಾ ಕಾಳಿಂಗ ಸರ್ಪದ ಸಂತತಿ!
ತನ್ನ ಕಾರ್ಕೋಟಕ ವಿಷ, ಎತ್ತರ ಮತ್ತು ಆಕರ್ಷಕ ದೇಹದಾಕಾರಿಂದ್ಲೇ, ಕಾಳಿಂಗ ಸರ್ಪದ ಹೆಚ್ಚು ಪ್ರಖ್ಯಾತಿ ಪಡೆದಿದೆ. 1836ರಲ್ಲಿ ಬೆಳಕಿಗೆ ಬಂದ ಕಾಳಿಂಗ ಸರ್ಪದ ಬಗ್ಗೆ ಹಲವಾರು ಅನುಮಾನಗಳಿತ್ತು. ಕರ್ನಾಟಕವನ್ನೊಳಗೊಂಡ ಪಶ್ಚಿಮಘಟ್ಟ, ಆಂಧ್ರಪ್ರದೇಶವನ್ನೊಳಗೊಂಡ ಪೂರ್ವಘಟ್ಟ, ಇಂಡೋನೇಷ್ಯಾ ಹಾಗೂ ಫಿಲಿಫೈನ್ಸ್​ನ ಲೂಸಾನ್​ನಲ್ಲಿ ಒಟ್ಟು 4 ಪ್ರಬೇಧಗಳು ಇವೆ ಎಂಬುದು ಸತತ 185 ವರ್ಷದ ಸಂಶೋಧನೆ ಹಾಗೂ ಅಧ್ಯಯನದಿಂದ ದೃಢಪಟ್ಟಿದೆ. ಆದ್ರೆ, ಇಷ್ಟೆಲ್ಲಾ ವಿಶೇಷತೆ ಹೊಂದಿರೋ ಕಾಳಿಂಗ ಸರ್ಪದ ಪ್ರಬೇಧ ಇದೀಗ ಅಳಿವಿನ ಅಂಚಿನಲ್ಲಿದೆ. ಅದಕ್ಕೆ ಕಾರಣ ಅಭಿವೃದ್ಧಿ.

blank

ಕಾಳಿಂಗ ಫೌಂಡೇಷನ್​ನ ಗೌರಿಶಂಕರ್​ ಅಭಿಪ್ರಾಯ
ಹೌದು. ರಸ್ತೆ, ಜಲಾಶಯ ನಿರ್ಮಾಣ ಸೇರಿದಂತೆ ಆಗುಂಬೆ ಘಾಟ್​ನಲ್ಲಿ ನಡೆಯುತ್ತಿರೋ ಅಭಿವೃದ್ಧಿ ಕಾರ್ಯಗಳಿಂದ ಕಾಳಿಂಗ ಸರ್ಪದ ಸಂತತಿಗೆ ಅಪಾಯ ಎದುರಾಗೋ ಸಾಧ್ಯತೆ ಇದೆಯಂತೆ. ಹೀಗಂತ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಮಳೆಕಾಡಿನಲ್ಲಿ ಕಾಳಿಂಗ ಸರ್ಪದ ಕುರಿತು ಕಳೆದ 8 ವರ್ಷದಿಂದ ಅಧ್ಯಯನ ನಡೆಸ್ತಿರೋ ಕಾಳಿಂಗ ಫೌಂಡೇಷನ್​ನ ಗೌರಿಶಂಕರ್​ ಅಭಿಪ್ರಾಯಪಟ್ಟಿದ್ದಾರೆ.

blank

ಇನ್ನು, ಅಳವಿನಂಚಿನಲ್ಲಿರೋ ಕಾಳಿಂಗದ ರಕ್ಷಣೆಗೆ ಬೇರೆ ಬೇರೆ ಜಾತಿಯ ಹಾವುಗಳ ಅಗತ್ಯ ಇದೆಯಂತೆ. ಅಲ್ಲದೆ ರೆಡಿಯೋ ಟೆಲಿಮೆಂಟ್ರಿ ಮೂಲಕ ಕಾಳಿಂಗ ಸರ್ಪದ 4 ಪ್ರಬೇಧದ ಬಗ್ಗೆ ಅಧ್ಯಯನ ಕೈಗೊಳ್ಳಲು ನಿರ್ಧರಿಸಲಾಗಿದೆ. ಥೈಲ್ಯಾಂಡ್​ ದೇಶದಲ್ಲಿ ಕಾಳಿಂಗ ಸರ್ಪ ಕಚ್ಚಿದ್ರೆ, ಅದಕ್ಕೆ ಮದ್ದಿದೆ. ಆದ್ರೆ, ನಮ್ಮ ದೇಶದ ಕಾಳಿಂಗ ಸರ್ಪ ಕಚ್ಚಿದರೆ ಅದಕ್ಕೆ ಮದ್ದೇ ಇಲ್ಲ.

ಒಟ್ಟಾರೆ ಜೀವ ರಕ್ಷಕ ಔಷಧ ಸಸ್ಯಗಳ ಜೊತೆಗೆ ಅಪರೂಪದ ಕಾಳಿಂಗ ಸರ್ಪದ ಪ್ರಬೇಧವನ್ನು ತನ್ನೊಡಲೊಳಗೆ ಇಟ್ಟುಕೊಂಡಿರೋ ಪಶ್ಚಿಮಘಟ್ಟದ ರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ. ಈ ಮೂಲಕ ಅಳವಿನಂಚಿನಲ್ಲಿರೋ ಕಾಳಿಂಗ ಸರ್ಪದ ಸಂತತಿಯನ್ನು ಅಭಿವೃದ್ಧಿಪಡಿಸಿ, ಅವುಗಳ ಸಂತತಿಯನ್ನು ಬೆಳೆಸಬೇಕಿದೆ.

ವಿಶೇಷ ಬರಹ: ಪ್ರಸನ್ನ, ನ್ಯೂಸ್​ ಫಸ್ಟ್​, ಶಿವಮೊಗ್ಗ

blank

Source: newsfirstlive.com Source link