ನಂಜನಗೂಡು ಕಾಂಗ್ರೆಸ್​​ ಟಿಕೆಟ್​​ ಫೈಟ್​​​; ಎಚ್​​.ಸಿ ಮಹದೇವಪ್ಪ, ಕಳಲೆ ಕೇಶವಮೂರ್ತಿ ನಡುವೆ ಭಾರೀ ಪೈಪೋಟಿ

ನಂಜನಗೂಡು ಕಾಂಗ್ರೆಸ್​​ ಟಿಕೆಟ್​​ ಫೈಟ್​​​; ಎಚ್​​.ಸಿ ಮಹದೇವಪ್ಪ, ಕಳಲೆ ಕೇಶವಮೂರ್ತಿ ನಡುವೆ ಭಾರೀ ಪೈಪೋಟಿ

ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲೀಗ ಟಿಕೆಟ್​​ಗಾಗಿ ಮಾಜಿ ಸಚಿವ ಎಚ್​​.ಸಿ ಮಹದೇವಪ್ಪ ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನಡುವೆ ಪೈಪೋಟಿ ಶುರುವಾಗಿದೆ. ತಿ. ನರಸೀಪುರ ವಿಧಾನಸಭಾ ಕ್ಷೇತ್ರವನ್ನು ತನ್ನ ಪುತ್ರನಿಗೆ ಬಿಟ್ಟುಕೊಟ್ಟ ಎಚ್​.ಸಿ ಮಹದೇವಪ್ಪ ನಂಜನಗೂಡಿನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಹೀಗಾಗಿ ಇದೇ ಕ್ಷೇತ್ರದಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಂತು ಪರಾಜಿತಗೊಂಡಿದ್ದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅಸಮಾಧಾನಗೊಂಡಿದ್ದಾರೆ.

ಒಮ್ಮೆ ವಿಧಾನಸೌಧದ ಮೆಟ್ಟಿಲು ಹತ್ತುವುದಕ್ಕೇ ಮಾಜಿ ಸಿಎಂ ಸಿದ್ದರಾಮಯ್ಯನವರೇ ಕಾರಣ. ಮುಂದಿನ ಚುಣಾವಣೆಯಲ್ಲಿ ನನಗೆ ಟಿಕೆಟ್​​ ನೀಡಲಿದ್ದಾರೆ ಎಂದು ಸಿದ್ದರಾಮಯ್ಯರನ್ನೇ ಸಂಪೂರ್ಣ ನಂಬಿದ್ದೇನೆ. ಟಿಕೆಟ್​​ ವಿಚಾರದಲ್ಲಿ ಸಿದ್ದರಾಮಯ್ಯ ಅವರೇ ಸುಪ್ರೀಂ. ನೂರಕ್ಕೆ ನೂರು ಪರ್ಸೆಂಟ್​​​ ನನ್ನನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ತನ್ನ ಕ್ಷೇತ್ರವನ್ನು ಪತ್ರನಿಗೆ ಬಿಟ್ಟುಕೊಟ್ಟು ಮಾಜಿ ಸಚಿವ ಎಚ್​​.ಸಿ ಮಹದೇವಪ್ಪ ಈ ಬಾರಿ ನಂಜನಗೂಡಿನಿಂದ ಎಲೆಕ್ಷನ್​​ ಕಂಟೆಸ್ಟ್​​ ಮಾಡೋಕೆ ರೆಡಿಯಾಗಿದ್ದಾರೆ. ಆದ್ದರಿಂದಲೇ ಈ ಕ್ಷೇತ್ರದಲ್ಲಿ ನಿಂತು ಒಮ್ಮೆ ಗೆದ್ದಿದ್ದ ಜಿ ಶಾಸಕ ಕಳಲೆ ಕೇಶವಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚೌತಿಯ ದಿನದಂದೇ ದೇವಸ್ಥಾನ ನೆಲಸಮ-ತಮ್ಮದೇ ಸರ್ಕಾರ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

Source: newsfirstlive.com Source link